Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೆಇಇ” 2ನೇ ಹಂತದ ಮೇನ್ಸ್‌ ಪರೀಕ್ಷೆ : 40ನೇ ರ‌್ಯಾಂಕ್ ಪಡೆದು ಹೊಸ ಇತಿಹಾಸ ಸೃಷ್ಠಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ಪಿಯು ಕಾಲೇಜು

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ನಲ್ಲಿ ನಡೆದ “ಜೆಇಇ 2ನೇ ಹಂತದ ಮೇನ್ಸ್‌” ಪರೀಕ್ಷೆಯಲ್ಲಿ  (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅತ್ಯುತ್ತಮ ರ್ಯಾಂಕ್‌ ಗಳಿಸುವ ಮೂಲಕ “ಜೆಇಇ ಅಡ್ಡಾನ್ಸ್ಡ್‌” ಪರೀಕ್ಷೆಗೆ ಅರ್ಹತೆ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಐಐಟಿ ಮುಂಬ್ಯೆ, ಖರಗ್‌ಪುರ್‌, ಲಕ್ನೊ ದಲ್ಲಿ ತರಬೇತಿ ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 40 ವಿದ್ಯಾರ್ಥಿಗಳು “ಜೆಇಇ ಮೇನ್ಸ್‌” ನಿಂದ “ಐಐಟಿ ಅಡ್ಡಾನ್ಸ್ಡ್‌” ಗೆ ಅರ್ಹತೆ ಪಡೆದಿದ್ದಾರೆ.

ಅದರಲ್ಲಿ ಕ್ರಮವಾಗಿ
ಕು.ಕೆ ಪಿ ಪೂಜಿತ್‌ ಕುಲಾಲ್‌ 40ನೇ ಆಲ್‌ ಇಂಡಿಯಾ ರ್ಯಾಂಕ್‌,
ಕು.ಆನಂದ್‌ ಎನ್‌ ವೈ- 354, ,
ಕು.ಪ್ರಜ್ವಲ್‌-1600,
ಕು.ಮಹಾಲಕ್ಷ್ಮಿ ಎ -1702,
ಕು.ಪ್ರವೀಣ್‌ ತಳವಾರ-1965
ಕು.ನೀಲಾಂಬಿಕಾ ತಳವಾರ-3683,
ಕು.ರಕ್ಷೀತಾ ಟಿ ಎಂ-4209,
ಕು.ಆದಿತ್ಯ ಎಸ್‌ ರಾಮ್‌-4372,
ಕು.ನಯನ ಬಿ- 4411,
ಕು.ಛಾಯಾ ಟಿ-4751,
ಕು.ಸ್ನೇಹ ಕೆ ಪಿ-4902ನೇ ಆಲ್ ಇಂಡಿಯಾ ರ್ಯಾಂಕ್ ಗಳಿಸುವ ಮೂಲಕ “ಐಐಟಿ ಅಡ್ಡಾನ್ಸ್ಡ್‌” ಗೆ ಅರ್ಹತೆಯನ್ನು ಪಡೆದು, ಕಾಲೇಜಿಗೆ ಹಾಗೂ ರಾಜ್ಯಕ್ಕೆ  ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ.  ಇವರೆಲ್ಲರೂ ಪ್ರತಿಷ್ಠಿತ “ಐಐಟಿ” ಕಾಲೇಜುಗಳಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕಾಲೇಜಿಗೆ ಹಾಗೂ ರಾಜ್ಯಕ್ಕೆ  ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್‌ ಅಮೋಘ್‌, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...