ಸುದ್ದಿಒನ್,ಹೈದರಾಬಾದ್,ಮೇ 07 : ದೇಶದಲ್ಲಿ ಮಹಿಳೆಯರಿಗೆ ರಾತ್ರಿ ವೇಳೆ ನಿಜಕ್ಕೂ ರಕ್ಷಣೆ ಇದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೈದರಾಬಾದ್ನ ಮಲಕಾಜ್ಗಿರಿ ವ್ಯಾಪ್ತಿಯ ನೂತನ ಪೊಲೀಸ್ ಕಮಿಷನರ್ ಬಿ. ಸುಮತಿ (IPS) ಅವರು ನಡೆಸಿದ ಸಾಹಸಮಯ ‘ಅಂಡರ್ ಕವರ್’ ಕಾರ್ಯಾಚರಣೆ ಈಗ ಇಡೀ ದೇಶದ ಗಮನ ಸೆಳೆದಿದೆ. ಒಬ್ಬ ಪೊಲೀಸ್ ಅಧಿಕಾರಿಯೇ ಸಾಮಾನ್ಯ ಮಹಿಳೆಯಂತೆ ರಸ್ತೆಗಿಳಿದಾಗ ಎದುರಾದ ಸತ್ಯ ವ್ಯವಸ್ಥೆಯ ಕರಾಳ ಮುಖವನ್ನು ಬಯಲು ಮಾಡಿದೆ.
ಮಲಕಾಜ್ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ನಗರದ ಭದ್ರತೆಯನ್ನು ಪರೀಕ್ಷಿಸಲು ಮುಂದಾದರು. ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಪೊಲೀಸ್ ಸಮವಸ್ತ್ರ ಕಳಚಿಟ್ಟು, ಸಾಮಾನ್ಯ ಚೂಡಿದಾರ್ ಧರಿಸಿ, ಅನಾಮಧೇಯ ಮಹಿಳೆಯಂತೆ ದಿಲ್ಸುಖ್ ನಗರದ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಸಂಚರಿಸಿದರು.

ಸುಮಾರು ಎರಡು ಗಂಟೆಗಳ ಕಾಲ ಸುಮತಿ ಅವರು ನಗರದ ವಿವಿಧೆಡೆ ಸಂಚರಿಸಿದಾಗ ಎದುರಾದ ಅನುಭವಗಳು ಅಕ್ಷರಶಃ ಆಘಾತಕಾರಿಯಾಗಿದ್ದವು. ದಾರಿಯಲ್ಲಿ ಹೋಗುತ್ತಿದ್ದ ಯುವಕರು, ಮಧ್ಯವಯಸ್ಕರು ಮಾತ್ರವಲ್ಲದೆ ವೃದ್ಧರು ಕೂಡ ಅವರನ್ನು ಕಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲ ಯುವಕರು ಬೈಕ್ ನಿಲ್ಲಿಸಿ “ಬರ್ತಿಯಾ?” ಎಂದು ಕೇಳುವ ಮೂಲಕ ಕಿರುಕುಳ ನೀಡಿದ್ದಾರೆ.ಕೇವಲ 120 ನಿಮಿಷಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ನೀಡಲು ಯತ್ನಿಸಿದ್ದಾರೆ.
ಕಿಡಿಗೇಡಿಗಳ ವರ್ತನೆಯಿಂದ ರೋಸಿಹೋದ ಸುಮತಿ ಅವರು ತಕ್ಷಣವೇ ತಮ್ಮ ಅಧೀನ ಅಧಿಕಾರಿಗಳಿಗೆ ಸ್ಥಳಕ್ಕೆ ಬರಲು ಸಂದೇಶ ರವಾನಿಸಿದರು. ಸೈರನ್ ಮೊಳಗಿಸುತ್ತಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸಾಮಾನ್ಯ ಉಡುಪಿನಲ್ಲಿದ್ದ ತಮ್ಮದೇ ಕಮಿಷನರ್ ಅವರನ್ನು ಕಂಡು ಒಂದು ಕ್ಷಣ ದಿಗ್ರಮೆಗೊಂಡರು.
ಮಹಿಳೆಯರಿಗೆ ಸುರಕ್ಷತೆ ನೀಡಬೇಕಾದದ್ದು ನಮ್ಮ ಮೊದಲ ಆದ್ಯತೆ. ರಸ್ತೆಯಲ್ಲಿ ಒಬ್ಬಂಟಿ ಮಹಿಳೆಯನ್ನು ಕಂಡಾಗ ಸಮಾಜದ ದೃಷ್ಟಿಕೋನ ಎಷ್ಟು ವಿಕೃತವಾಗಿರುತ್ತದೆ ಎಂಬುದು ಈ ಕಾರ್ಯಾಚರಣೆಯಿಂದ ಸಾಬೀತಾಗಿದೆ ಎಂದು ಸುಮತಿ ಹೇಳಿಸಿದ್ದಾರೆ.
In a bold under cover operation by, newly appointed #Malkajgiri CP (@MalkajgiriCop) Sumathi, IPS (@SumathiIPS), waited alone at a bus stand in #Dilsukhnagar at midnight on the same day after taking charge as CP, she disguised herself as an ordinary woman to… pic.twitter.com/csaCtOWzVx
— Surya Reddy (@jsuryareddy) May 6, 2026
As the first woman Commissioner of Police (CP) for the #Malkajgiri Commissionerate (@MalkajgiriCop), #Hyderabad, 2006-batch IPS officer B. Sumathi (@SumathiIPS) immediately prioritized #WomenSafety, proactive Undercover Policing, and technology-driven law enforcement. Her early… pic.twitter.com/2q6UsCWFlB
— Surya Reddy (@jsuryareddy) May 6, 2026




















