Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಳಲ್ಕೆರೆ : ಪೈಪ್‌ಲೈನ್ ಲೋಪ ಸರಿಪಡಿಸಿ, ಕೆರೆಗಳಿಗೆ ಭದ್ರಾ ನೀರು ಹರಿಸಿ: ಅನ್ನದಾತರ ಆಗ್ರಹ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 27 : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು, ತಾಳ್ಯ ಹೋಬಳಿಗೆ ಒಳಪಡುವ ಹೊರಕೆರೆದೇವಪುರ, ಗುಂಡಿಕೆರೆ ಮತ್ತು ಕೆರೆಯಾಗಳಹಳ್ಳಿ ಕೆರೆಗಳಿಗೆ ಸಮರ್ಪಕವಾಗಿ ಭದ್ರಾ ನೀರು ಹರಿಸುವ ಹಾಗೂ ಪೈಪ್‍ಲೈನ್ ಲೋಪದೋಷ ಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್‍ರವರಿಗೆ ಆ ಭಾಗದ 7 ಕರೆಯ ಅನ್ನದಾತರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿಗೆ ಒಳಪಡುವ ಹೊರಕೆರೆದೇವರಪುರ, ಗುಂಡಿಕೆರೆ ಮತ್ತು ಕೆರೆಯಾಗಳಹಳ್ಳಿ ಕೆರೆಗಳಿಗೆ ಭದ್ರಾ ನೀರು ಬಿಡುಗಡೆಗೊಳಿಸಿ ಸುಮಾರು 40 ದಿನಗಳು ಕಳೆದಿದರೂ ಸಹ, ಇದುವರೆಗೂ ಕೆರೆಗಳಿಗೆ ನೀರು ತಲುಪಿರುವುದಿಲ್ಲ. ಇದರಿಂದ ಈ ಭಾಗದ ರೈತರಿಗೆ ಹಾಗೂ ಅನ್ನದಾತರಿಗೆ ತೀವು ನಿರಾಶೆಯಾಗಿದೆ. ಹೊಳಲ್ಕೆರೆ ಪಂಪ್ ಹೌಸ್ ಹಾಗೂ ಟಿ ಎಮ್ಮಿಗನೂರು ಗ್ರಾಮದ ಹತ್ತಿರ ಇರುವ ಗ್ರಾವಿಟಿ ತೊಟ್ಟಿ ಮುಖಾಂತರ ಸುಮಾರು 35 ಕಿ.ಮೀ. ದೂರದಲ್ಲಿರುವ ಈ ಕೆರೆಗಳಿಗೆ ನೀರು ಹರಿಯದಿರಲು ದಾರಿಯುದ್ದಕ್ಕೂ ಇರುವ ಪೈಪ್‍ಲೈನ್‍ನಲ್ಲಿನ ಲೋಪದೋಷಗಳು ಹಾಗೂ ತಾಂತ್ರಿಕ ಸಮಸ್ಯೆಗಳೇ ಕಾರಣವಾಗಿದೆ ಎಂದು ದೂರಿದ್ದಾರೆ.

ಈ ಸ್ಥಳಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಪೈಪ್‍ಲೈನ್ ಲೊಕೇಷನ್ ಉದ್ದಕ್ಕೂ ಕನಿಷ್ಠ 50 ಜನರ ಕಾರ್ಮಿಕರ ತಂಡದೊಂದಿಗೆ ಪರಿಶೀಲನೆ ನಡೆಸಿ, ದಾರಿಯಲ್ಲಿರುವ ಲೋಪ ದೋಷಗಳನ್ನು ತಕ್ಷಣವೇ ಸರಿಪಡಿಸಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ಪೈಪ್‍ಲೈನ್ ಮುಖಾಂತರ ನೀರು ತಲುಪಿಸುವುದು ಕಷ್ಟಸಾಧ್ಯವಾದಲ್ಲಿ, ಕೇವಲ 2 ಕಿ.ಮೀ. ದೂರದಲ್ಲಿರುವ ಉಪ್ಪರಿಗೇನಹಳ್ಳಿ ಹಾಗೂ ಗೂಳಿಹೊಸಹಳ್ಳಿ ಸರ್ವೇ ನಂಬರ್‍ನಲ್ಲಿ ಹಾದೂ ಹೋಗಿರುವ ಭದ್ರ ಮುಖ್ಯ ಕಾಲುವೆ ಮುಖ್ಯ ಕಾಲುವೆಯಿಂದ ಏತಾ ನೀರಾವರಿ ಯೋಜನೆಯ ಮೂಲಕ ಈ ಹಳ್ಳಿಗಳ ಹೊರಕೆರೆದೇವರಪುರ ಕೆರೆ, ಗುಂಡಿಕೆರೆ ಮತ್ತು ಕೆರೆಯಾಗಳಹಳ್ಳಿ ಕೆರೆ (ಈವತ್ತಿನ ಮಟ್ಟಿಗೆ ಬಿಟ್ಟು ಹೋಗಿರುವ ಉಪ್ಪರಿಗೇನಹಳ್ಳಿ, ಗೊಲ್ಲರಹಳ್ಳಿ, ನಂದನಹೊಸೂರು, ಓ. ಗೊಲ್ಲರಹಳ್ಳಿ ಎಂ ಜಿ. ಕಟ್ಟೆ ಚೌಡಗೊಂಡನಹಳ್ಳಿ, ಹಾಲೇನಹಳ್ಳಿ, ಬೂದಿಪುರ, ಗೂಳಿಹೊಸಹಳ್ಳಿ, ಕಣಿವೆ ಜೋಗಿಹಳ್ಳಿ, ಸಂಗೇನಹಳ್ಳಿ, ಕಸವನಹಳ್ಳಿ, ಮತಿಘಟ್ಟ, ನಲ್ಲಿಕಟ್ಟೆ, ಬೋರೆನಹಳ್ಳಿ, ಬ್ರಹ್ಮಪುರ, ಪಂಪಾಪುರ, ನಗರಘಟ್ಟ ಈಚಘಟ್ಟ, ತೇಕಲವಟ್ಟಿ, ಕೊಳಾಳು ಕೋಮಾರನಹಳ್ಳಿ ಭಾಗದ ಕೆರೆ ಹಾಗೂ ಒಡ್ಡುಗಳಿಗೂ ನೀರು ತುಂಬಿಸುವ ಯೋಜನೆ ಮುಂದಿನ ದಿನಗಳಲ್ಲಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕೆರೆಗಳಿಗೆ ನೀರು ಒದಗಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಕ್ಷಣವೇ ಯೋಜನೆ ರೂಪಿಸಬೇಕು. ಇವತ್ತಿನ ಬರಗಾಲದ ಪರಿಸ್ಥಿತಿಯಲ್ಲಿ ಹಾಗೂ ಮುಂಬರುವ ದಿನಗಳಲ್ಲಿ ನಮ್ಮ ಭಾಗದ 10 ಹಳ್ಳಿಗಳ ರೈತರು ಹಾಗೂ ಕೃಷಿ ಭೂಮಿಗೆ ಜಾನುವಾರುಗಳಿಗೆ ಕುಡಿಯಲು ಸಮರ್ಪಕವಾಗಿ ನೀರು ಸಿಗುವಂತೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಾಗೂ ಹಸಿರು ಸೇನೆ ಮತ್ತು ಇಡಿ 7 ಕೆರೆಯ ಅನ್ನದಾತರು ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಮಸ್ವಾಮಿ ಕೆರೆಯಾಗಹಳ್ಳಿ, ರೈತ ಬಂಧು ಮಧು, ಚೌಡಗುಡ್ಡನ ಹಳ್ಳಿ ಹುಲಿಕೆಂಚಪ್ಪ, ಉಪ್ಪೇರಿಗೇನಹಳ್ಳಿ, ಗಜೇಂದ್ರ, ಮಂಜುನಾಥ್, ವಿನಯಕುಮಾರ್ ನಂದನ ಹೊಸೂರು, ಶ್ರೀನಿವಾಸ್ ಹೆಚ್.ಡಿ. ಪುರ ರಾಮಸ್ವಾಮಿ, ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now