ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 24 : ಬಿಜೆಪಿ ಅಧಿಕಾರದ ದಾಹ ಅವರ ವಿಶೇಷ ಕಾನೂನು ತಂದಿದ್ದಾರೆ, ಅಂಬೇಡ್ಕರ್ ನೀಡಿರುವ ಸಂವಿಧಾನದ ಕ್ಕೆ ಅಪಮಾನ ಮಾಡುತ್ತಿದ್ದಾರೆ, ಮತದಾನ ಪ್ರಕ್ರಿಯೇಯನ್ನು ಬುಡಮೇಲ್ ಮಾಡುತ್ತಿದ್ದಾರೆ, ಪರೋಕ್ಷವಾಗಿ ಚುನಾವಣೆಯ ಷಡ್ಯತರ ಮಾಡಿದ್ದಾರೆ ಎಂದು ಮಾಜಿ ಸಚಿವರಾದ ಚಿತ್ರದುರ್ಗ ಜಿಲ್ಲಾ SIR ವೀಕ್ಷಕರಾದ ಪಿ. ಟಿ. ಪರಮೇಶ್ವರ ನಾಯ್ಕ ರವರು ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಪಕ್ಕ ಇರುವ ಲಿಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿ ಪಕ್ಷದ ಕೈಗೊಂಬೆಯಾಗಿದೆ. ಅದರಂತೆ ಈಡಿ ಸಿಐಡಿ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳು ಸಹ ಬಿಜೆಪಿಯ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ.ಬಿಜೆಪಿಯವರ ಷಡ್ಯಂತ್ರದಿಂದ ಬಲಿಷ್ಠ ರಾಷ್ಟ್ರಗಳಾದ ಮಹಾರಾಷ್ಟ್ರ ಹಾಗೂ ಕರ್ನಾಟಕವನ್ನು ತಮ್ಮ ಅದೀನಕ್ಕೆ ತೆಗೆದುಕೊಳ್ಳಬೇಕೆಂದು ಮೋದಿಯವರು ಹೊರಟಿದ್ದಾರೆ. ಬಿಜೆಪಿಯವರು ಪರೋಕ್ಷವಾಗಿ ಅಧಿಕಾರ ಹಿಡಿಯಲು ನಡೆಸುವ ಷಡ್ಯಂತ್ರವಾಗಿದೆ. ಇತ್ತೀಚೆಗೆ ನಡೆದ ಬಿಹಾರ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸುಮಾರು ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯಲ್ಲಿ ಗೆದ್ದಿದ್ದಾರೆ.ಹಾಲಿ ಮುಖ್ಯಮಂತ್ರಿಗಳನ್ನು ಸೋಲಿಸಿ ಅಧಿಕಾರ ಹಿಡಿಯುವ ಷಡ್ಯಂತ್ರ ನಡೆಸಿದ್ದಾರೆ.. ಮತದಾರರನ್ನು ಡಿಲೀಟ್ ಮಾಡಿ ಗೆಲ್ಲುವುದು ಯಾವ ನ್ಯಾಯ…? ಬಿಜೆಪಿಯವರಿಗೆ ಈ ದೇಶದ ರೈತರ, ದಲಿತರ, ಮಹಿಳೆಯರ ಹಿತ ಬೇಕಾಗಿಲ್ಲ.. ಅವರಿಗೆ ಅಧಿಕಾರ ಬೇಕು.. ನಾವು ಜಾಗೃತರಾಗದೆ ಹೋದರೆ ನಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಎಸ್‍ಐಆರ್ ಅನ್ನು ಒಂದು ಆಂದೋಲನದ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು… ಎಸ್‍ಐಆರ್ ಎಂಬ ಭೂತವನ್ನು ಹೋಗಲಾಡಿಸಲು ಸನ್ನದ್ಧರಾಗಬೇಕಾಗಿದೆ.ಎಸ್‍ಐಆರ್ ಪ್ರಕ್ರಿಯೆಯಲ್ಲಿ ಬಿಹಾರ ರಾಜ್ಯದಲ್ಲಿ 47 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ, ಗುಜರಾತ್ ನಲ್ಲಿ 12 ಲಕ್ಷ, ಪಶ್ಚಿಮ ಬಂಗಾಳದಲ್ಲಿ 96 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟಿದ್ದಾರೆ.ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಬಿಎಲ್‍ಎ-2 ಗಳು ಜವಾಬ್ದಾರಿ ತೆಗೆದುಕೊಂಡು ಈ ಪ್ರಕ್ರಿಯೆಯಲ್ಲಿ ತೊಡಗಿ ಮತ ಪಟ್ಟಿಯಲ್ಲಿ ಯಾರನ್ನು ಬಿಡದೇ ಮತ ಪಟ್ಟಿಯಲ್ಲಿ ಸೇರಿಸುವ ಕೆಲಸ ಮಾಡಬೇಕಾಗಿದೆ ಬಿಎಲ್‍ಓಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡುತ್ತಾರೆ. ಅಕ್ರಮ ವಲಸಿಗರು ಎಂದು ಹೇಳುವ ಬಿಜೆಪಿಯವರು ಬಿಹಾರದಲ್ಲಿ ಕೇವಲ ಮೂರು ಜನರನ್ನು ಮಾತ್ರ ಪತ್ತೆಹಚ್ಚಿದರು.. ಅದು ಏನು ಹೇಳುತ್ತಾರಲ್ಲ ಗುಡ್ಡ ಬಗೆದು ಇಲಿ ಹಿಡಿದರಂತೆ ಅನ್ನುವ ರೀತಿ ಆಗಿದೆ.ಮುಂದಿನ ಎರಡು ವರ್ಷ ಚುನಾವಣೆ ವರ್ಷ ಆಗಿರುವುದರಿಂದ ನಿಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಲಿಕ್ಕೆ ಇದು ಒಂದು ಅವಕಾಶ ನೀವು ಈ ಪ್ರಕ್ರಿಯೆ ಯನ್ನು ಯಶಸ್ವಿಗೊಳಿಸಿ ಎಸ್‍ಐಆರ್ ಎಂಬ ಪೆಡಂಭೂತವನ್ನು ಎದುರಿಸಿ ಸಂವಿಧಾನ ಉಳಿಸಲು ಕೈಜೋಡಿಸೋಣ ಎಂದು ಪರಮೇಶ್ವರ ನಾಯ್ಕ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕದಲ್ಲಿ ಜೂನ್ 30 ರಿಂದ ಜುಲೈ 29ರ ವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಿಮ್ಮ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್‍ಗಳನ್ನು ಭರ್ತಿ ಮಾಡಿಕೊಳ್ಳಲಿದ್ದಾರೆ.ಎನ್ಯೂಮರೇಷನ್ ಫಾರ್ಮ್ ಎಂದರೆ ಇದು ನಿಮ್ಮ ಕುಟುಂಬದ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಆಯೋಗ ನೀಡುವ ವಿಶೇಷ ನಮೂನೆಯಾಗಿದೆ. ಪ್ರತಿಯೊಬ್ಬ ಮತದಾರರಿಗೂ ಃಐಔಗಳು ಎರಡು ಪ್ರತ್ಯೇಕ ಪ್ರಿಂಟೆಡ್ ಫಾರ್ಮ್‍ಗಳನ್ನು ನೀಡುತ್ತಾರೆ. ನೀವು ಎರಡು ಫಾರ್ಮ್‍ಗಳನ್ನು ಭರ್ತಿ ಮಾಡಿ, ಸಹಿ ಹಾಕಬೇಕು. ಅದರಲ್ಲಿ ಒಂದು ಪ್ರತಿಯನ್ನು ಃಐಔ ಪಡೆದುಕೊಳ್ಳುತ್ತಾರೆ, ಇನ್ನೊಂದು ಪ್ರತಿಯಲ್ಲಿ ಃಐಔ ಅವರಿಂದ ಸಹಿ ಪಡೆದು ನೀವು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಫಾರ್ಮ್‍ನಲ್ಲಿ ಮತದಾರರ ಹೆಸರು, ಜನ್ಮದಿನಾಂಕ ಮತ್ತು ನಿಖರವಾದ ವಿಳಾಸ. ಮತದಾರರ ಗುರುತಿನ ಚೀಟಿ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ. ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಬೇಕು ಎಂದರು.
ವಿಶೇಷ ಸಮಗ್ರ ಮತದಾರರ ಪರಷ್ಕರಣ ಪಟ್ಟಿಯನ್ನು ಬಿಜೆಪಿಯವರಿಗೆ ಅಧಿಕಾರದ ದಾಹ ಹೆಚ್ಚಾದಂತೆಲ್ಲ ಹೊಸ ಕಾಯ್ದೆಗಳನ್ನ ಜಾರಿಗೆ ತಂದು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಅಂಬೇಡ್ಕರ್‍ರವರು ಕೊಟ್ಟಿರುವಂತಹ ಮತದಾನದ ಹಕ್ಕನ್ನು ಗಾಳಿಗೆ ತೂರಿ ಎಸ್‍ಐಆರ್‍ನ್ನು ಜಾರಿ ಮಾಡಿ ಪರಿಷ್ಕರಣೆ ಮಾಡಲು ಹೊರಟಿದ್ದಾರೆ.. ನಾವು ನೀವು ಈಗ ಯಾರು ಸಹ ಮತದಾರರಲ್ಲ.. ಜೂನ್ 29 ರಿಂದ ಪ್ರಾರಂಭವಾಗುವ ಎಸ್‍ಐಆರ್‍ನಲ್ಲಿ ನೊಂದಣಿಯಾದರೆ ಮಾತ್ರ ನಾವು ಮತದಾನದ ಹಕ್ಕನ್ನು ಪಡೆಯಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರಾದ ಎಂ.ಕೆ ತಾಜ್‍ಪೀರ್ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ನಮಗೆ ಮತದಾನದ ಹಕ್ಕಿದೆ.. ಮತ ಪಟ್ಟಿಯಲ್ಲಿ ನಮ್ಮ ಹೆಸರಿದೆ.. ಸ್ವತಂತ್ರ ಪೂರ್ವದಲ್ಲಿ ನಮಗೆ ಮತದಾನದ ಹಕ್ಕು ಇರಲಿಲ್ಲ.ಅಂಬೇಡ್ಕರ್ ರವರು ಸಂವಿಧಾನದಲ್ಲಿ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದ್ದಾರೆ.. ಹಾಗೆಯೇ ಮತಪಟ್ಟಿ ಪರಿಷ್ಕರಣೆ ಆಗುತ್ತಾ ಬಂದಿದೆ.. ಈಗ ಬಿಜೆಪಿಯವರು ಹುನ್ನಾರ ನಡೆಸಿ ಎಸ್‍ಐಆರ್ ತಂದಿದ್ದಾರೆ.ಎಸ್‍ಐಆರ್ ಬಂದಾಗಿನಿಂದ ನಾವು ಯಾರೂ ಸಹ ಮತದಾರರಲ್ಲ… ಮತದಾರರಾಗಬೇಕಾದರೆ ದಿನಾಂಕ: 29.06.2026 ರಿಂದ ಪ್ರಾರಂಭವಾಗಲಿರುವ ಎಸ್‍ಐಆರ್ ನಲ್ಲಿ ಭಾಗವಹಿಸಬೇಕು… ಆ ಸಂದರ್ಭದಲ್ಲಿ ಅವರು ನೀಡುವ ಅರ್ಜಿಯನ್ನು ತುಂಬಿ ಕೊಡುವುದರ ಮೂಲಕ ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷದವರೆಗೂ ಎಲ್ಲರಿಗೂ ಮತದಾನದ ಹಕ್ಕು ನೀಡಿತ್ತು.. ಆದರೆ ಬಿಜೆಪಿ ಯವರು ಎಸ್‍ಐಆರ್ ಹೆಸರಿನಲ್ಲಿ ಪರಿಷ್ಕರಣೆ ಮಾಡಲು ಹೊರಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಬಿಎಲ್‍ಎ-2 ರವರ ಜವಾಬ್ದಾರಿ ಹೆಚ್ಚಾಗಿದೆ.ಬಿಎಲ್‍ಓ ಗಳು ಬಂದಾಗ ಬಿಎಲ್‍ಎ -2 ಗಳು ಜೊತೆಯಲ್ಲಿದ್ದು ಯಾವೊಬ್ಬ ಮತದಾರನು ಸಹ ಮತಪಟ್ಟಿಯಿಂದ ಹೊರಗುಳಿಯದಂತೆ ಮತ ಪಟ್ಟಿಯಲ್ಲಿ ಸೇರಿಸುವ ಜವಾಬ್ದಾರಿ ಇದೆ ಬಿಏಲ್‍ಓ ಗಳು ನೀಡುವ ಅರ್ಜಿಗಳನ್ನು ಭರ್ತಿ ಮಾಡಿ ಸ್ಥಳೀಯ ಮಟ್ಟದ ರಾಜಕೀಯ ಮುಖಂಡರು ನೋಡಬೇಕು, ಎಲ್ಲರೂ ಜವಾಬ್ದಾರಿಗಳು ಎಲ್ಲರೂ ಮಾಡಬೇಕಿದೆ. ಬ್ಲಾಕ್ ಅಧ್ಯಕ್ಷರು ಇದರ ಕಾರ್ಯಗಳು ಮಾಡಬೇಕಿದೆ, ಎಲ್ಲಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ, ಮುಂದೆ ಬರುವ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯ ಮಾಡಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದುರ್ಗ ಶಾಸಕರಾದ ಕೆ. ಸಿ. ವೀರೇಂದ್ರ ಪಪ್ಪಿ ಮಾತನಾಡಿ ಎಸ್‍ಐಆರ್ ಭೂತವಾಗಿ ಕಾಡುತ್ತಾ ಇದೇ.ಎಲ್ಲ ವಿಧಾನಸಭಾ ಕ್ಷೇತ್ರದಕ್ಕೆ ಹೋಗಿ ಅರಿವು ಮಾಡಿಸುವ ಕಾರ್ಯ ಮಾಡಬೇಕಿದೆ. ನಿಮ್ಮ ಜವ್ದಾರಿಗಳ ಕಾರ್ಯ ನಮ್ಮ ಮುಂದೆ ಇದೆ ನಮ್ಮ ಮತದಾರರನ್ನ ಇಲ್ಲಿಯೂ ಹೋಗದಂತೆ, ಮಾಡಬೇಡಿ, ಮತದಾರದ ಪರಿಷ್ಕರಣೆ ಮಾಡುವುದಕ್ಕೆ ಬಿಜೆಪಿ ಸರಕಾರ ಮಾಡಿದೆ ನಮ್ಮ ಕಾರ್ಯ ಕರ್ತರು ಸೈನಿಕರ ರೀತಿ ಕಾರ್ಯ ಮಾಡಬೇಕಿದೆ, ಃಟಚಿ ಗಳು ಮನೆಗೆ ಭೇಟಿ ಮಾಡಬೇಕು, ಅರ್ಜಿಯನ್ನ ಸರಿಯಾಗಿ ಭರ್ತಿ ಮಾಡಬೇಕಿದೆ, ಮತದಾರರ ಪಟ್ಟಿಯಲ್ಲಿ ಇರುವಂತೆ ಮಾಡಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್. ಹನುಮಲಿ ಷಣ್ಮುಖಪ್ಪ ಮತ್ತು ಡಾ. ಬಿ. ತಿಪ್ಪೇಸ್ವಾಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಕೆ. ತಾಜ್‍ಪೀರ್, ಕಾರ್ಯಾಧ್ಯಕ್ಷರಾದ ಕೆ. ಎಂ. ಹಾಲಸ್ವಾಮಿ, ಕಾರ್ಯದರ್ಶಿ ಸಂಪತ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಆರ್. ಶಿವಣ್ಣ, ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ನಂದಿನಿ ಗೌಡ, ಚಿತ್ರದುರ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್. ಪ್ರಕಾಶ್, ನಗರಾಧ್ಯಕ್ಷರಾದ ಲಕ್ಷ್ಮೀಕಾಂತ, ಉಪಾಧ್ಯಕ್ಷರಾದ ವೆಂಕಟೇಶ್, ಗ್ಯಾರಂಟಿ ಉಪಾಧ್ಯಕ್ಷರು ಮೈಲಾರಪ್ಪ, ಕೂರಚ ಸಮಾಜದ ಕೃಷ್ಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













