ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ, ಜು. 07: ಬಿಜೆಪಿಯ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ ಆದೇಶ ಮೇರೆಗೆ ಜಿಲ್ಲಾ ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ರಾದ ಕೆ.ಎಂ.ಪರಶುರಾಮ್‍ರವರು ಜಿಲ್ಲಾ ಎಸ್.ಸಿ.ಮೋರ್ಚಾಕ್ಕೆ ಈ ಕೆಳಕಂಡವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ಇದರಲ್ಲಿ 9 ಜನ ಉಪಾಧ್ಯಕ್ಷರು, ಇಬ್ಬರು ಪ್ರಧಾನ ಕಾರ್ಯದರ್ಶಿಗಳು, 9 ಜನ ಕಾರ್ಯದರ್ಶಿಗಳು ಹಾಗೂ 10 ಜನ ಕಾರ್ಯಕಾರಿಣಿ ಸದಸ್ಯರು ನೇಮಕವಾಗಿದ್ದಾರೆ.

ಬಿಜೆಪಿ ಚಿತ್ರದುರ್ಗ ಜಿಲ್ಲಾ ಎಸ್.ಸಿ ಮೋರ್ಚಾದ ಉಪಾಧ್ಯಕ್ಷರಾಗಿ ಹೊಳಲ್ಕೆರೆಯ ಶಿವಕುಮಾರ್, ಚಳ್ಳಕೆರೆಯ ದಯಾನಂದ್.ಡಿ, ಚಿತ್ರದುರ್ಗದ ಧನಂಜಯ್, ಮೊಳಕಾಲ್ಮೂರಿನ ಚಂದ್ರು, ಹಿರಿಯೂರಿನ ರವಿಶಂಕರ್, ಹೊಸದುರ್ಗದ ರಂಗಸ್ವಾಮಿ, ಚಿತ್ರದುರ್ಗ ಗ್ರಾಮಾಂತರ ರಾಜಣ್ಣ, ಶಿವದತ್, ಮೊಳಕಾಲ್ಮೂರಿನ ಜಗದೀಶ್ ನಾಯ್ಕ ಪ್ರಧಾನ ಕಾರ್ಯದರ್ಶಿಗಳಾಗಿ ಮೊಳಕಾಲ್ಮೂರಿನ ನಾಗರಾಜ್. ಹೆಚ್,ಚಿತ್ರದುರ್ಗದ ಚೇತನ್ ಕುಮಾರ್.ಆರ್ ಕಾರ್ಯದರ್ಶಿಗಳಾಗಿ ಚಿತ್ರದುರ್ಗದ ಪ್ರದೀಪ್, ಶಿವಪ್ರಕಾಶ್ ನಾಯ್ಕ್, ಪ್ರಸನ್ನ, ಹೊಸದುರ್ಗದ ಚಿದಾನಂದಮೂರ್ತಿ, ಚಳ್ಳಕೆರೆಯ ಸುರೇಶ್, ಹಿರಿಯೂರಿನ ಯಶೋಧರ, ಹೊಳಲ್ಕೆರೆಯ ಪ್ರಕಾಶ್, ವೆಂಕಟೇಶ್, ನಾಯಕನಹಟ್ಟಿಯ ಮಲ್ಲಿಕಾರ್ಜನ್, ಕಾರ್ಯಕಾರಿಣಿ ಸದಸ್ಯರಾಗಿ ಚಿತ್ರದುರ್ಗದ ದುರುಗೇಶ್, ತಿಪ್ಪೇಸ್ವಾಮಿ, ಚಿತ್ರದುರ್ಗ ಗ್ರಾಮಾಂತರ ಮಂಜುನಾಥ್, ಹಿರಿಯೂರು ಪರಮೇಶ್ವರಪ್ಪ, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಚಳ್ಳಕೆರೆ ಓಬಳೇಶ್, ನಾಗರಾಜ್, ಹೊಳಲ್ಕೆರೆ ಕುಮಾರ್, ಪರಶುರಾಮ್ ಭರಮಸಾಗರ ಅಂಜಿನಪ್ಪ ನೇಮಕಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಕೆ.ಎಂ.ಪರಶುರಾಮ್ ತಿಳಿಸಿದ್ದಾರೆ.
















