Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುಧಾಕರ್ ಬಯಸಿದಂತೆ ನಾನು ತಿದ್ದಿಕೊಳ್ಳುತ್ತೇನೆ ; ಬಿವೈ ವಿಜಯೇಂದ್ರ

---Advertisement---

ಬೆಂಗಳೂರು: ಮಾಜಿ ಸಚಿವ ಕೆ.ಸುಧಾಕರ್ ನಿನ್ನೆ ವಿಜಯೇಂದ್ರ ವಿರುದ್ಧ ನೇರಾ ನೇರಾ ಸವಾಲು ಹಾಕಿದ್ದರು. ಅಹಂಕಾರವೆಲ್ಲ ಬೇಡ ಎಂಬ ಮಾತನ್ನ ಹೇಳಿದ್ದರು. ನಮ್ಮನ್ನ ಮುಳುಗಿಸುವ ಪ್ರಯತ್ನ ಮಾಡ್ತಾ ಇದ್ದೀರಾ ಎಂದು ಆರೋಪ ಮಾಡಿದ್ದರು. ಅದಕ್ಕೆ ಇಂದು ಬಿವೈ ವಿಜಯೇಂದ ಅವರು ಸಾವಾಧಾನದ ಉತ್ತರ ನೀಡಿದ್ದಾರೆ.

ಮಾನ್ಯ ಸುಧಾಕರ್ ಅವರು ಆಡಿದ ಆಕ್ರೋಶಭರಿತ ಮಾತುಗಳನ್ನ ಕೇಳಿದ್ದೇನೆ. ವಿಜಯೇಂದ್ರ ಅವರು ನಮ್ಮನ್ನ ಸಮಾಧಿ ಮಾಡುವುದಕ್ಕೆ ಹೊರಟಿದ್ದಾರೆ ಎಂಬ ಮಾತನ್ನ ಹೇಳಿದ್ದಾರೆ. ನಾನು ತಮ್ಮ ಮೂಲಕ ಸುಧಾಕರ್ ಅವರಿಗೆ ಹೇಳುತ್ತಿದ್ದೇನೆ, ದಯವಿಟ್ಟು ಈ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಅದು ನಿಮಗೂ ಗೌರವ ತಂದುಕೊಡಲ್ಲ, ನನಗೂ ಗೌರವ ತಂದು ಕೊಡುವುದಿಲ್ಲ. ಅಲ್ಲಿ ಯಾರು ಆಯ್ಕೆಯಾಗಿದ್ದಾನೆ, ಆತ ಕೂಡ ಪಕ್ಷದ ಕಾರ್ಯಕರ್ತ ಮತ್ತು ಸುಧಾಕರ್ ಅವರ ಸಂಬಂಧಿಯೂ ಹೌದು. ಚುನಾವಣಾ ಪ್ರಕ್ರಿಯೆ ಏನಾಗಿದೆ ಎಂಬುದನ್ಮು ಅವರು ಕೂಡ ಅರ್ಥ ಮಾಡಿಕೊಳ್ಳಲಿ.

ಅವರು ಏನೇ ಟೀಕೆ ಮಾಡಿದರೂ ನಾವೂ ಅವರನ್ನ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಮಾಜಿ ಸಚಿವರಾಗಿ ಅವರು ಕೂಡ ಕೆಲಸ ಮಾಡಿದ್ದಾರೆ. ಪಕ್ಷ ಏನು ತೀರ್ಮಾನ ಮಾಡುತ್ತೆ ಅದನ್ನ ಹೈಕಮಾಂಡ್ ಹಿರಿಯರು ತೀರ್ಮಾನ ಮಾಡಿರುತ್ತಾರೆ. ಅದರಲ್ಲಿ ಯಾವುದೇ ರೀತಿಯಲ್ಲಿ ನಾನು ಮೂಗು ತೂರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಇಂಥಹ ಹೇಳಿಕೆಗಳು ಪಕ್ಷಕ್ಕೂ ಗೌರವ ತಂದುಕೊಡುವಂಥದ್ದಲ್ಲ. ವಿಜಯೇಂದ್ರ ಅವರು ತಿದ್ದುಕೊಳ್ಳಬೇಕು ಅಂತಿದ್ದಾರೆ. ಇದು ಅವರ ಆಸೆ ಮಾತ್ರವಲ್ಲ ಇನ್ನು ಹಲವರ ಆಸೆ. ತಿದ್ದುಕೊಳ್ಳುವಂಥದ್ದು ಪ್ರಕ್ರಿಯೆ. ನಾನು ಕೂಡ ತಿದ್ದುಕೊಳ್ಳುತ್ತೇನೆ. ಸುಧಾಕರ್ ಅವರನ್ನು ಭೇಟಿ ಮಾಡ್ತೇನೆ. ಏನನ್ನ ತಿದ್ದುಕೊಳ್ಳಬೇಕು ಎಂಬ ಅಪೇಕ್ಷೆ ಇದೆ ಅದನ್ನು ತಿದ್ದಿಕೊಳ್ಳುತ್ತೇನೆ. ನಾನು ಮನೆ ಮಠ ಬಿಟ್ಟು ಕೆಲಸ ಮಾಡ್ತಾ ಇದ್ದೇನೆ. ಪಕ್ಷ ಅವರ ಸ್ವತ್ತು ಅಲ್ಲ, ನನ್ನ ಸ್ವತ್ತು ಅಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment