ಸೌತ್ ಸೂಪರ್ ಸ್ಟಾರ್ ವಿಕ್ರಮ್ ಗೆ ಹೃದಯಾಘಾತವಾಗಿರಲಿಲ್ಲವಾ..? ಹಾಗಾದ್ರೆ ಆಗಿದ್ದೇನು..? ಮ್ಯಾನೇಜರ್ ಹೇಳಿದ್ದೇನು..?

ನವದೆಹಲಿ: ದಕ್ಷಿಣ ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್ ಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿದ್ದು, ಅವರನ್ನು ಚೆನ್ನೈನ ಕೌವೆರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಒಂದಷ್ಟು ಊಹಾಪೋಹಗಳು ಹರಡಿವೆ. ಇದೀಗ ವಿಕ್ರಂ ಅವರ ಮ್ಯಾನೇಜರ್ ಸೂರ್ಯನಾರಾಯಣನ್ ಟ್ವೀಟ್ ಮಾಡಿ ಅಧಿಕೃತವಾಗಿ ಮಾಹಿತಿ ತಿಳಿಸಿದ್ದಾರೆ.

ವಿಕ್ರಮ್ ಅವರ ಮ್ಯಾನೇಜರ್ ಆರೋಗ್ಯದ ಬಗ್ಗೆ ಗಾಳಿ ಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ. ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ಚಿಯಾನ್ ವಿಕ್ರಮ್ ಅವರಿಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಕಂಡು ಬಂದಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳು ಹೇಳುವಂತೆ ಅವರಿಗೆ ಹೃದಯಾಘಾತವಾಗಿರಲಿಲ್ಲ. ಈ ರೀತಿಯ ವದಂತಿಗಳನ್ನು ಕೇಳಿ ನಮಗೆ ನೋವಾಗಿದೆ.

ನಮ್ಮ ಪ್ರೀತಿಯ ಚಿಯಾನ್ ಈಗ ಚೆನ್ನಾಗಿದ್ದಾರೆ. ಇನ್ನು ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ನಮ್ಮ ಈ ಹೇಳಿಕೆ ಸ್ಪಷ್ಟತೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಸುಳ್ಳು ವದಂತಿಗಳನ್ನು ನಿಲ್ಲಿಸುತ್ತೀರಿ ಎಂದು ನಂಬುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಅವರ ಮ್ಯಾನೇಜರ್ ಹಂಚಿಕೊಂಡ ಮಾಹಿತಿಯ ಪ್ರಕಾರ, ವಿಕ್ರಮ್ ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಚಿಯಾನ್ ಅಭಿಮಾನಿಗಳು ವದಂತಿಗಳನ್ನು ನಂಬಬೇಡಿ ಮತ್ತು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಇಂದು ಸಂಜೆ ಚೆನ್ನೈನಲ್ಲಿ ನಡೆದ ದಂತಕಥೆ ಮಣಿರತ್ನಂ ಅವರ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್‌ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸೂಪರ್‌ಸ್ಟಾರ್ ಹಾಜರಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಅವರು ಹಾಜರಾಗಲು ಸಾಧ್ಯವಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *