Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂದಿನ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಂದ ಇಂದಿನ ಡಿ.ಕೆ. ಶಿವಕುಮಾರ್ ತನಕ ಭದ್ರೆಗಾಗಿ ಶ್ರಮಿಸಿದವರ ಮಹತ್ವದ ಮಾಹಿತಿ

---Advertisement---

 

ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು,
ಜನಾಶಯ ಪ್ರಭ
ಚಿತ್ರದುರ್ಗ
ಮೊ : 88809 99001

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 08 : ಚಿತ್ರದುರ್ಗ ಮತ್ತು ತುಮಕೂರು ಎಂದರೇ ತಕ್ಷಣ ನೆನಪಿಗೆ ಬರುವುದು ಭೀಕರ ಬರಗಾಲದ ಕರಾಳ ಛಾಯೆ. ಬಿರುಸಾದ ಬಿಸಿಲು, ನೀರಿಲ್ಲದ
ಬರಡು ಕೃಷಿಭೂಮಿ ಹಾಗೂ ಹನಿ ನೀರಿಗಾಗಿ ಕಾಯುವ ಜೀವಗಳು. ಆದರೆ, ಈ ಒಣ ಭೂಮಿಯ ದಾಹ ತೀರಿಸಲು ಕೇವಲ ಕಾಲುವೆ ತೋಡಲಿಲ್ಲ, ದಶಕಗಳ ಕಾಲ
ಶ್ರಮ ಮತ್ತು ಮಹಾನ್ ನಾಯಕರ ಕನಸಿನ ಬೆವರು ಹರಿಯಿತು.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ದೂರದೃಷ್ಠಿ ಮತ್ತು ಸವಾಲುಗಳು ಈ ಭಾಗದ ಬರಪೀಡಿತ ಜನರ ಕಣ್ಣೀರನ್ನು ಒರೆಸಲು ಮೊದಲು ಮುನ್ನುಡಿ ಬರೆದರು. ಭದ್ರಾ ಯೋಜನೆ ಮೂಲಕ ಬಯಲುಸೀಮೆಗೆ ನೀರು ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯ ಕನಸು ಅವರು ಅಂದೇ ಕಂಡಿದ್ದರು. ಆ ಕನಸಿನಂತೆ ಭದ್ರಾ ಅಣೆಕಟ್ಟು ನಿರ್ಮಾಣಗೊಂಡು, ಎಡ-ಬಲದಂಡೆ ಮೂಲಕ ನೀರು ಹರಿಸಲು ಯೋಜಿಸಲಾಯಿತು. ಗುರುತ್ವಾಕರ್ಷಣೆ ಮೂಲಕ ಎಡದಂಡೆ ನಾಲೆಯಲ್ಲಿ ನೀರು ಹರಿಯುತ್ತಾದರೂ,
ಬಲದಂಡೆಯ ಜನರಿಗೆ ನೀರು ತಲುಪಲೇ ಇಲ್ಲ. ಚಿತ್ರದುರ್ಗದ ಭೂಪ್ರದೇಶ ಮಲೇನಾಡು ಭಾಗಕ್ಕಿಂತ ಎತ್ತರದಲ್ಲಿದ್ದ ಕಾರಣ ಮತ್ತು ಲಿಫ್ಟ್ ನಂತರ ಆಧುನೀಕ ಬೃಹತ್ ಯಂತ್ರಗಳು ಮತ್ತು ನಿರಂತರ ವಿದ್ಯುತ್ ಅಭಾವದಿಂದಾಗಿ, ತಾಂತ್ರಿಕ ಸವಾಲುಗಳಿಂದಾಗಿ ನೀರು ಹರಿಯುವ ಕನಸು ಮಧ್ಯದಲ್ಲಿಯೇ ನಿಂತಿತು.

ಬಯಲುಸೀಮೆಗೆ ನೀರು ಒದಗಿಸುವ ಯೋಜನೆಗೆ ಬಿ.ಡಿ.ಜತ್ತಿ ಮತ್ತು ಬಾಳೇಕುಂದ್ರಿ ಅವರು ಪರಿಶ್ರಮಪಟ್ಟರೂ, ನಂತರ ಎಸ್.ನಿಜಲಿಂಗಪ್ಪ ಅವರ ಹಂಬಲವಿದ್ದರೂ ದಶಕಗಳೇ ಕಳೆದು ಹೋದವು. ರೈತಸಂಘಟನೆಗಳು, ಎರೆನಾಡು
ರೈತಸಂಘ, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಹೋರಾಟ ಸಮಿತಿ, ಕಾರ್ಮಿಕ ಸಂಘಟನೆಗಳು, ಸಿಪಿಐ, ಕಿಸಾನ್ ಸಭಾ ಹೀಗೆ ಅನೇಕ ಸಂಘಟನೆಗಳು ಭದ್ರಾ ಯೋಜನೆ ಜಾರಿಗಾಗಿ ಹೋರಾಟ ನಡೆಸಿದವು. ಆದರೂ ಹೋರಾಟಗಾರರ ಕನಸು
ಈಡೇರಿಲಿಲ್ಲ. ನೀರಾವರಿ ಯೋಜನೆ ಜಾರಿಗಾಗಿ ಸಂಘಟನೆಗಳು ನಡೆಸಿದ್ದ ಹೋರಾಟದ ಅರಿವು
ಹೊಂದಿದ್ದ ಮುಕ್ತ ವಿಚಾರ ವೇದಿಕೆಯಲ್ಲಿದ್ದ ಪತ್ರಕರ್ತರು, ಚಿಂತಕರು, ಉಪನ್ಯಾಸಕರು ಎಲ್ಲ ಸಂಘಟನೆಗಳನ್ನೊಳಗೊಂಡು ಆರಂಭಿಸಿದ ಚಿತ್ರದುರ್ಗ ಜಿಲ್ಲಾ
ನೀರಾವರಿ ಹೋರಾಟ ಸಮಿತಿ ಭದ್ರಾ ಹೋರಾಟಕ್ಕೆ ಅಡಿಗಲ್ಲು ಹಾಕುವವರೆಗೂ ತನ್ನ ಹೋರಾಟದಿಂದ ವಿಶ್ರಮಿಸಲಿಲ್ಲ.

ಎಸ್.ಎಂ.ಕೃಷ್ಣ 2003 ಅವಧಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು, ಆದಾದ ನಂತರ ಹಲವು ಪರಿಷ್ಕೃತ ಯೋಜನೆಯೊಂದಿಗೆ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು. ಆದಾದ ನಂತರ ಕಾಮಗಾರಿ ಎಂದೂ ನಿಲ್ಲದೆ ಆಮೆವೇಗದಲ್ಲಿ ಸಾಗುತ್ತಾ ಬಂದಿತು. ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು 2026, ಸೆ.6ರಂದು ನೀರನ್ನು ಹರಿಸುವ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಿದರು. ಸೆ.9ರಂದು ಚಿತ್ರದುರ್ಗದ
ಗೋನೂರು ಬಳಿ ಭದ್ರೆ ಬೋರ್ಗರೆಯುವಳು. ಅದನ್ನು ಕಣ್ತುಂಬಿಕೊಳ್ಳಲು ಬಯಲುಸೀಮೆ ಜನರು ಕಾತುರದಿಂದ ಕಾಯುತ್ತಿರುವರು.

ಶ್ರಮಿಸಿದ ರಾಜರು ಮುಖ್ಯಮಂತ್ರಿಗಳು :
ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್,
ಜಯಚಾಮರಾಜೇಂದ್ರ ಒಡೆಯರ್,
ಮುಖ್ಯಮಂತ್ರಿಗಳಾಗಿದ್ದ
ಬಿ.ಡಿ.ಜತ್ತಿ,
ಎಸ್.ನಿಜಲಿಂಗಪ್ಪ,
ರಾಮಕೃಷ್ಣ ಹೆಗಡೆ,
ಎಚ್.ಡಿ.ದೇವೇಗೌಡ,
ಜೆ.ಎಚ್.ಪಟೇಲ್,
ಎಸ್.ಎಂ.ಕೃಷ್ಣ,
ಧರ್ಮಸಿಂಗ್,
ಎಚ್.ಡಿ.ಕುಮಾರಸ್ವಾಮಿ,
ಬಿ.ಎಸ್.ಯಡಿಯೂರಪ್ಪ,
ಸದಾನಂದಗೌಡ,
ಜಗದೀಶ್ ಶೆಟ್ಟರ್,
ಸಿದ್ದರಾಮಯ್ಯ,
ಡಿ.ಕೆ.ಶಿವಕುಮಾರ್ ಇವರೆಲ್ಲರೂ ತಮ್ಮ ಆಡಳಿತಾದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಾರೆ.

ಇಂಜಿನಿಯರ್‌ಗಳು :
ಎಂ.ನರಸಿಂಹಯ್ಯ,
ಎಸ್.ಜಿ.ಬಾಳೆಕುಂದ್ರಿ,
ಕೆ.ಸಿ.ರೆಡ್ಡಿ,
ಜಿ.ಎಸ್.ಪರಮಶಿವಯ್ಯ,
ಡಿ.ಎಂ.ದೇಸಾಯಿ,
ಎಂ.ಎಸ್.ಮೋಹನ್‌ಕುಮಾರ್,
ಪ್ರೊ.ಎಂ.ಶೇಖರ್,
ಡಾ.ವೈ.ನಿಂಗರಾಜು,
ಶ್ರೀಕಂಠಮೂರ್ತಿ ಇವರೆಲ್ಲರೂ ಭದ್ರಾ ಮೇಲ್ದಂಡೆ ಯೋಜನೆ
ರೂಪುರೇಷ ಸಿದ್ಧಪಡಿಸಿ ಆ ಕಾಲಘಟ್ಟದಲ್ಲಿನ ಆಳುವ ಸರ್ಕಾರಕ್ಕೆ ವರದಿ ನೀಡಿದವರು. ಯೋಜನೆ ಜಾರಿ ಬಳಿಕ ಇಲ್ಲಿಯವರೆಗೂ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಆಗಿ ಅನೇಕರು ಕಾರ್ಯನಿರ್ವಹಿಸಿದ್ದು,
ಯೋಜನೆಗೆ ಶ್ರಮಿಸಿದ ಮುಖ್ಯ ಇಂಜಿನಿಯರ್‌ಗಳಾದ ಆರ್.ರುದ್ರಯ್ಯ,
ಆರ್.ಚೆಲುವರಾಜ್,
ಎಂ.ಜಿ.ಶಿವಕುಮಾರ್,
ಕೆ.ತಿಪ್ಪೇಸ್ವಾಮಿ,
ಎಂ.ವೇಣುಗೋಪಾಲ,
ರಾಘವನ್,
ಮಾಧವ,
ಎಂ.ರವಿ,
ಬಿ.ವಿ.ಜಗದೀಶ್,
ಕೆ.ಎಂ.ಶಿವಪ್ರಕಾಶ್,
ವಿ.ಕವಿತಾ,
ಎಫ್.ಎಚ್.ಲಮಾಣಿ,                              ಎಚ್.ರವಿಶಂಕರ್.

ಹಿಂದುಳಿದ ಪ್ರದೇಶಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದ ಚಿತ್ರದುರ್ಗ ಜಿಲ್ಲೆ ದೊಗ್ಗನಾಳ್ ಗ್ರಾಮದ ಡಾ.ಡಿ.ಎಂ.ನಂಜುಮನಡಪ್ಪ ಅವರ ವರದಿ ಕೂಡ
ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಒದಿಗಿಸಬೇಕೆಂಬ ಹಕ್ಕೋತ್ತಾಯಕ್ಕೆ ಬಲ ನೀಡಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now