ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 09 : ತಾಲ್ಲೂಕಿನ ತುಪ್ಪದಹಳ್ಳಿ ವಾಸಿ ಹಾಗೂ ರಾಮಗಿರಿ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಸಿ ಮಹೇಶ್ವರಪ್ಪ (56 ವರ್ಷ) ಅನಾರೋಗ್ಯದಿಂದ ಇಂದು ಮಧ್ಯಾನ್ಹ 12 : 30 ರ ಸುಮಾರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಸೆ. 08 ರಂದು) ಹೊಳಲ್ಕೆರೆ ತುಪ್ಪದಹಳ್ಳಿ ಗ್ರಾಮದ ಅವರ ತೋಟದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.










