Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಪಜಾತಿ ಯಾವುದೇ ಇದ್ದರು ವೀರಶೈವ ಎಂದೇ ಹೇಳಬೇಕು : ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು..?

---Advertisement---

ದಾವಣಗೆರೆ: ಎಲ್ಲಾ ಜಾತಿಗಳಲ್ಲೂ ಉಪಜಾತಿಗಳು ಅನ್ನೋದು ಹೆಚ್ಚಾಗಿನೆ ಇದಾವೆ. ಜಾತಿಗಣತಿ ಕೂಡ ಆರಂಭವಾಗಿದ್ದು, ಈ ವೇಳೆ ಉಪಜಾತಿ ಹೇಳುವುದಕ್ಕಿಂತ ಪ್ರಮುಖ ಜಾತಿಯನ್ನ ಹೇಳುವುದರಿಂದ ಜನಸಂಖ್ಯೆ ಹೆಚ್ಚಾಗಿ ತೋರಿಸಲಾಗುತ್ತದೆ. ವೀರಶೈವ ಲಿಂಗಾಯತರು ಕೂಡ ಈಗ ಅದೇ ತೀರ್ಮಾನವನ್ನು ಕೈಗೊಂಡಿದ್ದಾರೆ.

ದಾವಣಗೆರೆಯ ರೇಣುಕಾ ಮಂದಿರದಲ್ಲಿ ಮೂರು ದಿನಗಳ ಕಾಲ ವೀರಶೈವ ಲಿಂಅಗಯತ ಶಿವಾಚಾರ್ಯರ ಶೃಂಗಸಭೆ ನಡೆದಿದೆ. ಈ ಸಮಾರೋಪ ಸಮಾರಂಭದಲ್ಲಿ 12 ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಅದರಲ್ಲಿ ಜಾತಿಗಣತಿಗೆಂದು ಬಂದಾಗ ಉಪಜಾತಿ ಹೇಳದೆ ಕೇವಲ ವೀರಶೈವ ಎಂದು ಹೇಳಬೇಕು ಎಂಬುದು ಕೂಡ ಒಂದು.

ಇದೆ ವೇಳೆ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ವೀರಶೈವ ಧರ್ಮ ಸ್ಥಾಪನೆ ಆಗಿದೆ. ಆಧುನಿಮ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ. ಧಾರ್ಮಿನ ಕ್ಷೇತ್ರ ಹೊರತಾಗಿಲ್ಲ. ಸಂಸ್ಕಾರ, ಸಂಸ್ಕೃತಿ ಕೊಟ್ಟಿದ್್ಉ ವೀರಶೈವ ಧರ್ಮ. ವೀರಶೈ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಸಿಕ್ಕಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ದೃತಿಗೆಡಬೇಕಾಗಿಲ್ಲ. ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ.

ವೀರಶೈವ ಲಿಂಗಾಯಾತ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ ಇದಾಗಿದೆ. ಎಲ್ಲಾ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೆ, ವೀರಶೈವ ಲಿಂಗಾಯತರನ್ನು ಒಂದು ಮಾಡುವುದು ಕಷ್ಟವಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂಬ ಸಂದೇಶ ಸಾರಿದರು. ವೀರಶೈವ, ಲಿಂಗಾಯತ ಬೇರೆ ಎಂದವರು ಚುನಾವಣೆಯಲ್ಲಿ ಸೋತರು. ಈಗ ಪಂಚಪೀಠಗಳು ಒಂದಾಗಿವೆ. ಇದು ಕ್ಷಣಿಕ ಖುಷಿ ಆಗಬಾರದು ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment