ಆ.24 ಕ್ಕೆ ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಚೇರಿ ಉದ್ಘಾಟನೆ

suddionenews
1 Min Read

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,                         ಮೊ : +91 87220 22817

ಚಿತ್ರದುರ್ಗ,(ಆ.22):  ಆಮ್ ಆದ್ಮಿ ಪಕ್ಷ ಜಿಲ್ಲಾ ಕಚೇರಿಯು ಆ. 24 ರಂದು ನಗರದಲ್ಲಿ ಪ್ರಾರಂಭವಾಗಲಿದ್ದು, ರಾಜ್ಯಾಧ್ಯಕ್ಷರು ಸೇರಿದಂತೆ ವಿವಿಧ ಮುಖಂಡರು ಆಗಮಿಸಲಿದ್ದಾರೆ ಜಿಲ್ಲಾಧ್ಯಕ್ಷರಾದ ಜಗದೀಶ್ ತಿಳಿಸಿದರು.

ನಗರದಲ್ಲಿ ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ನೂತನವಾಗಿ ಆರಂಭವಾಗಿದೆ. ಇದನ್ನು ಹುಟ್ಟಿ ಹಾಕಿ ಬೆಳಸಬೇಕಿದೆ. ಇದಕ್ಕಾಗಿ ಕಚೇರಿ ಅವಶ್ಯಕತೆ ಇದ್ದು ಅದನ್ನು ಪ್ರಾರಂಭ ಮಾಡಲಾಗುತ್ತಿದೆ. ಭ್ರಷ್ಠಾಚಾರ ಮುಕ್ತವಾದ ಆಡಳಿತವನ್ನು ನೀಡಬೇಕೆನ್ನುವುದು ನಮ್ಮ ಪಕ್ಷದ ಉದ್ದೇಶವಾಗಿದೆ. ಈಗ ಶೇ.40 ರಷ್ಟು ಕಮೀಷನ್ ಹೋಗುತ್ತಿದೆ ಇದು ಮುಂದಿನ ದಿನಮಾನದಲ್ಲಿ ಜನತೆಗೆ ಸೇರಬೇಕಿದೆ ಎಂದ ಅವರು ನಗರದ ವಿ.ಪಿ.ಬಡಾವಣೆಯಲ್ಲಿನ ಮಾರುತಿ ಗ್ಯಾಸ್ ಬಳಿ ಕಚೇರಿ ಪ್ರಾರಂಭವಾಗಲಿದೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ, ಮುಖ್ಯಮಂತ್ರಿ ಚಂದ್ರು, ಭಾಸ್ಕರ್ ರಾವ್, ಟೆನ್ನಿಸ್ ಕೃಷ್ಣಾ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ನಗರದ ನೀಲಕಂಠೇಶ್ವರ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ನಗರದ ವಿವಿಧ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಕಚೇರಿ ತಲುಪಲಿದೆ. ನಂತರ ಕಚೇರಿ ಉದ್ಘಾಟನೆಯಾಗಲಿದ್ದು, ತದ ನಂತರ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದರು.

ಪಕ್ಷ ಉಪಾಧ್ಯಕ್ಷರ ಮೇಲೆ ಬಂದಿರುವ ಆರೋಪ ನಿರಾಧಾರವಾಗಿದೆ ನಮ್ಮ ಪಕ್ಷದ ಅಭೀವೃದ್ದಿಯನ್ನು ಕಂಡು ಬೇರೆಯವರು ಹೊಟ್ಟೆ ಹುರಿಯಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದನ್ನು ಅವರು ಸುಳ್ಳು ಎಂದು ಸಾಭೀತು ಮಾಡಿ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಜಗದೀಶ್ ಹೇಳೀದರು.
ಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶೀ ಮನೋಹರ, ಉಪಾಧ್ಯಕ್ಷರಾದ ಫಾರೂಕ್ ಆಜ್ಮತ್ ಆಲಿ, ಸಂಘಟನಾ ಕಾರ್ಯದರ್ಶೀ ಶಶಿಧರ್, ತಾಲ್ಲೂಕು ಅಧ್ಯಕ್ಷ ರಾಮಪ್ಪ, ಮುಖಂಡರಾದ ಶೇಷಣ ಕುಮಾರ್, ಗುರುಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *