Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

32 ವರ್ಷದ ಸೇವೆಗೆ ಪೂರ್ಣವಿರಾಮ: ಇಂಜಿನಿಯರ್ ಚಂದ್ರಪ್ಪನವರಿಗೆ ಗೌರವಭರಿತ ಬೀಳ್ಕೊಡುಗೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 01 : ಇಂಜಿನಿಯರ್‌ ಗಳಿಗೆ ಅನೇಕ ಸಮಸ್ಯೆ, ಸವಾಲುಗಳಿರುತ್ತವೆ. ನನ್ನ 32 ವರ್ಷಗಳ ಸೇವಾ ಅವಧಿಯಲ್ಲಿ ಮೇಲಾಧಿಕಾರಿಗಳ, ಸಹೋದೋಗ್ಯಿಗಳ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದೆ ಎಂದು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನೆ ವಿಭಾಗ ನಂ.17 ಹಿರಿಯೂರು ಕಾರ್ಯಪಾಲಕ ಅಭಿಯಂತರ ಬಾರಿಕರ ಚಂದ್ರಪ್ಪ ತಮ್ಮ ಅನುಭವಗಳನ್ನು ಹಂಚಿಕೊಂಡರು.

 

ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಅವರು ಮಂಗಳವಾರ ಕಚೇರಿಯಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಅಪ್ಪರ್ ಕೃಷ್ಣದಲ್ಲಿ ಹದಿನೆಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ಅಷ್ಟೆ ಸವಾಲುಗಳು ನಮ್ಮ ಮುಂದಿವೆ. ಇಂಜಿನಿಯರ್‍ಗಳು ವೃತ್ತಿಯಲ್ಲಿ ಕೆಲವೊಮ್ಮೆ ಕಷ್ಟ ಎದುರಿಸಬೇಕಾಗುತ್ತದೆ. ಕಲಿಯುವುದು ತುಂಬಾ ಇದೆ. ಇಳಕಲ್, ಅಜ್ಜಂಪುರ, ತುಂಗಭದ್ರಾದಲ್ಲಿ ಕೆಲಸ ಮಾಡಿದ್ದೇನೆ.ನೀರು ನಿರ್ವಹಣೆ ದೊಡ್ಡ ಸವಾಲಿನ ಕೆಲಸ. ಭದ್ರಾ ಯೋಜನೆಯಿಂದ ಹೊಳಲ್ಕೆರೆ ತಾಲ್ಲೂಕಿನ ಮೂವತ್ತು ಕೆರೆಗಳಿಗೆ ನೀರು ಬರುವುದಿದೆ. ಬಾಗಲಕೋಟೆಯಲ್ಲಿ ನಾನು ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದೆ. ದೇವರು ಅವಕಾಶ ಕೊಟ್ಟ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. 118 ವರ್ಷಗಳ ಇತಿಹಾಸವಿರುವ ಹಿರಿಯೂರಿನ ವಾಣಿವಿಲಾಸಸಾಗರದಿಂದ 30 ಸಾವಿರ ಎಕರೆಗೆ ನೀರು ಒದಗಿಸುತ್ತಿದ್ದೇವೆ. ಗಾಯತ್ರಿ ಜಲಾಶಯವೂ ಇದೆ. ಇಂಜಿನಿಯರ್‍ಗಳ ತಂತ್ರಜ್ಞಾನವನ್ನು ಮೀರಿಸುವ ರೀತಿಯಲ್ಲಿ ಈ ಡ್ಯಾಂ ಕಟ್ಟಲಾಗಿದೆ. ಉಳಿಸಿಕೊಳ್ಳುವುದು ಇಂಜಿನಿಯರ್‍ಗಳ ಕೆಲಸ. ಕೆನಾಲ್ ನೆಟ್‍ವರ್ಕ್ ಪೂರ್ ಇದೆ. ಅಷ್ಟೆ ಸವಾಲು ಕೂಡ ನಮ್ಮ ಮುಂದಿದೆ ಎಂದು ಹೇಳಿದರು.

 

ನಮ್ಮದು ಕೂಡು ಕುಟುಂಬ. ಕೃಷಿ ಜೀವನಕ್ಕೆ ಆಧಾರ. ಆಗ ಶಿಕ್ಷಣಕ್ಕೆ ಆದ್ಯತೆ ಕಮ್ಮಿಯಿತ್ತು. ಅಂತಹ ಕಷ್ಟದ ಕಾಲದಲ್ಲಿ ನಮ್ಮ ಸಹೋದರರು ನನ್ನ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ನಮ್ಮ ಕಾಲದ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕು ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಕುಟುಂಬದಲ್ಲಿ ಒಗ್ಗಟ್ಟಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರು ಎಲ್ಲರೂ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ನನ್ನ ಯಶಸ್ಸಿನ ಹಿಂದೆ ಮಡದಿಯ ಸಹಕಾರವಿದೆ ಎಂದು ಸ್ಮರಿಸಿದರು.

 

ಸಹಾಯಕ ಇಂಜಿನಿಯರ್ ಹರ್ಷದ್ ಮಾತನಾಡಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಾರಿಕರ ಚಂದ್ರಪ್ಪನವರು ಸದಾ ನಗುಮುಗದಿಂದ ಇರುತ್ತಿದ್ದರು. ಸಿಬ್ಬಂದಿಯೊಂದಿಗೆ ಎಂದಿಗೂ ಕಟುವಾಗಿ ವರ್ತಿಸಲಿಲ್ಲ. ಎಂತಹ ಸಮಸ್ಯೆಗಳಿದ್ದರು ಸಮಾಧಾನದಿಂದ ಹೇಳಿ ಕೆಲಸ ತೆಗೆದುಕೊಳ್ಳುತ್ತಿದ್ದರು. ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಇಂಜಿನಿಯರ್ ಪುಷ್ಪ ಮಾತನಾಡುತ್ತ ಸರಳ, ಸಜ್ಜನಿಕೆ, ಶಾಂತ ಸ್ವಭಾವದವರಾಗಿದ್ದ ಬಾರಿಕರ ಚಂದ್ರಪ್ಪನವರು ಸಿಬ್ಬಂದಿಗಳನ್ನು ಸದಾ ಗೌರವದಿಂದ ಕಾಣುತ್ತಿದ್ದರು. ಅವರ ಕೈಕೆಳಗೆ ನಾವುಗಳು ಖುಷಿಯಿಂದ ಕೆಲಸ ಮಾಡುತ್ತಿದ್ದೆವು. ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.

 

ಮುಖ್ಯ ಇಂಜಿನಿಯರ್ ಲಮಾಣಿ ಹಾಗೂ ಬಾರಿಕರ ಚಂದ್ರಪ್ಪನವರ ಪತ್ನಿ ಶಾಂತಲ ವೇದಿಕೆಯಲ್ಲಿದ್ದರು. ಭದ್ರಾ ಮೇಲ್ದಂಡೆ ಯೋಜನೆಯ ಉಪ ವಿಭಾಗದ ಇಂಜಿನಿಯರ್‍ಗಳು ಹಾಗೂ ಸಿಬ್ಬಂದಿಯವರು, ಜಿಲ್ಲಾ ನೀರಾವರಿ ಹೋರಾಟ ಸಮಿತಿಯವರು ಹಾಗೂ ಬಾರಿಕರ ಚಂದ್ರಪ್ಪನವರ ಕುಟುಂಬದವರು ಮತ್ತು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...