Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಳಗೆರೆ ಗ್ರಾಮದಲ್ಲಿ ಶ್ರೀ ವೈಭವದಿಂದ ಕಾಟಂಲಿಂಗೇಶ್ವರ ಸ್ವಾಮಿ ಗೋಪುರ ಕಳಸ ಸ್ಥಾಪನೆ, ವಿಗ್ರಹ ಪ್ರತಿಷ್ಠಾಪನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮೇ. 03 : ತಾಲೂಕಿನ ಬೆಳೆಗೆರೆ ಗ್ರಾಮದಲ್ಲಿ ಮೇ.2 ರಿಂದ ಮೂರು ದಿನಗಳ ಕಾಲ ಶ್ರೀ ಕಾಟಮಲಿಂಗೇಶ್ವರ ಸ್ವಾಮಿಯ ನೂತನ ದೇವಸ್ಥಾನದ ಗೋಪುರ ಕಳಸ ಸ್ಥಾಪನೆ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ತಾಲ್ಲೂಕಿನ ಗೋಶಿಕೆರೆ ಪೀಠಾಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಬೆಳಗೆರೆ ಶ್ರೀ ಬಿಎಂ.ಮುರುಳಿಧರ ಶಾಸ್ತ್ರೀಗಳು,ಶ್ರೀ ವೀರಭದ್ರಯ್ಯ ಸ್ವಾಮೀಜಿ, ಶ್ರೀ ಬಿ.ಎಂ. ಶ್ರೀಕಂಠ ಶಾಸ್ತ್ರೀಗಳ ಸಾನಿಧ್ಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವದ ಧಾರ್ಮಿಕ ಪೂಜಾ ವಿಧಿವಿದಾನಗಳು ಜರುಗಿದವು.

ಶನಿವಾರ ಬೆಳಗ್ಗೆ 8 ಗಂಟೆಗೆ ಸ್ವಾಮಿಯನ್ನು ಗಂಗಾಪೂಜೆಗೆ ಕರೆತಂದು ಗಂಗ ಪೂಜೆ ‌ಬಳಿಕ ಹಿರಿಯೂರು ತಾಲೂಕಿನ ಮುಂಗಸವಳ್ಳಿ ಗ್ರಾಮದ ಶ್ರೀ ದೊಡ್ಡ ತಿಮ್ಮಪ್ಪಸ್ವಾಮಿ, ಶ್ರೀ ಸಣ್ಣತಿಮ್ಮಪ್ಪ ಸ್ವಾಮಿ, ಶ್ರೀ ಕಾಟಮಲಿಂಗೇಶ್ವರಸ್ವಾಮಿ, ಶ್ರೀ ವೀರಚಿಕ್ಕಣ್ಣಸ್ವಾಮಿ, ಶ್ರೀ ಗೊಲ್ಲಾಳಮ್ಮದೇವಿ, ಶ್ರೀ ಕುಕ್ವಾಡೇಶ್ವರಿ ದೇವಿ, ಬೆಳೆಗೆರೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಮಾರಿಕಾಂಬದೇವಿ, ನಾರಾಯಣಪುರ ಶ್ರೀ ಆಂಜನೇಯ ಸ್ವಾಮಿ ದೇವರುಗಳನ್ನು ಬೆಳೆಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಟಮಲಿಂಗೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಕರೆತರಲಾಯಿತು ವಿವಿಧ ಹೂವುಗಳಿಂದ ದೇವರುಗಳಿಗೆ ಅಲಂಕಾರ ಮಾಡಲಾಯಿತು

ನಂತರ ದೇವರ ಪ್ರಾರ್ಥನೆ, ಮಹಾಗಣಪತಿ ಪೂಜೆ,ಸ್ವಸ್ತಿ ಪುಣ್ಯಾಹ, ವಾಚನ, ಪಂಚಗವ್ಯ ವಿಧಿ, ದೇವನಾಂದಿ, ಋತ್ವಿಕ್‌ ವರ್ಣ, ಕಂಕಣ ದೀಕ್ಷೆ, ಆದಿವಾಸನಗಳು, ವಾಸ್ತು, ರಕ್ಷೋಘ್ನ ಹೋಮ ಮತ್ತು ಇತರೆ ಪೂಜೆ, ಭಜನೆ ಕಾರ್ಯಕ್ರಮ ಜರುಗಿದವು. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಗೋಪುರ ಕಳಸ ಸ್ಥಾಪನೆ, ವಿಗ್ರಹ ಪ್ರತಿಷ್ಠಾಪನೆ, ಪೂರ್ಣಹುತಿ, ಬಿಂಬದರ್ಶನ, ನೇತ್ರೋನ್ಮಿಲನ ಬಳಿಕ ಮಹಾಮಂಗಳಾರತಿ. ನಡೆಯಿತು. ಗೋಪುರ ಕಳಸ ಹಾಗೂ ವಿಗ್ರಹ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ದೇವಸ್ಥಾನವನ್ನ ಬಾಳೆಕಂದು ತಳಿರು ತೋರಣ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು . ವಿಶೇಷ ಪೂಜೆ ನಂತರ ಕಳಸ ಪ್ರತಿಷ್ಠಾಪನೆ ಮತ್ತು ದೇವರ ಗರ್ಭಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.. ದೇವಸ್ಥಾನದ ಮುಂಭಾಗದಲ್ಲಿ ಆಗಮಿಸಿದ ಎಲ್ಲಾ ದೇವರುಗಳಿಗೂ ಅಲಂಕಾರ ವಿಶೇಷ ‌ಪೂಜೆ ಕೈ ಕಾರ್ಯಗಳು ಜರುಗಿದವು. ಎಲ್ಲ ಪೂಜೆ ಕಾರ್ಯಗಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ದೇವಸ್ಥಾನಕ್ಕೆ ಆಗಮಿಸಿದಂತ ಪ್ರತಿಯೊಬ್ಬರಿಗೂ ಅನ್ನದಾಸೋಹ ನಿರಂತರವಾಗಿ ನಡೆಯಿತು

ಅನ್ನ ದಾಸೋಹದ ಸಿದ್ಧತೆಗೆ ಅಡಿಗೆ ತಯಾರಕರಾದ ಚಂದ್ರಪ್ಪ (ಬಂಗಾರಗುಂಡಿ)ರವಿ,ಸ್ವಾಮಿ,ಹಾಗೂ ಸಂಗಡಿಗರು ಅನ್ನ ದಾಸೋಹದ ಕಾರ್ಯವನ್ನು ನಡೆಸಿಕೊಟ್ಟರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹಣ್ಣು ಕಾಯಿ ಕೊಟ್ಟು ತೀರ್ಥ ಪ್ರಸಾದ ತೆಗೆದುಕೊಂಡರು. ಈ ಕಾರ್ಯಕ್ರಮಕ್ಕೆ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ.ಮಿಸೆ ಮಹಾಲಿಂಗಪ್ಪ, ಜೆಡಿಎಸ್ ನ ಮುಖಂಡ ಎಂ.ರವೀಶ ಸೇರಿದಂತೆ, ಗ್ರಾಮದ ಮುಖಂಡರಾದ ಶಶಿಧರ್.ಕೆ.ಟಿ.ನಿಜಲಿಂಗಪ್ಪ,ಸಿ.ರಾಜಣ್ಣ,ದೊಡ್ಡಲಿಂಗೆಗೌಡ,ಕೆ.ರಾಜಣ್ಣ, ನಟೇಶ ಕುಮಾರ್ ,ಪ್ರಭು.ರಂಗಸ್ವಾಮಿ, ರವಿ.ಜೆ.ಗೊ.ರಾಜಣ್ಣ, ಪತ್ರಕರ್ತರಾದ ಜಯಣ್ಣ ಬೆಳೆಗೆರ ,ಸುರೇಶಬೆಳಗೆರೆ,
ಹಾಗೂ ದೇವಸ್ಥಾನದ ಪ್ರಧಾನ ‌ಪೂಜಾರಿಗಳಾದ ಮಹಲಿಂಗಪ್ಪ,ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಜನ ಪ್ರತಿನಿಧಿಗಳು,ಭಕ್ತರು ಎಲ್ಲಾ ದೇವರುಗಳ ಪೂಜಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮೇ.4 ರಂದು ಶ್ರೀ ಕಾಟಮಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಗ್ರಾಮಕ್ಕೆ ಕರೆತಂದ ದೇವರುಗಳನ್ನು ಆಯಾ ಗ್ರಾಮಗಳಿಗೆ ಕಳುಹಿಸಿಕೊಡುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...