ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಮನೆಗಳನ್ನ ತೆರವು ಮಾಡಿದ್ದು, ನಿರಾಶ್ರಿತರಿಗೆ ಮನೆಗಳ ವ್ಯವಸ್ಥೆಯನ್ನ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ ಇಲ್ಲಿ ಬಾಂಗ್ಲಾದವರು ವಾಸವಿದ್ದರು, ಅವರಿಗೂ ಮನೆಗಳನ್ನ ನೀಡುತ್ತಾರಾ ಎಂಬ ಚರ್ಚೆಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ದಾಖಲೆಗಳ ತಪಾಸಣೆ ನಡೆಯುತ್ತಾ ಇದೆ. ಡಿಸಿ ಅವ್ರು, ತಹಶಿಲ್ದಾರ್, ಕಮಿಷನರ್ ಅವರು ಅರ್ಜೆಂಟ್ ಮಾಡುವುದು ಬೇಡ. ಯಾರಿಗೂ ಅನ್ಯಾಯವಾಗಬಾರದು ಅನ್ನೋ ಕಾರಣಕ್ಕೆ ವೆರಿಫಿಕೇಷನ್ ಗೆ ಮತ್ತೊಂದು ದಿನ ಸಮಯ ಕೊಡಿ ಅಂದ್ರು. ಮುಖ್ಯಮಂತ್ರಿಗಳ ಬಳಿ ನಿನ್ನೆ ಹೋಗಿ, ಇಲ್ಲ ಸರ್ ಆತುರ ಮಾಡುವುದು ಬೇಡ. ಮತ್ತೊಂದು ದಿನ ಕೊಡೋಣಾ. 1 ನೇ ತಾರೀಖು ಮನೆ ಕೊಡುವುದನ್ನ 2ನೇ ತಾರೀಖು ಕೊಡೋಣಾ ಅಂದಿದ್ದೀನಿ. ಡಿಸಿ ಅವರು ಕೂಡ ಬೆಳಗ್ಗೆ ಫೋನ್ ಮಾಡಿದ್ರು. ಆಲ್ಮೋಸ್ಟ್ ಬೆಳಗ್ಗೆ ಆಗಿದೆ. ಸಂಜೆ ನೀವು ಎಲ್ಲಿರ್ತೀರಾ ಅಲ್ಲಿಗೆ ಬಂದು ವಿವರಣೆ ನೀಡ್ತೇನೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ನಕಲಿ ಅಂತ ಇಲ್ಲ. ಅಲ್ಲಿ ಒಟ್ಟು ಮನೆ ಇರುವುದು 257 ಮನೆಗಳು ಇದಾವೆ. ಅದರಲ್ಲಿ ಡೆಮಾಲಿಶ್ ಆಗಿರೋದು 112 ಮನೆಗಳು ಡೆಮಾಲಿಶ್ ಆಗಿವೆ. ಈಗ ಸಿಎಂಗೆ ಬಿಟ್ಟ ವಿಚಾರ. ಈ ವ್ಯಾಜ್ಯ ಏನು ಮಾಡಬೇಕು ಎಂಬುದು. ಎಲ್ಲಾ ಸ್ಥಳೀಯರಿಗೆ ಮಾತ್ರ ಸಿಗುತ್ತೆ. ಅಲ್ಲಿ ಇದ್ದು ಡೆಮಾಲಿಶ್ ಆದವರಿಗೆ ಕೊಡಲ್ಲ. ಸ್ಥಳೀಯವಾಗಿ ಇದ್ದವರಿಗೆ ಮಾತ್ರ ಮನೆಗಳನ್ನ ಕೊಡುವುದು. ಈಗಾಗಲೇ ಸಾಕಷ್ಟು ಪ್ರಚಾರ ಮಾಡಿಬಿಟ್ಟಿದ್ದಾರೆ. ಮೊನ್ನೆ ಆರ್ ಅಶೋಕ್ ಅವರು ಹೋಗಿದ್ದನ್ನು ನೋಡಿದೆ. ಬಾಂಗ್ಲಾದೇಶದವರು ಇದ್ದಾರೆ. ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಕೇಳ್ತೀನಿ ಬಾಂಗ್ಲಾ ದೇಶದವರಿಗೆ ಇಲ್ಲಿ ಮನೆ ಕೊಡುವುದಕ್ಕೆ ಸಾಧ್ಯನಾ..? ಇದ್ದರು ಕೊಡುವುದಕ್ಕೆ ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.














