Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪತಿಯ ಪವಿತ್ರ ಕರ್ತವ್ಯಗಳನ್ನು ಮರೆತ ತಾಯಿಯ ಬಳಿ ಮಗುವಿನ ಭವಿಷ್ಯ ಸುರಕ್ಷಿತವಲ್ಲ; ಪುಣೆ ಕೋರ್ಟ್ ತೀರ್ಪು

---Advertisement---

ಪುಣೆ.ಜೂನ್.24: ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸಿ, ತಂದೆಗೆ ಮಗನನ್ನು ಭೇಟಿಯಾಗಲು ನಿರಾಕರಿಸುತ್ತಿದ್ದ ತಾಯಿಗೆ ಪುಣೆಯ ಕೌಟುಂಬಿಕ ನ್ಯಾಯಾಲಯವು ತಪರಾಕಿ ನೀಡಿದೆ. ಮಗುವಿನ ಹಿತದೃಷ್ಟಿ ಮತ್ತು ಕಲ್ಯಾಣವನ್ನು ಪರಿಗಣಿಸಿ, ಸಿಂಗಾಪುರದಲ್ಲಿ ನೆಲೆಸಿರುವ ತಂದೆಗೆ 9 ವರ್ಷದ ಗಂಡು ಮಗುವಿನ ಮಧ್ಯಂತರ ಪಾಲನೆ ಹಕ್ಕನ್ನು ನ್ಯಾಯಾಲಯ ಒಪ್ಪಿಸಿದೆ.

ಈ ಸಂದರ್ಭದಲ್ಲಿ ನ್ಯಾಯಾಲಯವು ಮದುವೆಯ ಪಾವಿತ್ರ್ಯತೆ ಮತ್ತು ತಾಯಿಯ ಜವಾಬ್ದಾರಿಗಳ ಕುರಿತು ಗಂಭೀರ ಅವಲೋಕನ ಮಾಡಿದೆ. ಮಹಿಳೆಯಾದವಳು ತನ್ನ ವಿವಾಹದ ಪ್ರಮಾಣ ವಚನಗಳನ್ನು ಉಳಿಸಿಕೊಳ್ಳಬೇಕು, ಪತಿಯನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಾಳಜಿಯಿಂದ ನೋಡಿಕೊಳ್ಳಬೇಕು ಹಾಗೂ ಆತನ ಒಳಿತಿಗಾಗಿ ಪ್ರಾರ್ಥಿಸಬೇಕು. ಒಂದು ವೇಳೆ ಆಕೆ ಪತಿಯ ಕಡೆಗೆ ಈ ‘ಪವಿತ್ರ’ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದರೆ, ಅಂತಹ ವಾತಾವರಣದಲ್ಲಿ ಮಗುವಿನ ಭವಿಷ್ಯ ‘ಅಸುರಕ್ಷಿತ’ವಾಗಿರುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ

2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ 2016ರಲ್ಲಿ ಮಗ ಜನಿಸಿದ್ದನು. ತಂದೆಯು ಸಿಂಗಾಪುರದ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ, ಇಡೀ ಕುಟುಂಬ 2022ರಲ್ಲಿ ಸಿಂಗಾಪುರಕ್ಕೆ ಸ್ಥಳಾಂತರಗೊಂಡಿತ್ತು. ಅಲ್ಲಿ ಮಗುವನ್ನು ಅಂತಾರಾಷ್ಟ್ರೀಯ ಶಾಲೆಗೆ ಸೇರಿಸಲಾಗಿತ್ತು. ಆದರೆ, ಮಾರ್ಚ್ 2025ರಲ್ಲಿ ಪತಿ ಅಧಿಕೃತ ಪ್ರವಾಸದಲ್ಲಿದ್ದಾಗ, ಪತ್ನಿ ಮಗುವಿನೊಂದಿಗೆ ಪುಣೆಗೆ ಮರಳಿದ್ದರು. ಪತಿಗೆ ಯಾವುದೇ ಮಾಹಿತಿ ನೀಡದೆ ಮಗುವನ್ನು ಸ್ಥಳೀಯ ಶಾಲೆಗೆ ಸೇರಿಸಿ, ಮರಳಿ ಸಿಂಗಾಪುರಕ್ಕೆ ಬರಲು ನಿರಾಕರಿಸಿದ್ದರು.

ಇದರಿಂದಾಗಿ ತಂದೆಯು ಸಿಂಗಾಪುರ ಮತ್ತು ಭಾರತ ಎರಡೂ ದೇಶಗಳ ನ್ಯಾಯಾಲಯಗಳ ಮೊರೆ ಹೋಗಿದ್ದರು. ಜುಲೈ 2025ರಲ್ಲಿ ಸಿಂಗಾಪುರ ನ್ಯಾಯಾಲಯವು ತಂದೆಗೆ ಮಗುವಿನ ಪಾಲನೆ ಹಕ್ಕು ನೀಡಿ, ಮಗುವನ್ನು ಮರಳಿ ಕಳುಹಿಸುವಂತೆ ಆದೇಶಿಸಿತ್ತು. ಆದರೆ ತಾಯಿ ಈ ಆದೇಶವನ್ನು ಪಾಲಿಸದಿದ್ದಾಗ, ತಂದೆ ಪುಣೆ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದರು. ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಗುವಿನ ಭವಿಷ್ಯಕ್ಕೆ ಮೊದಲ ಆದ್ಯತೆ ನೀಡಿ ಈ ಪ್ರಕರಣದ ಮರುವಿಚಾರಣೆ ನಡೆಸಲಾಯಿತು.

ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಗಣೇಶ್ ಘುಲೆ ಅವರು ತಾಯಿಯ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯ ನೇಮಿಸಿದ ಕಮಿಷನರ್ ತಂದೆ-ಮಗನ ಭೇಟಿಗೆ ಪ್ರಯತ್ನಿಸಿದಾಗಲೂ ತಾಯಿ ಅಡ್ಡಿಪಡಿಸಿದ್ದರು. ಅಷ್ಟೇ ಅಲ್ಲದೆ, 10 ವರ್ಷದ ಮಗುವಿಗೆ ತಂದೆಯ ವಿರುದ್ಧ ತಪ್ಪು ತಿಳುವಳಿಕೆ ಮೂಡಿಸಿ, ತಂದೆಯನ್ನು ರಾಕ್ಷಸ ಎಂದು ಕರೆಯುವಂತೆ ಮತ್ತು ಆತನನ್ನು ಜೀವಂತವಾಗಿ ನೋಡಲು ಇಷ್ಟವಿಲ್ಲ ಎಂಬಂತಹ ಆಘಾತಕಾರಿ ಮಾತುಗಳನ್ನು ಆಡುವಂತೆ ಪ್ರೇರೇಪಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಇದು ಮಗುವಿನ ತೀವ್ರ ಭಾವನಾತ್ಮಕ ಒತ್ತಡವನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು.

ಸಿಂಗಾಪುರದಲ್ಲಿ ಮೂರು ವರ್ಷ ಕಳೆದಿರುವ ಮಗುವಿಗೆ ಅಲ್ಲಿನ ಶೈಕ್ಷಣಿಕ ಮತ್ತು ಸಾಮಾಜಿಕ ವಾತಾವರಣ ಒಗ್ಗಿಕೊಂಡಿದೆ. ತಂದೆ ಉತ್ತಮ ಉದ್ಯೋಗದಲ್ಲಿದ್ದು, ಮಗುವನ್ನು ನೋಡಿಕೊಳ್ಳಲು ಅಜ್ಜಿಯ ಆಸರೆಯೂ ಇರುವುದರಿಂದ ಮಗುವನ್ನು ತಂದೆಯ ವಶಕ್ಕೆ ನೀಡುವುದು ಸೂಕ್ತ ಎಂದು ನ್ಯಾಯಾಲಯ ನಿರ್ಧರಿಸಿದೆ.

ತಾಯಿಯು ತಂದೆಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಅಕ್ರಮ ಸಂಬಂಧದ ಆರೋಪಗಳನ್ನು ಮಾಡಿದ್ದಾರಾದರೂ, ಇವುಗಳನ್ನು ಪೂರ್ಣ ಪ್ರಮಾಣದ ವಿಚಾರಣೆಯ ಸಂದರ್ಭದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದ ನ್ಯಾಯಾಲಯ, ಸದ್ಯಕ್ಕೆ ಮಗುವನ್ನು ತಕ್ಷಣವೇ ತಂದೆಗೆ ಒಪ್ಪಿಸುವಂತೆ ಆದೇಶಿಸಿದೆ. ಈ ಆದೇಶವು ಹಂಗಾಮಿಯಾಗಿದ್ದು, ಅಂತಿಮ ತೀರ್ಪಿನ ಮೇಲೆ ಇದು ಪ್ರಭಾವ ಬೀರಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now