Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೀವನ ಸಂಗಾತಿಯನ್ನು ಪರಿಚಯಿಸಿದ ‘ಕನ್ನಡತಿ’ ರಂಜಿನಿ ರಾಘವನ್ : ಯಾರು ಆತ..?

---Advertisement---

ಕನ್ನಡತಿ ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು ರಂಜಿನಿ ರಾಘವನ್. ಸಿನಿಮಾಗಳ ಮೂಲಕವೂ ಎಲ್ಲರ ಅಚ್ಚುಮೆಚ್ಚಿನ ನಟಿ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಅದುವೆ ಮದುವೆಯಾಗುವ ಬೆಸ್ಟ್ ಫ್ರೆಂಡ್ ಅನ್ನು ಪರಿಚಯಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅವರ ಹುಡುಗನ ಹೆಸರೊಂದನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಸದ್ಯ ಈ ಜೋಡಿ ಎಲ್ಲೆಡೆ ವೈರಲ್ ಆಗುತ್ತಿದೆ.

ರಂಜನಿ ರಾಘವನ್ ತಮ್ಮ ಬಹುಕಾಲದ ಗೆಳೆಯ ಸಾಗರ್ ಭಾರಧ್ವಜ್ ಕೈ ಹಿಡಿಯುತ್ತಿದ್ದಾರೆ. ಅವರ ಪ್ರೀತಿಯನ್ನು ಇನ್ಸ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಹಾಕಿ, ಕನ್ನಡಿಯಲ್ಲಿರುವ ವಸ್ತುಗಳು ಗೋಚರಿಸುವುದಕ್ಕಿಂತ ಹತ್ತಿರದಲ್ಲಿವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನ್ ಹುಡುಗ.. ಲೈಫ್ ಪಾಟ್ನರ್.. ಬೆಸ್ಟ್ ಫ್ರೆಂಡ್ ಅಂತಾನೂ ಕ್ಯಾಪ್ಶನ್ ಹಾಕಿದ್ದಾರೆ. ಈ ಹಿಂದೆ ರಂಜಿನಿ ರಾಘವನ್ ಅವರೇ ಬೆಸ್ಟ್ ಫ್ರೆಂಡ್ ಮುಂದೆ ಪಾಟ್ನರ್ ಆಗುವ ಬಗ್ಗೆ ಹೇಳಿದ್ದರು. ಬೆಸ್ಟ್ ಫ್ರೆಂಡ್ ಗೆ ಎಲ್ಲವೂ ಗೊತ್ತಿರುತ್ತೆ ಅವರೇ ಪಾಟ್ನರ್ ಆದಾಗ ಚೆನ್ನಾಗಿರುತ್ತೆ ಎಂದಿದ್ದರು. ಇದೀಗ ಅವರ ಬೆಸ್ಟ್ ಫ್ರೆಂಡ್ ಸಾಗರ್ ಭಾರದ್ವಾಜ್ ಅವರನ್ನೇ ಮದುವೆಯಾಗುತ್ತಿದ್ದಾರೆ.

ಅಷ್ಟಕ್ಕೂ ಸಾಗರ್ ಭಾರಧ್ವಾಜ್ ಯಾರು..? ಏನು ಮಾಡ್ತಾ ಇದಾರೆ ಅಂತ ನೋಡೋದಾದ್ರೆ, ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗುತ್ತಿದೆ. ರನ್ನರ್, ಸೈಕಲಿಸ್ಟ್, ಬೈಕರ್ ಕೂಡ ಎಂಬ ಮಾಹಿತಿ ಇದೆಮ ಸದ್ಯ ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಪ್ರೈವೇಟ್ ನಲ್ಲಿ ಇದೆ. ಸದ್ಯ ಅಭಿಮಾನಿಗಳು ಇಬ್ಬರ ಫೋಟೋಗಳಿಗೆ ಒಳ್ಳೊಳ್ಳೆ ಕಮೆಂಟ್ ಗಳನ್ನ ಹಾಕುತ್ತಿದ್ದಾರೆ. ವಿಶ್ ಮಾಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...