ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ತಾಲ್ಲೂಕಿನ ಸಿರಿಗೆರೆ ಸಮೀಪದ ಜಮ್ಮೇನಹಳ್ಳಿಯ ಎನ್. ಬಸಪ್ಪ (90 ವರ್ಷ) ವಯೋ ಸಹಜ ಕಾರಣದಿಂದ ಸೋಮವಾರ ರಾತ್ರಿ ನಿಧನರಾದರು.
ವರ್ತಕರೂ, ಶಾಲಾ ಕಾಲೇಜು, ಬ್ಯಾಂಕ್ಗಳಲ್ಲಿ ಸದಸ್ಯರಾಗಿ, ಸಲಹಾ ಮಂಡಳಿಯ ಸದಸ್ಯರೂ, ನಿರ್ದೇಶಕರೂ ಆಗಿ ಬಹು ಕಾಲ ಸೇವೆ ಸಲ್ಲಿಸಿದ್ದರು. ಸಮಾಜ ಸೇವೆಯಲ್ಲಿ ಅವರು ಗುರುತಿಸಿಕೊಂಡಿದ್ದರು. ತರಳಬಾಳು ಸಂಸ್ಥೆಯ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲಾ ಸಲಹಾ ಸಮಿತಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ವೀರಶೈವ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿಗೆ ಮಂಗಳವಾರ ನೀಡಲಾಯಿತು.










