Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ರಾಜ್ಯೋತ್ಸವ – ಯೋಗ ಉತ್ಸವ | ಚಿತ್ರದುರ್ಗದಲ್ಲಿ 25 ದಿನಗಳ ಉಚಿತವಾ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ

---Advertisement---

ಸುದ್ದಿಒನ್,  ಚಿತ್ರದುರ್ಗ, ನವಂಬರ್.08 : ಪಜಂತಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್, ಪತಂಜಲಿ ಕಿಸಾನ್ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ-ಯೋಗ ಉತ್ಸವ ಅಂಗವಾಗಿ 25 ದಿನಗಳ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಇದೇ ನವೆಂಬರ್ 10 ರಿಂದ ಡಿಸೆಂಬರ್ 4ರವೆರೆಗೆ ಬೆಳಿಗ್ಗೆ 5.30 ರಿಂದ 7 ರವರೆಗೆ ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನವಂಬರ್ 10ರಂದು ಬೆಳಿಗ್ಗೆ 5.30 ರಿಂದ 7 ರವರೆಗೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಿಳಾ ಪತಂಜಲಿ ಯೋಗ ಸಮಿತಿ ಮಾಜಿ ಅಧ್ಯಕ್ಷೆ ರೇಣುಕಾ ಉಮೇಶ್ ಉದ್ಘಾಟಿಸುವರು. ಬರಗೇರಮ್ಮ ಮಹಿಳಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷೆ ಎಸ್.ನಾಗಮ್ಮ ಅಧ್ಯಕ್ಷತೆ ವಹಿಸುವರು.

ಯೋಗ ಶಿಕ್ಷಕರಾದ ಟಿ.ಕೃಷ್ಣಮೂರ್ತಿ, ಎಲ್.ಲತಾ, ರಾಮ್‍ನರೇಶ್, ಎಸ್.ನಾಗಮ್ಮ, ಕೆ.ರಾಮರಾಜ್, ಟಿ.ಕೆ.ಸುಮಲತಾ, ಎಸ್.ಜಯಮ್ಮ ಶಿಬಿರ ನಡೆಸಿಕೊಡುವರು.

ಶಿಬಿರಾರ್ಥಿಗಳು ಯೋಗ ತರಬೇತಿಗೆ ಯೋಗ ಮ್ಯಾಟ್ ಅಥವಾ ಜಮಾಖಾನದೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಟಿ.ಕೃಷ್ಣಮೂರ್ತಿ-8453462044, ಬಿ.ಹೆಚ್.ರೇಣುಕಮ್ಮ-9880280715 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment