ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತು ಹಾಕಿದ್ದೇನೆ ಎಂದು ಬಂದಿದ್ದ ವ್ಯಕ್ತಿ ಚಿನ್ನಯ್ಯನ ಬಂಧನವಾಗಿದೆ. ಎಸ್ಐಟಿ ಅಧಿಕಾರಿಗಳ ತನಿಖೆಯ ನಂತರ ಸಾಕಷ್ಟು ವಿಚಾರಗಳನ್ನ ಆ ವ್ಯಕ್ತಿ ಬಾಯ್ಬಿಟ್ಟಿದ್ದಾರೆ. ಈತನ ಹಿನ್ನೆಲೆಯೂ ಬಯಲಾಗಿದೆ. ಈತನ ನಿಜವಾದ ಹೆಸರು ಚಿನ್ನಯ್ಯ ಅಲಿಯಾಸ್ ಚೆನ್ನ. ಈತ ಮೂಲತಃ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವರು. ಈತನಿಗೆ ಒಬ್ಬರಲ್ಲ ಮೂವರು ಹೆಂಡತಿಯರು. ಈ ಹಿಂದೆ ಈತ ಧರ್ಮಸ್ಥಳದಲ್ಲಿ ಸಫಾಯಿ ಕರ್ಮಚಾರಿ ಕೆಲಸವನ್ನ ಮಾಡುತ್ತಿದ್ದರಂತೆ. ಇಲ್ಲಿ ಬಿಟ್ಟ ಮೇಲೆ ತಮಿಳುನಾಡಿನ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಇದ್ದಕ್ಕಿದ್ದ ಹಾಗೇ ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ ಎಂದು ಬಂದ.
ಎಸ್ಐಟಿ ಅಧಿಕಾರಿಗಳ ವಿಚಾರಣೆಯಲ್ಲಿ ನಾನು ಪಾತ್ರಧಾರಿ ಅಷ್ಟೆ ಸೂತ್ರಧಾರಿಗಳು ಬೇರೆನೆ ಇದ್ದಾರೆ ಎಂಬ ಮಾತನ್ನ ಈತ ಹೇಳಿದ್ದಾನೆ. ನನಗೆ ಈ ರೀತಿ ಹೇಳುವುದಕ್ಕೆ ಹೇಳಿದರು. ಹಾಗಾಗಿ ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್ ಗೆ ಒಪ್ಪಿಸು ಎಂದರು ನಾನು ಒಪ್ಪಿಸಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾನೆ.
ಇದೇ ವೇಳೆ ಚಿನ್ನಯ್ಯ ಹಣಕ್ಕಾಗಿ ಈ ಕೆಲಸವನ್ನೆಲ್ಲ ಮಾಡಿರುವುದು ಎಂಬುದಾಗಿಯೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಒಟ್ಟಾರೆ ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ವಿಚಾರದಲ್ಲಿ ಮಾಸ್ಕ್ ಮ್ಯಾನ್ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ. ತಾಳ್ಮೆಯಿಂದಾನೇ ಎಲ್ಲವನ್ನು ಅಗೆದಿದ್ದ ಎಸ್ಐಟಿ ಇದೀಗ ಆತನನ್ನ ಕೋರ್ಟ್ ಗೆ ಒಪ್ಪಿಸಿ, ವಿಚಾರಣೆಯನ್ನ ನಡೆಸುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಷಡ್ಯಂತ್ರದಂತೆ ಕಂಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಸತ್ಯ ಬಯಲಾಗಲಿದೆ.

















