Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾವನ ಹೆಸರಲ್ಲಿ ಇನ್ಶುರೆನ್ಸ್ ಮಾಡಿಸಿ, ಅಳಿಯನೇ ಕೊಂದು ಬಿಟ್ಟ : ದಾವಣಗೆರೆಯಲ್ಲೊಂದು ಭಯಾನಕ ಘಟನೆ..!

---Advertisement---

 

ಸುದ್ದಿಒನ್, ದಾವಣಗೆರೆ : ಹಣಕ್ಕಾಗಿ ಅದೆಷ್ಟೋ ಕೊಲೆಗಳು ನಡೆದು ಹೋಗಿವೆ. ಅದರಲ್ಲೂ ಇನ್ಶುರೆನ್ಸ್ ಹಣಕ್ಕಾಗಿ ಎಷ್ಟೋ ಜನ ಬದುಕಿದ್ದವರನ್ನು ಸಾಯಿಸಿದ್ದಾರೆ. ಈಗ ದಾವಣಗೆರೆಯಲ್ಲೂ ಅಂಥದ್ದೇ ಘಟನೆ ನಡೆದಿದೆ. ಮಾವನ ಹೆಸರಲ್ಲಿದ್ದ 40 ಲಕ್ಷ ಹಣ ಪಡೆಯಲು ಅಳಿಮಯ್ಯ ಕೊಲೆ ಮಾಡಿದ್ದಾನೆ. ಈಗ ಪೊಲೀಸರ ಅತಿಥಿಯಾಗಿ ಹಣವೂ ಇಲ್ಲ, ಜೀವನವೂ ಇಲ್ಲ ಎಂಬಂತೆ ಬದುಕನ್ನು ಮೂರಾಬಟ್ಟೆ ಮಾಡಿಕೊಂಡಿದೆ ಗ್ಯಾಂಗ್.

ಆಗಿದ್ದು ಇಷ್ಟು: ದುಗ್ಗೇಶ್ ದಾವಣಗೆರೆಯ ನಿವಾಸಿ. ಈತನಿಗೆ ಈಗ 32 ವರ್ಷ. ಹಣ್ಣಿನ ವ್ಯಪಾರ ಮಾಡಿಕೊಂಡಿದ್ದ. ಈತನ ಅಳಿಯ ಗಣೇಶ್, ಆಟೋ ಚಾಲಕನಾಗಿದ್ದ. ದುಗ್ಗೇಶ್ ಸಹೋದರ ಗೋಪಿ ಎಂಬಾತ ಗಣೇಶನ ಬಳಿ ಬಡ್ಡಿಗಾಗಿ ಒಂದು ಲಕ್ಷ ರೂಪಾಯಿ ಸಾಲ ಮಾಡಿದ್ದ. ಆದರೆ ಆ ಸಾಲ ತಿರೀಸಲಾಗದೆ ಓಡಿ ಹೋಗಿದ್ದ. ಆದರೂ ಗೋಪಿ ಹಾಗೂ ದುಗ್ಗೇಶ್ ಇಬ್ಬರು ಆತ್ಮೀಯರಾಗಿದ್ದರು ಎಂಬುದು ಗಣೇಶನಿಗೆ ಗೊತ್ತಿತ್ತು. ಹಣ ವಾಪಾಸ್ ನೀಡಲು ಹೇಳಿ ಎಂದು ಮಾವನಿಗೆ ಗಣೇಶ ಸಾಕಷ್ಟು ಸಲ ಹೇಳಿದ್ದ. ಆದರೆ ಹಣ ವಾಪಾಸ್ ಬಾರದೆ ಇದ್ದಾಗ ಗಣೇಶ್ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದ.

ದುಗ್ಗೇಶ್ ದೊಡ್ಡ ಕುಡುಕನಾಗಿದ್ದ. ಈತನ ಹೆಸರಲ್ಲಿ ಲೈಫ್ ಇನ್ಶುರೆನ್ಸ್‌ ಮಾಡಿಸಿ, ಆಮೇಲೆ ಸಾಯಿಸಿ ಹಣವನ್ನು ತಮ್ಮದಾಗಿಸಿಕೊಳ್ಳುವ ಪ್ಲ್ಯಾನ್‌. ಅದರಂತೆ ಇನ್ಶುರೆನ್ಸ್ ಕೂಡ ತಾನೇ ಮಾಡಿಸಿದ. ನಾಮಿನಿ ತನ್ನ ಹೆಸರನ್ನು ನೀಡಿದ. ಬ್ಯಾಂಕ್ ಬುಕ್, ಚೆಕ್ ಎಲ್ಲವನ್ನು ತನ್ನ ಬಳಿ ಇಟ್ಟುಕೊಂಡ. ತನ್ನ ಸ್ನೇಹಿತರಾದ ಅನಿಲ್, ಶಿವಕುಮಾರ್, ಮಾರುತಿ ಜೊತೆಗೆ ಸೇರಿ ಕೊಲೆ ಮಾಡಿ, ಮನೆಗೆ ತಂದು ಹಾಕಿದ. ಇದೀಗ ಇನ್ಶುರೆನ್ಸ್ ಹಣ ಪಡೆಯುವುದಕ್ಕೂ ಮುನ್ನವೇ ಅಜಾದ್ ನಗರ ಪೊಲೀಸರಿಗೆ ನಾಲ್ಕು ಜನ ಅತಿಥಿಗಳಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಜಾದ್ ನಗರ ಠಾಣೆಯ ಪಿಐ ಅಶ್ವಿನ್ ಕುಮಾರ್ ಅವರು, ಆರೋಪಿ ಗಣೇಶ್ ಇನ್ಶುರೆನ್ಸ್ ಬಾಂಡ್ ಮಾಡಿಸಿ 40 ಲಕ್ಷ ರೂಪಾಯಿ ಹಣದ ಆಸೆಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಎಫ್ಐಆರ್ ದಾಖಲು ಮಾಡಿ ನಾಲ್ವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment