ಭಾನುವಾರ ಬೆಂಗಳೂರು ತಲುಪಲಿದೆ ನವೀನ್ ಮೃತದೇಹ..!

suddionenews
1 Min Read

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇನ್ನು ನಿಂತಿಲ್ಲ. ಈ ಯುದ್ದದಲ್ಲಿ ರಷ್ಯಾ ದಾಳಿಗೆ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಬಲಿಯಾಗಿದ್ದಾನೆ. ಕನ್ನಡಿಗರನ್ನೆಲ್ಲಾ ಕರ್ನಾಟಕಕ್ಕೆ ಕರೆತಂದರು ಅತ್ತ ನವೀನ್ ಮೃತದೇಹ ಮಾತ್ರ ಬಂದಿರಲಿಲ್ಲ.

ನವೀನ್ ಪೋಷಕರು ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದರು ಹೇಗಾದರೂ ಮಾಡಿ ನವೀನ್ ಮೃತದೇಹ ತರಿಸಿಕೊಡಿ ಎಂದಿದ್ದರು. ಇದೀಗ ಸಿಎಂ ಈ ಬಗ್ಗೆ ಭರವಸೆ ನೀಡಿದ್ದು, ಇದೇ ಭಾನುವಾರ ನವೀನ್ ಮೃತದೇಹ ಕರ್ನಾಟಕಕ್ಕೆ ಬರಲಿದೆ ಎಂದಿದ್ದಾರೆ.

ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತ ಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ 21-03-2022, ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪೋಸ್ಟ್ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *