ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 06 : ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಜಾತಿ ಗಣತಿ ಆರಂಭಿಸಿದ್ದು, ಮನೆ ಮನೆಗೆ ಗಣತಿಗೆ ಬಂದಾಗ ಕೊರಚ ಕೊರಚಾರ್ ಎಂದು ಬರೆಸುವಂತೆ ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮನವಿ ಮಾಡಿದ್ದಾರೆ.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐದರಿಂದ ಆರು ಸಾವಿರ ಕುಟುಂಬಗಳು ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಸಾಮಾಜಿಕ
ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ನಾಗಮೋಹನ್‍ದಾಸ್ ಆಯೋಗ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಜಾತಿ ಗಣತಿ ನಡೆಸಿ ವರದಿ ಸಿದ್ದಪಡಿಸಲಿದೆ. ನಿಖರವಾದ ಜಾತಿ ನಮೂಸಿದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಕೊರಚ ಜನಾಂಗ ಯಾರು ಗಣತಿಯಿಂದ ವಂಚಿತರಾಗಬಾರದೆಂದು ವೈ.ಕುಮಾರ್ ತಿಳಿಸಿದರು.
ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಜಿಲ್ಲಾಧ್ಯಕ್ಷ ತಿಮ್ಮಣ್ಣ, ರಾಮಣ್ಣ, ಆನಂದಪ್ಪ, ರಾಜಣ್ಣ, ಗಂಗಮ್ಮ, ಲಕ್ಷ್ಮಿ, ಪಾರ್ವತಿ, ಗೀತಮ್ಮ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.


















