Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿಕ್ಕಬಳ್ಳಾಪುರದ ಶಾಸಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೆ ಸುಧಾಕರ್..!

Facebook
Twitter
Telegram
WhatsApp

 

ಬೆಂಗಳೂರು: ಮಾಜಿ ಸಚಿವ ಡಾ.ಕೆ ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮ್ಮ ವಿರುದ್ಧ ಅವಮಾನಕರ ಹೇಳಿಕೆ ನೀಡುತ್ತಾರೆ ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ಜುಲೈ 4ರಂದು ಅರ್ಜಿ ವಿಚಾರಣೆ ನಡೆಸಲಿದೆ. ಪ್ರದೀಪ್ ಈಶ್ವರ್ ನೇರಾ ನೇರವಾಗಿ ಮಾಜಿ ಸಚಿವ ಸುಧಾಕರ್ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದರು. ಆರೋಗ್ಯ ಸಚಿವರಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆ ಮಾಜಿ ಸಚಿವರು ಸದ್ಯ ತಮ್ಮ ವಕೀಲರ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಶಾಸಕ ಪ್ರದೀಪ್​ ಈಶ್ವರ್ ಅವರು ತಮ್ಮ ಮಾತಿನ ಮೂಲವೇ ಸಾಕಷ್ಟು ಸುದ್ದಿ ಮಾಡಿದ್ದರು. ಚುನಾವಣೆಯ ಸಂದರ್ಭದಲ್ಲೂ ಪ್ರದೀಪ್ ಅವರ ಮಾತುಗಳು ಮತದಾರರ ಮೇಲೆ ಭಾರೀ ಪ್ರಮಾಣ ಪ್ರಭಾವ ಬೀರಿದ್ದರು. ಅಲ್ಲದೇ ಚುನಾವಣೆಯಲ್ಲಿ ಪ್ರಭಾವಿ ಸಚಿವ ವಿರುದ್ಧವೇ ಗೆದ್ದಿದ್ದಾರೆ. ಆದರೆ ಗೆದ್ದ ಬಳಿಕವೂ ಅವರ ಮಾತುಗಾರಿಕೆ ಮುಂದುವರೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಛಾಯಾ ಟೈಲರ್ ರಮೇಶ್ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ನಗರದ ಲಕ್ಷ್ಮೀ ಬಜಾರ್‌ನಲ್ಲಿರುವ ಛಾಯಾ ಟೈಲರ್ ಅಂಗಡಿ ಮಾಲೀಕ ರಮೇಶ್ (52) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮ ಹೊಸದುರ್ಗ

ಇಂದಿನಿಂದ ಹಾಸನಾಂಬೆಯ ದರ್ಶನ ಭಾಗ್ಯ : ಕ್ಯೂ ನಿಂತ ಭಕ್ತರು

  ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ದೇವಿ ಹಾಸನಾಂಬೆ. ಇದೀಗ ಮತ್ತೆ ಆ ದಿನ ಬಂದಿದೆ. ಹಾಸನಾಂಬೆಯ ಬಾಗಿಲು ತೆಗೆಯಲಾಗಿದೆ. ನಿನ್ನೆಯೇ ಹಾಸನಾಂಬೆಯ ಬಾಗಿಲು ತೆಗೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾತ್ರಿಯಿಂದಾನೇ

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಛಲವಾದಿ ನಾರಾಯಣಸ್ವಾಮಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ. ಈಗ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ

error: Content is protected !!