Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮಣ್ಣ ಸಿಎಂ ಆಗ್ಬೇಕು ಅನ್ನೋ ಆಸೆ ನನಗು ಇದೆ : ಡಿಕೆ ಸುರೇಶ್..!

---Advertisement---

 

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಸಾಕಷ್ಟು ದಿನದಿಂದ ನಡೆಯುತ್ತಲೇ ಇದೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಈ ಬದಲಾವಣೆ ವಿಚಾರವಾಗಿ ಶಾಸಕರು ಕೂಡ ಬಹಿರಂಗವಾದ ಹೇಳಿಕೆ ನೀಡ್ತಾ ಇದ್ದಾರೆ. ಡಿಕೆ ಶಿವಕುಮಾರ್ ಶಾಸಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ಅವರ ಅಣ್ಣ ಸಿಎಂ ಆಗಬೇಕೆಂಬ ಆಸೆಗೆ ಸಂಬಂಧಿಸಿದಂತೆ ಡಿಕೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಖಂಡಿತ ಯಾವಾಗಲೂ ಒಂದು ದಿನ ಸಿಗಬೇಕು, ಸಿಗುತ್ತೆ. ಅಸಹಾಯಕತೆ ಅಲ್ಲ. ಪಕ್ಷದ ನಾಯಕತ್ವದಲ್ಲಿ, ಪಕ್ಷದ ನಾಯಕತ್ವಕ್ಕೆ ಗೌರವ ಕೊಡುವುದು. ಪಕ್ಷದ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವಂತವರು ಪಕ್ಷದ ನಾಯಕತ್ವಕ್ಕೆ ಗೌರವ ಕೊಡುವಂತದ್ದು ನಾವೂ ಮೊದಲು ಮಾಡಬೇಕಾಗಿದೆ. ಆ ಕೆಲಸವನ್ನ ಪಕ್ಷದ ಅಧ್ಯಕ್ಷರಾಗಿ ನೀವೂ ಕೇಳಿದ ವಿಚಾರಕ್ಕೆ ಸ್ಪಷ್ಟ ಪಡಿಸಿದ್ದಾರೆ. ಪಕ್ಷದಿಂದಾನೇ ಎಲ್ಲ. ಯಾರೇ ಮುಖ್ಯಮಂತ್ರಿಯಾಗಿರಬಹುದು, ಯಾರೇ ಪ್ರಧಾನಿಯಾಗಿರಬಹುದು, ಶಾಸಕರು, ಮಂತ್ರಿಗಳಾಗಿರಬಹುದು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಪಕ್ಷ ಹೊರತಾಗಿ ಜನ ತೀರ್ಮಾನ ಮಾಡಿರುತ್ತಾರೆ. ಅದನ್ನ ಬಿಟ್ಟರೆ ಪಕ್ಷದ ಒಳಗಡೆಯೇ ಎಲ್ಲರೂ ಆಯ್ಕೆಯಾಗಿರುತ್ತಾರೆ. ಆ ಒಂದು ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಬೇಕಾಗುತ್ತದೆ.

ನನ್ನ ಹೇಳಿಕೆಗಳನ್ನ ತಿರುಚಬೇಡಿ. ನನಗೆ ಒಂದು ಆಸೆ ಇದೆ ಅಂತ ಹೇಳ್ತಾ ಇರೋದು. ಒಂದಲ್ಲ ಒಂದು ದಿನ ನಮ್ಮ ಅಣ್ಣ ಸಿಎಂ ಆಗ್ಬೇಕು ಅಂತ. ಕಾರಣ ಏನು ಅಂದ್ರೆ ಅವರು ಪಕ್ಷಕ್ಕೆ ನಿಷ್ಠೆಯಾಗಿ ಕೆಲಸ ಮಾಡಿದ್ದಾರೆ. ಜನ ಕೂಡ ಒಂದು ನಿರೀಕ್ಷೆ ಇಟ್ಟುಕೊಂಡು ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನ ಕೊಟ್ಟಿದ್ದಾರೆ. ಆ ಒಂದು ನಿಟ್ಟಿನಲ್ಲಿ ನನಗೆ ಅವರು ಸಿಎಂ ಆಗ್ಬೇಕು ಎಂಬ ಆಸೆ ಇದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment