Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜನಗಣತಿ ಪ್ರಕ್ರಿಯೆ: ಮನೆಯಲ್ಲೇ ಕೂತು ಫಾರಂ ಭರ್ತಿ ಮಾಡಬಹುದು..?

---Advertisement---

ಬೆಂಗಳೂರು : ಭಾರತದಲ್ಲಿ ಜನಗಣತಿ‌ ಅಭಿಯಾನ ಶುರುವಾಗಿದೆ. ಇದು ಡಿಜಿಟಲ್ ಜನಗಣತಿ ಆಗಿರೋ ಕಾರಣ ಜನ ಕೂಡ ಇದರಲ್ಲಿ ಸುಲಭವಾಗಿ ಜನಗಣತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಜನ ತಮ್ಮ ತಮ್ಮ ಮಾಹಿತಿಯನ್ನ ಅವರೇ ದಾಖಲು ಮಾಡಬಹುದು. ಕರ್ನಾಟಕ ಸೇರಿದಂತೆ ಗೋವಾ, ಮಿಜೋರಾಂ, ಒಡಿಶಾ, ಸಿಕ್ಕಿಂ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದ ಜನರು ಆನ್ಲೈನ್ ಮೂಲಕವೇ ಸುಲಭವಾಗಿ ತಮ್ಮ ಮನೆಯ ವಿವರಗಳನ್ನು ದಾಖಲು ಮಾಡಬಹುದು. ಇದು ಏಪ್ರಿಲ್ 15ರವರೆಗೂ ನಡೆಯಲಿದೆ.

ಹಾಗಾದ್ರೆ ನಿಮ್ಮ ಮಾಹಿತಿಯನ್ನ ರಿಜಿಸ್ಟರ್ ಮಾಡುವುದು ಹೇಗೆ ಅನ್ನೋದನ್ನ ನೋಡೋದಾದ್ರೆ, ಮೊದಲನೆಯದಾಗಿ, www.ce.census.gov.in ವೆಬ್ಸೈಟ್ ಗೆ ಭೇಟಿ ನೀಡಿ. ಈ ವೆಬ್ಸೈಟ್ ಓಪನ್ ಮಾಡಿದ ಕೂಡಲೇ ಕುಟುಂಬದ ಯಜಮಾನನ ಹೆಸರು, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಸರಿಯಾದ ಮೊಬೈಲ್ ನಂಬರ್ ನಮೂದಿಸಿದರೆ ಮೊಬೈಲಿಗೆ ಒಟಿಪಿ ನಂಬರ್ ಬರುತ್ತದೆ. ಬಳಿಕ ಆ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ನಂತರದಲ್ಲಿ ಒಂದು ಪುಟ ಓಪನ್ ಆಗುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಾಹಿತಿ, ಪಿನ್ ಕೋಡ್ ಸಂಬಂಧಿಸಿದ ಕಾಲಂಗಳು ಇರಲಿವೆ. ಅದನ್ನೆಲ್ಲ ಭರ್ತಿ ಮಾಡಬೇಕಾಗುತ್ತದೆ. ಈ ವೇಳೆ ಪರದೆಯಲ್ಲಿ ನೀವು ತೋರಿಸಿದ ಗ್ರಾಮ, ನಗರದ ನಕ್ಷೆ ಕಾಣುತ್ತದೆ. ಈ ಜಾಗದಲ್ಲಿ ನೀವು ನೆಲೆಸಿರುವ ಮನೆಯ ಜಾಗಕ್ಕೆ ಡಿಜಿಟಲ್‌ ಮ್ಯಾಪ್‌ನಲ್ಲಿ ಮಾರ್ಕ್‌ ಮಾಡಬೇಕು.

ಮನೆ, ನೀರು, ಶೌಚಾಲಯ, ವಾಹನ ಹೀಗೆ ಹಲವು ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅದಕ್ಕೆಲ್ಲ ಉತ್ತರಿಸಿದ ಬಳಿಕ ಏನಾದರೂ ಮಿಸ್ಟೇಕ್ ಮಾಡಿದ್ದರು, ಹಿಂದಿನ ಪುಟಕ್ಕೆ ಹೋಗಿ ಆಗಲೇ ಸರಿಪಡಿಸಬಹುದು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಜಾತಿಗಣತಿ ಸಂಪೂರ್ಣವಾಗುತ್ತದೆ. ಅದರ ಐಡಿಯೂ ಮನೆಯ ಮಾಲೀಕನ ಮೊಬೈಲ್ ನಂಬರ್ ಗೆ ಬರಲಿದೆ‌

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...