ರಾಜಕಾರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ : ಅನಂತ್ ಕುಮಾರ್‌ ಹೆಗ್ಡೆ ಹಿಂಗ್ಯಾಕಂದ್ರು..?

suddionenews
1 Min Read

ಕಾರವಾರ: ನಾವೇನು ರಾಜಕಾರಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರಲ್ಲ. ಮುಂದೆ ಹೀಗ್ ಆಗಬೇಕು, ಹಾಗ್ ಆಗಬೇಕು ಎಂಬ ಆಸೆ ಇಟ್ಟುಕೊಂಡಿಲ್ಲ. ಎಷ್ಟು ದಿನ ರಾಜಕೀಯದಲ್ಲಿ ಇರ್ತಿವೋ ಗೊತ್ತಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ರೈಲ್ವೆ, ಬಂದರು, ವಿಮಾನ ನಿಲ್ದಾಣ, ಹೆದ್ದಾರಿ ಯೋಜನೆ ಬರಬೇಕು. ದೊಡ್ಡ ದೊಡ್ಡ ಯೋಜನೆಗಳು ಬಂದರೆ ಮಾತ್ರ ಹಳ್ಳಿಗಳು ಅಭಿವೃದ್ಧಿಯಾಗ್ತವೆ. ದೊಡ್ಡ ಯೋಜನೆ ಬಾರದೆ ಇದ್ರೆ ತಲೆಕೆಡಿಸಿಕೊಳ್ಳಲ್ಲ. ರಾಜಕಾರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇಷ್ಟು ದಿವಸಗಳ ಕಾಲ ಪ್ರೀತಿ-ವಿಶ್ವಾಸ ತೋರಿಸಿದ್ದೀರಿ.

ಅದಕ್ಕೋಸ್ಕರ ನಿಮಗೆಲ್ಲಾ ಕಾಲು‌ ಮುಟ್ಟಿ ನಮಸ್ಕಾರ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಜಿಲ್ಲೆ 100 ವರ್ಷಗಳ ಕಾಲ ಹಿಂದೆ ಹೋಗಬಾರದು. ಅದಕ್ಕಾಗಿಯೇ ಹೊಸ ಅಧ್ಯಾಯವನ್ನು ಬರೆಯಲು ಪ್ರಾರಂಭದ ಹೆಜ್ಜೆ ಇಟ್ಟಿದ್ದೇವೆ. ತಮ್ಮೆಲ್ಲರ ಸಹಕಾರ ಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *