Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೆಫ್ರಿ ಎಪ್ಸ್ಟೀನ್ ನನ್ನ ಬ್ಲ್ಯಾಕ್ ಮೇಲ್ ಮಾಡಲು ಯೋಚಿಸಿದ್ದ ; ಮೂರು ಅಕ್ರಮ ಸಂಬಂಧಗಳನ್ನು ಒಪ್ಪಿಕೊಂಡ ಬಿಲ್ ಗೇಟ್ಸ್

---Advertisement---

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಮೂರು ಇತರೆ ಮಹಿಳೆಯರ ಜೊತೆಗಿನ ಅಕ್ರಮ ಸಂಬಂಧಗಳ ಬಗ್ಗೆ ಅಮೆರಿಕಾದ ಸಂಸದೀಯ ಸಮಿತಿಯ ಮುಂದೆ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಈ ವಿಷಯಗಳನ್ನು ಬಳಸಿಕೊಂಡು ತಮಗೆ ಬ್ಲ್ಯಾಕ್ ಮೇಲ್ ಮಾಡಲು ಯೋಜಿಸಿದ್ದಿರಬಹುದು ಎಂದೂ ಅವರು ತಿಳಿಸಿದ್ದಾರೆ.

ಜೂನ್ 10 ರಂದು ನಡೆದ ಯುಎಸ್ ಹೌಸ್ ಓವರ್ಸೈಟ್ ಕಮಿಟಿಯ ಮುಚ್ಚಿದ ಬಾಗಿಲಿನ ವಿಚಾರಣೆಯ ಸಂದರ್ಭದಲ್ಲಿ ಬಿಲ್ ಗೇಟ್ಸ್ ಈ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಜಸ್ಟಿಸ್ ಡಿಪಾರ್ಟ್ಮೆಂಟ್ ಹೆಚ್ಚುವರಿ ದಾಖಲೆಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಸಾಕ್ಷ್ಯದ ಪ್ರತಿ ಸಾರ್ವಜನಿಕವಾಗಿ ಲಭ್ಯವಾಗಿದೆ.

ಮೂರು ಸಂಬಂಧಗಳನ್ನು ಒಪ್ಪಿಕೊಂಡ ಗೇಟ್ಸ್

ವಿಚಾರಣೆಯ ಸಂದರ್ಭದಲ್ಲಿ ಬಿಲ್ ಗೇಟ್ಸ್ ಅವರು ರಷ್ಯಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೊನೊವಾ, ಪರಮಾಣು ಭೌತವಿಜ್ಞಾನಿ ಕರಿಮಾ ನಿಗ್ಮತುಲಿನಾ ಮತ್ತು ವೈದ್ಯಕೀಯ ಉದ್ಯಮಿ ಅಲೈಸ್ ಜೇಕಬ್ಸ್ ನೆಸ್ಸೆಲ್ರೋಡ್ ಎಂಬ ಮೂವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡಿದ್ದಾರೆ.

ಈ ಅಕ್ರಮ ಸಂಬಂಧಗಳಿಗೂ ಎಪ್ಸ್ಟೀನ್ ಜೊತೆಗಿನ ನನ್ನ ಸಂಪರ್ಕಕ್ಕೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಇದು ನನ್ನ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಎಪ್ಸ್ಟೀನ್ ನನ್ನ ವೈಯಕ್ತಿಕ ಜೀವನದ ತಪ್ಪುಗಳನ್ನು ಮತ್ತು ಕೆಲವು ಸುಳ್ಳುಗಳನ್ನು ಬಳಸಿಕೊಂಡು, ನನ್ನನ್ನು ಮತ್ತೆ ತನ್ನ ಜೊತೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹೇರಲು ಯತ್ನಿಸುತ್ತಿದ್ದ,” ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಎಪ್ಸ್ಟೀನ್ನ ಕ್ರಿಮಿನಲ್ ಚಟುವಟಿಕೆಗಳಲ್ಲಿ ತಮಗೆ ಯಾವುದೇ ಪಾತ್ರವಿರಲಿಲ್ಲ ಮತ್ತು ಆತನನ್ನು ಭೇಟಿಯಾಗಿದ್ದು ತಾವು ಮಾಡಿದ ದೊಡ್ಡ ತಪ್ಪು ಎಂದು ಗೇಟ್ಸ್ ಪುನರುಚ್ಚರಿಸಿದ್ದಾರೆ. ಕೇವಲ ಲೋಕೋಪಕಾರಿ (Philanthropy) ವಿಷಯಗಳ ಚರ್ಚೆಗಾಗಿ ಮಾತ್ರ ಆತನನ್ನು ಭೇಟಿಯಾಗಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ವೇಳೆ ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೇಟ್ಸ್, ಎಪ್ಸ್ಟೀನ್ ನನ್ನನ್ನು ನೇರವಾಗಿ ಬ್ಲ್ಯಾಕ್ಮೇಲ್ ಮಾಡಲಿಲ್ಲ. ಆದರೆ ಆತನ ಇಮೇಲ್ಗಳನ್ನು ಗಮನಿಸಿದರೆ, ಆತ ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಗಂಭೀರವಾಗಿ ಯೋಚಿಸುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ,” ಎಂದಿದ್ದಾರೆ. 2013ರ ಎಪ್ಸ್ಟೀನ್ನ ಇಮೇಲ್ ಡ್ರಾಫ್ಟ್ ಒಂದರಲ್ಲಿ ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಉದ್ಯೋಗಿ ಬೋರಿಸ್ ನಿಕೊಲಿಕ್ ಅವರ ಬಗೆಗಿನ ಉಲ್ಲೇಖಗಳಿರುವುದು ಇದಕ್ಕೆ ಸಾಕ್ಷಿಯಾಗಿದೆ.

ತಮ್ಮ ವೈಯಕ್ತಿಕ ಜೀವನದ ಸತ್ಯ ಮತ್ತು ಸುಳ್ಳುಗಳನ್ನು ಮಿಶ್ರಣ ಮಾಡಿ, ತನ್ಮೂಲಕ ತನ್ನ ಸ್ವಾರ್ಥ ಸಾಧನೆಗಾಗಿ ಎಪ್ಸ್ಟೀನ್ ದಾಳ ಉರುಳಿಸಲು ಯತ್ನಿಸುತ್ತಿದ್ದ ಎಂದು ಬಿಲ್ ಗೇಟ್ಸ್ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now