Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಮಗಳು ಅಂತವಳಲ್ಲ, ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡ್ತಾರೆ : ನೇಹಾ ತಾಯಿ ಹೇಳಿಕೆ

---Advertisement---

ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ ಕೂಡ ಹೇಳಿದ್ದಾರೆ. ಇದೀಗ ಫಯಾಜ್ ಹಾಗೂ ನೇಹಾರ ಫೋಟೋಗಳು ಓಡಾಡುತ್ತಿವೆ. ಇದಕ್ಕೆ ನೇಹಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನ ಮಗಳು ಹೊಲಸು ಕೆಲಸ ಮಾಡಲ್ಲ. ಬೆನ್ನು ಬಿದ್ದಿದ್ದಾನೆ ಎಂದು ಹೇಳಿದ್ದಳು. ಕ್ಷಮೆ ತೆಗೆದುಕೊಂಡು ನಾನೇನು ಮಾಡಲಿ. ಮಗಳು ಕಾಲೇಜಿಗೆ ಹೋಗಿತ್ತಿದ್ದಳು. ಬೋಲ್ಡ್ ಆಗಿದ್ದಳು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಮದುವೆ ಬಗ್ಗೆ ಮಾತನಾಡಿರಲಿಲ್ಲ. ಫೋಟೋವನ್ನು ಹೇಗೆ ಬೇಕೋ ಹಾಗೇ ಎಡಿಟ್ ಮಾಡಿಕೊಳ್ಳಬಹುದು. ಅವಳು ಚೆನ್ನಾಗಿ ಸ್ಟಡಿ ಮಾಡುತ್ತಿದ್ದಳು. ಮಗಳಿಗೆ ಶಾಂತಿ ಸಿಗಬೇಕು ಎಂದರೆ ಅವನು ಬದುಕಬಾರದು. ಅವನನ್ನು ಜನರ ಕೈಗೆ ಕೊಡಿ.

ಕಾಲೇಜ್ ಗೆ ಮೂರು ಗೇಟ್ ಇದೆ‌. ಯಾರಾದರೂ ಬರುತ್ತಾರೆ ಹೋಗುತ್ತಾರೆ. ಘಟನೆ ನನ್ನ ಕಣ್ಣ ಮುಂದೆ ನಡೆದಿದೆ. ಹತ್ತು ಹೆಜ್ಜೆಯಷ್ಟೇ ನಾನು ದೂರ ಇದ್ದೆ. ಕಲಿಯುವುದಕ್ಕೆ ಕಳುಹಿಸಿದ್ರೆ ಹೆಣವಾಗಿ ಬರುತ್ತಾರೆ ಅಂದ್ರೆ ಹೇಗೆ. ಹೆಣ್ಣು ಮಕ್ಕಳಿಗೆ ಸೇಫ್ಟಿನೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಮಗನ ತಪ್ಪನ್ನು ಕ್ಷಮಿಸಬಾರದು ಎಂದು ಹೇಳಿದ ಮುಮ್ತಾಜ್, ನೇಹಾಳನ್ನು ಬಹಳ ಕ್ರೂರವಾಗಿ ಕೊಂದಿದ್ದಾನೆ. ಇಂಥ ಅನ್ಯಾಯವಾಗಬಾರದು. ಆ ಮಗು ಅದೆಷ್ಟು ವಿಲವಿಲ ಅಂತ ಒದ್ದಾಡಿತೋ. ಅವರಿಬ್ಬರು ಫ್ರೆಂಡ್ಸ್ ಆಗಿದ್ದರು. ಅವಳು ಲವ್ ಮಾಡುತ್ತಿದ್ದಾಳೆ ಮಮ್ಮಿ ಅಂತ ನನ್ನ ಬಳಿ ಹೇಳಿಕೊಂಡಿದ್ದ ಎಂದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment