Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೇ.24ರಂದು ನಡೆಯಬೇಕಿದ್ದ MBA, MCA ಪ್ರವೇಶ ಪರೀಕ್ಷೆ ಜೂ.14ಕ್ಕೆ ಮುಂದೂಡಿಕೆ : KEA

---Advertisement---

ಸುದ್ದಿಒನ್,ಬೆಂಗಳೂರು,ಮೇ.14: ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಮೇ 24ರಂದು ನಡೆಯಬೇಕಿದ್ದ MBA ಮತ್ತು MCA ಪ್ರವೇಶ ಪರೀಕ್ಷೆಗಳನ್ನು (PGCET-2026) ಜೂನ್ 14ಕ್ಕೆ ಮುಂದೂಡಿದೆ.

ಮೇ 24ರಂದು ಕೇಂದ್ರ ಲೋಕಸೇವಾ ಆಯೋಗವು (UPSC) ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯನ್ನು ಆಯೋಜಿಸಿದೆ. ಒಂದೇ ದಿನ ಎರಡು ಪ್ರಮುಖ ಪರೀಕ್ಷೆಗಳು ಎದುರಾದಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕೆಇಎ ಈ ದಿನಾಂಕವನ್ನು ಬದಲಾಯಿಸಿದೆ. MBA/MCA ಪರೀಕ್ಷೆ: ಮೇ 24ರ ಬದಲಾಗಿ ಜೂನ್ 14, 2026 ರಂದು ನಡೆಯಲಿದೆ. M.Tech / M.E ಪರೀಕ್ಷೆ: ಈ ಹಿಂದೆ ನಿಗದಿಯಾದಂತೆ ಮೇ 23, 2026 ರಂದೇ ನಡೆಯಲಿದೆ. DCET-2026: ಡಿಪ್ಲೊಮಾ ಸಿಇಟಿ ಪರೀಕ್ಷೆಯೂ ಸಹ ಯಾವುದೇ ಬದಲಾವಣೆ ಇಲ್ಲದೆ ಮೇ 23, 2026 ರಂದು ಜರುಗಲಿದೆ.

UPSC ಪರೀಕ್ಷೆಯ ಕಾರಣದಿಂದಾಗಿ MBA ಮತ್ತು MCA ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉಳಿದಂತೆ M.Tech ಮತ್ತು DCET ಪರೀಕ್ಷೆಗಳು ಹಳೆಯ ವೇಳಾಪಟ್ಟಿಯಂತೆಯೇ ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಮಾಹಿತಿ ನೀಡಿದ್ದಾರೆ.

Join WhatsApp

Join Now

Join Telegram

Join Now