in ,

ಕರ್ನಾಟಕ ವಿಧಾನಸಭಾ ಚುನಾವಣೆ : ಬಿಜೆಪಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ :  ಆ ಎರಡು ಸಮುದಾಯಗಳ ಮೇಲೆ ಮೇಲೆ ಕಾಂಗ್ರೆಸ್ ಕಣ್ಣು…?

suddione whatsapp group join

 

ಸುದ್ದಿಒನ್ ಡೆಸ್ಕ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪಣ ತೊಟ್ಟಿವೆ. ಈ ನಿಟ್ಟಿನಲ್ಲಿ ಈ ಬಾರಿಯೂ ಜಾತಿ ರಾಜಕಾರಣ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಇದರೊಂದಿಗೆ ಪ್ರಬಲ ಮತಬ್ಯಾಂಕ್ ಎಂಬ ಹಣೆಪಟ್ಟಿ ಪಡೆದಿರುವ ಲಿಂಗಾಯತರು ಮತ್ತು ಒಕ್ಕಲಿಗರನ್ನು ತಮ್ಮತ್ತ ಸೆಳೆಯಲು ಉಭಯ ಪಕ್ಷಗಳು ಯತ್ನಿಸುತ್ತಿವೆ.

ಬಿಎಸ್ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವುದರಿಂದ ಸಹಜವಾಗಿಯೇ ಅವರೆಲ್ಲ ಬಿಜೆಪಿಯತ್ತ ವಾಲುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಲಿಂಗಾಯತರನ್ನು  ತಮ್ಮತ್ತ ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಬಹುತೇಕ ಟಿಕೆಟ್ ನೀಡಲಾಗಿದೆ.

ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಕಾಂಗ್ರೆಸ್ ಪಕ್ಷವು ಏಪ್ರಿಲ್ 6 ರಂದು ಎರಡನೇ ಹಂತದಲ್ಲಿ 42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ಪಕ್ಷ ಒಟ್ಟು 166 ಮಂದಿಗೆ ಟಿಕೆಟ್ ನೀಡಿದ್ದು, ಈ ಪೈಕಿ 43 ಮಂದಿ ಲಿಂಗಾಯತ ಸಮುದಾಯದವರಿಗೆ ಮಣೆ ಹಾಕಿದೆ.

224 ವಿಧಾನಸಭಾ ಸ್ಥಾನಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯದ 43 ಜನರಿಗೆ ಟಿಕೆಟ್ ನೀಡಿತ್ತು. ಈ ಬಾರಿ 166 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದರೂ ಈಗಾಗಲೇ ಲಿಂಗಾಯತ ಸಮುದಾಯದ 43 ಮಂದಿಗೆ ಟಿಕೆಟ್ ನೀಡಿರುವುದು ಗಮನಾರ್ಹ.

ಕರ್ನಾಟಕ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗದೇ ಇರುವುದನ್ನು ಕಾಂಗ್ರೆಸ್ ಬಳಸಿಕೊಳ್ಳಲು ಯತ್ನಿಸುತ್ತಿದೆ.

ಅದಕ್ಕಾಗಿಯೇ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರು ಸಭೆ ನಡೆಸಿದ್ದರು. 55 ಸ್ಥಾನಗಳನ್ನು ತಮ್ಮ ಸಮುದಾಯಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷವು ಅವರಿಗೆ ಇದುವರೆಗೆ 43 ಸ್ಥಾನಗಳನ್ನು ಹಂಚಿಕೆ ಮಾಡಿರುವುದನ್ನು ನೋಡಿದರೆ ಒಟ್ಟು 55 ಸ್ಥಾನಗಳನ್ನು ಹಂಚಿಕೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಈಗಾಗಲೇ ಲಿಂಗಾಯತರು ತಮ್ಮ ಪಕ್ಷದೊಂದಿಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಲಿಂಗಾಯತ ಮುಖಂಡ ಈಶ್ವರ ಖಂಡ್ರೆ ಹೇಳಿದ್ದಾರೆ.

1990ರ ದಶಕದಿಂದಲೂ ಲಿಂಗಾಯತರಿಗೆ ಬಿಜೆಪಿ ಆದ್ಯತೆ ನೀಡಿದೆ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಇದುವರೆಗೂ ಪ್ರಕಟಿಸಿಲ್ಲ. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಲಿಂಗಾಯತರಿಗೆ 55 ಸ್ಥಾನಗಳನ್ನು ನೀಡಿತ್ತು. ಆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ 104 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆ ಸಂದರ್ಭದಲ್ಲಿ
ಬಿಜೆಪಿ 55 ಸ್ಥಾನಗಳನ್ನು ಲಿಂಗಾಯತರಿಗೆ ಮೀಸಲಿಟ್ಟರೆ, ಅವರಲ್ಲಿ 40 ಮಂದಿ ಗೆದ್ದಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ 43 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, 17 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದರು.

ಇದೇ ರೀತಿಯಾಗಿ ಈ ಬಾರಿ ಒಕ್ಕಲಿಗರಿಗೂ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುತ್ತಿದೆ. ಇದುವರೆಗೆ 166 ಕ್ಷೇತ್ರಗಳಿಗೆ ಟಿಕೆಟ್‌ಗಳನ್ನು ಹಂಚಿಕೆ ಮಾಡಿದ್ದು, ಈ ಪೈಕಿ 29 ಟಿಕೆಟ್‌ಗಳನ್ನು ಒಕ್ಕಲಿಗ ಸಮುದಾಯದ ಮುಖಂಡರಿಗೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕದಲ್ಲಿ ಲಿಂಗಾಯತರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗರು ಎರಡನೇ ಸ್ಥಾನದಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಇದೇ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದು ವೇಳೆ ಕಾಂಗ್ರೆಸ್ ಪಕ್ಷ ಗೆದ್ದರೆ ನಾನೇ  ಸಿಎಂ ಸ್ಥಾನದ ಆಕಾಂಕ್ಷಿ ಎಂದು ಈಗಾಗಲೇ ಬಿಂಬಿಸಿಕೊಂಡಿದ್ದಾರೆ.

ಇನ್ನೂ ಎಸ್‌ಸಿಗಳಿಗೆ 36 ಸ್ಥಾನಗಳನ್ನು ಮೀಸಲಿಟ್ಟಿದ್ದರೆ, ಅವರು ರಾಜ್ಯದ ಜನಸಂಖ್ಯೆಯ ಶೇಕಡಾ 17 ರಷ್ಟಿದ್ದಾರೆ. 7ರಷ್ಟು ಎಸ್ಟಿಗಳಿಗೆ 15 ಸೀಟುಗಳಲ್ಲಿ ಮೀಸಲಾತಿ ಇದೆ. ಕಾಂಗ್ರೆಸ್ ಪಕ್ಷವು ಇದುವರೆಗೆ 11 ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಬಿ.ಸಿ., ಕುರುಬ, ಈಡಿಗ ಮತ್ತಿತರ ಸಾಮಾಜಿಕ ಪಂಗಡಕ್ಕೆ ಸೇರಿದ ನಾಯಕರಿಗೆ 40 ಟಿಕೆಟ್ ಹಂಚಿಕೆ ಮಾಡಿ, ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹವಣಿಕೆಯಲ್ಲಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮುಂದಿನ 5 ದಿನಗಳಲ್ಲಿ ದೇಶದ ಹಲವೆಡೆ ತಾಪಮಾನ ಏರಿಕೆ ಸಾಧ್ಯತೆ

1973 ವರ್ಷದ ಪ್ರಾಜೆಕ್ಟ್ ಟೈಗರ್ ಗೆ 50 ವರ್ಷ : ವರದಿ ರಿಲೀಸ್ ಮಾಡಿ ಮೋದಿ ಹೇಳಿದ್ದೇನು..?