Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾನವ ಹಕ್ಕುಗಳ ಅಯೋಗದ ಫೌಂಡೇಶನ್ ತನ್ನದೇ ಆದ ಕರ್ತವ್ಯಗಳನ್ನು ನಿರ್ವಹಿಸುತ್ತದೆ : ಸುರೇಶಬೆಳಗೆರೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 04 : ಸಮಾಜದಲ್ಲಿ ರಾಷ್ಟೀಯ ಮಾನವ ಹಕ್ಕುಗಳು ಅಯೋಗದ ಪೌಂಡೇಷನ್ ತನ್ನದೇ ಆದ ಕರ್ತವ್ಯಗಳನ್ನು ಪಾಲಿಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಜನರ ಜೀವಿತದ ಗುಣಮಟ್ಟವನ್ನು ಉತ್ತಮಗೊಳಿಸಲು, ಸಮಾನತೆ ಮತ್ತು ಗೌರವವನ್ನು ಸ್ಥಾಪಿಸಲು, ಹಾಗೂ ಶೋಷಣೆಯನ್ನು ತಡೆಯಲು ಕಾರ್ಯನಿರ್ವಹಿಸುತ್ತದೆ ಎಂದು ಪ್ರಜಾತತ್ವ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ಪೌಡೆಂಷನ್ ನ ಜಿಲ್ಲಾಧ್ಯಕ್ಷ ಸುರೇಶಬೆಳಗೆರೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಪೌಡೇಷನ್ ಪದಾಧಿಕಾರಿಗಳ ಸಭೆ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಪೌಡೇಷನ್ ತಾಲ್ಲೂಕು ಅಧ್ಯಕ್ಷರಾದ ಬಿ.ತಿಪ್ಪೇಸ್ವಾಮಿ ಎಲ್.ಐ. ಸಿ. ತಿಪ್ಪೇಸ್ವಾಮಿ ಯವರಿಗೆ ಸನ್ಮಾನ ಹಾಗೂ ಪ್ರಜಾತತ್ವ ಮಾನವ ಹಕ್ಕುಗಳ ಆಯೋಗದ ಪದಾಧಿಕಾರಿಗಳಿಗೆ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರದಲ್ಲಿ ಮಾತನಾಡಿ‌, ಮಾನವ ಹಕ್ಕುಗಳ ಆಯೋಗ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು, ಕಾನೂನು ಮೂಲಕ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಬಳಸಲಾಗುತ್ತವೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಸಮಸ್ಯೆ ಇದ್ದ ಕಡೆ ಹಾಗೂ ನೊಂದವರ ಬಾಳಿಗೆ ಮಾನವ ಹಕ್ಕುಗಳ ಅಯೋಗದ ಪೌಡೇಷನ್ ಬೆಳಕಗಲಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಾನವ ಹಕ್ಕುಗಳ ಪೌಡೇಷನ್ ಅಯೋಗದ ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿದೆ ಎಂದರು.

ನೂತನವಾಗಿ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬಿ.ತಿಪ್ಪೇಸ್ವಾಮಿ (ಎಲ್ ಐಸಿ )ಮಾತನಾಡಿ ಈಗಾಗಲೆ ಪ್ರಜಾತತ್ವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪೌಂಡೇಷನ್ ರಾಜ್ಯದಲ್ಲೆ ಅಷ್ಟೇ ಅಲ್ಲದೆ ತಮಿಳುನಾಡು,ಕೇರಳ ,ಸೇರಿದಂತೆ ಇನ್ನು ಹಲವು ರಾಜ್ಯಗಳಲ್ಲಿ ತನ್ನ ಸಮಾಜಿಕ‌ಕಾರ್ಯ ಮಾಡುಕೊಂಡು ಬರುತ್ತದೆ. ಇಂದು ಸಹ. ತಾಲ್ಲೂಕಿ ವ್ಯಪ್ತಿಯಲ್ಲಿ ಯಾರಿಗೆ ಅನ್ಯಾಯ ವಾದರೆ ಅಂತವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನಿವೃತ್ತಿ ಪ್ರಾಂಶುಪಾಲ ಎಸ್.ವೀರಣ್ಣ ದೊಡ್ಡೇರಿ ರಾಜಣ್ಣ, ಫೌಂಡೇಶನ್ ಯುವ ಘಟಕದ ಅಧ್ಯಕ್ಷ ಸೈಯಾದ್ ಇಂಬ್ರಾನ್ .ಮೃತುಂಜಯ ಮಾತನಾಡಿದರು.

ಈ ಸಭೆಯಲ್ಲಿ ಧಾರವಾಡ ಜಿಲಾಧ್ಯಕ್ಷ ಮಲ್ಲಿಕಾರ್ಜನ್ ಪಾಟೀಲ್, ರೆಹಮಾನ್ ಖಾನ್, ರಮೇಶ, ಅಕ್ರಂ ವಸಿಂ, ನಾಗರಾಜ್ ಆಚಾರ್, ಸೈಯಾದ್ ಸೇರಿದಂತೆ ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ನ ಪದಾಧಿಕಾರಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...