Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದ್ಯಾ..? ಈ ಆಹಾರ ತಿನ್ನಿ ಸರಿಯಾಗುತ್ತೆ..!

---Advertisement---

ಮನುಷ್ಯನ ದೇಹದಲ್ಲಿ ಎಲ್ಲಾ ಭಾಗಗಳು ಸರಿಯಾಗಿದ್ದರೆ ಮಾತ್ರ ಬದುಕು ಚಂದ ಎನಿಸುವುದು. ಯಾವುದಾದರೊಂದು ಅಂಗ ಡ್ಯಾಮೇಜ್ ಆದರೆ ನರಕ ಎನಿಸಿ ಬಿಡುತ್ತದೆ. ಆರೋಗ್ಯ ಕೊಡು ದೇವರೆ ಅಂತ ಅದೆಷ್ಟೋ ಜನ ಸದಾ ಬೇಡಿಕೊಳ್ಳುತ್ತಾರೆ. ಅದರಲ್ಲೂ ಮೂಳೆಯ ಸಮಸ್ಯೆ ಇದ್ದರಂತೂ ಕೂರಂಗಿಲ್ಲ, ನಿಲ್ಲಂಗಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಕ್ಯಾಲ್ಸಿಯಂ ಸಮಸ್ಯೆ ಚಿಕ್ಕವಯಸ್ಸಿನವರಲ್ಲಿಯೇ ಕಾಡುವುದಕ್ಕೆ ಶುರುವಾಗಿದೆ.

ಕ್ಯಾಲ್ಸಿಯಂ ಸಮಸ್ಯೆ ಆದರೆ ನಮ್ಮ ದೇಹದಲ್ಲಿ ಮಜ್ಹಲ್ಸ್ ಹಿಡಿದುಕೊಳ್ಳುತ್ತೆ, ಮೀನಿನ ಖಂಡ ನೋವಾಗುತ್ತೆ, ದೇಹದ ಮೂಳೆಯ ಭಾಗದಲ್ಲಿ ಮೂಮೆಂಟ್ ಮಾಡುವುದಕ್ಕೇನೆ ಕಷ್ಟ ಎನಿಸುತ್ತದೆ, ಎಷ್ಟೇ ವಿಶ್ರಾಂತಿ ಪಡೆದುಕೊಂಡರು ತುಂಬಾನೇ ಸುಸ್ತಾಗುತ್ತೆ, ಹಲ್ಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ, ಹಾರ್ಟ್ ಬೀಟ್ ನಲ್ಲೂ ಪ್ರಾಬ್ಲಮ್ಸ್ ಬರುತ್ತೆ, ಕಾಲು ಮೂಳೆಯಲ್ಲಿ ಶಬ್ಧ ಬರುವುದಕ್ಕೆ ಶುರಿವಾಗುತ್ತೆ ಹೀಗೆ ಅನೇಕ ಸಮಸ್ಯೆಗಳು ಕಾಡುವುದಕ್ಕೆ ಶುರುವಾಗುತ್ತದೆ. ಇದು ಕ್ಯಾಲ್ಸಿಯಂ ಕಡಿಮೆಯಾದಾಗ. ಹಾಗಾದ್ರೆ ಕ್ಯಾಲ್ಸಿಯಂ ದೇಹದಲ್ಲಿ ಉಳಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಅಂದ್ರೆ, ಆಹಾರದ ಕಡೆಗೆ ಗಮನ ಕೊಡಬೇಕಾಗುತ್ತದೆ. ಕ್ಯಾಲ್ಸಿಯಂ ಅಧಿಕವಾಗಿರುವಂತ ಆಹಾರವನ್ನೇ ಸೇವನೆ ಮಾಡಬೇಕು.

ಅದರಲ್ಲಿ ಬಹಳ ಮುಖ್ಯವಾಗಿ ಹಾಲು. ಸೋಯಾ ಮಿಲ್ಕ್, ಓಟ್ಸ್ ಮಿಲ್ಕ್, ಬಾದಾಮಿ ಹಾಲು, ಅಕ್ಕಿಯಿಂದ ರೆಡಿ ಮಾಡಿದ ನೀರನ್ನು ಸಹ ಕುಡಿಯಬಹುದು. ಹುರುಳಿ ಕಾಳು, ಬಿಳಿ ಬೀನ್ಸ್, ಕಡಲೇ ಕಾಳಿ, ಬ್ರೌನ್ ರೈಸ್, ರಾಗಿ, ಗಸಗಸೆಯನ್ನು ಬಳಸಬಹುದು. ಅದೇ ರೀತಿ ನುಗ್ಗೆ ಸೊಪ್ಪು, ಕರಿಬೇವು, ಪಾಲಕ್, ಮೆಂತ್ಯ ಸೊಪ್ಪನ್ನ ಬಳಸುವುದರಿಂದ ಕ್ಯಾಲ್ಸಿಯಂ ಸಮಸ್ಯೆ ಬಗೆಹರಿಯುತ್ತೆ. ದೇಹಕ್ಕೆ ಬೇಕಾದ ಪೋಷ್ಠಿಕಾಂಶ ಸಿಗುತ್ತದೆ. ಈ ಮೂಲಕ ಮೂಳೆಯ ಸಮಸ್ಯೆಗೆ ಪರಿಹಾರವೂ ಸಿಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment