Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಐಯುಡಿಪಿ ಬಡಾವಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ; ಮಕ್ಕಳಿಗೆ ಮಡಿಕೆ ಒಡೆಯುವ ಸ್ಪರ್ಧೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ನಗರದ ಐಯುಡಿಪಿ ಬಡಾವಣೆಯ ಗಂಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತರಾದ ಸಿದ್ದರಾಜು ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪುಟ್ಟ ಪುಟ್ಟ ಮಕ್ಕಳ ಪ್ರತಿಭಾವಂತಿಕೆ ಪ್ರದರ್ಶನಕ್ಕೆ ಕೃಷ್ಣ ಜನ್ಮಾಷ್ಟಮಿ ಸುಂಧರ ವೇದಿಕೆಯಾಗಿದೆ ಎಂದರು.

ಇನ್ನು ಈ ಜನ್ಮಾಷ್ಟಮಿ ನೆಪದಲ್ಲಿ ಮಕ್ಕಳು ರಾಧೆಕೃಷ್ಣ ವೇಷಭೂಷಣದಲ್ಲಿ ಭಾಗಿಯಾಗಿರೋದು ಬಡಾವಣೆಯಲ್ಲಿನ ಪೋಷಕರ ಸಂತಸವನ್ನು ಹೆಚ್ಚಿಸಿತು. ಮಕ್ಕಳನ್ನು ಇಂತಹ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಜ್ಜುಗೊಳಿಸೋದು ಪೋಷಕರಿಗೆ ಒಂದು ದೊಡ್ಡ ಸವಾಲು ಎನಿಸಿದ್ರು ಸಹ ಸಂಭ್ರಮದಿಂದ ಎಲ್ಲರು ಪುಟಾಣಿಗಳನ್ನು ಸಜ್ಜುಗೊಳಿಸಿರೋದು ಮಕ್ಕಳ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ.

ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಅವರಲ್ಲಿನ ಪ್ರತಿಭಾವಂತಿಕೆ ಹೊರಹಾಕಲು ಉತ್ತಮ ಅವಕಾಶ ಎನಿಸಿದೆ. ಇಂತಹ ಸುವರ್ಣವಕಾಶ ಹಾಗು ಸುಂಧರ ಕಾರ್ಯಕ್ರಮ ಆಯೋಜಿಸುವ ಮೂಲಕ ಗೀತಮ್ಮ ಅವರ ತಂಡ ಬಡಾವಣೆಯಲ್ಲಿ ಸುಸಂಸ್ಕ್ರತಿಯ ಸಂದೇಶವನ್ನು ಬಿತ್ತುತ್ತಿರುವ ಕಾರ್ಯ ಶ್ಲಾಘನೀಯ.

ಇಂತಹ ವೇಷಭೂಷಣ ಸ್ಪರ್ಧೆಗಳು ಮಕ್ಕಳಲ್ಲಿ ಶಿಸ್ತು,ಸಂಯಮ ಹಾಗು ಸ್ಪರ್ಧಾ ಭಾವಗಳನ್ನು ಮೈಗೂಡಿಸಲಿವೆ.ಹೀಗಾಗಿ ಇಂತಹ ಸ್ಪರ್ಧೆಗಳಯ ಎಲ್ಲೆಡೆ ನಿರಂತರವಾಗಿ ಜಯಂತಿಗಳ ನೆಪದಲ್ಲಿ ಹೆಚ್ಚಾಗ ಬೇಕು.ಈ ಮೂಲಕ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಕಲಾಕೌಶಲ್ಯ, ಚಾಣಾಕ್ಷತೆ ಹಾಗು ಕ್ರಿಯಾಶೀಲತೆ ಹೆಚ್ಚಿಸಬೇಕು ಎಂದರು.

ಇದಕ್ಕು ಮುನ್ನ ನಡೆದ ಬಡಾವಣೆ ನಿವಾಸಿಗಳು ಅವರ ಪುಟಾಣಿ ಮಕ್ಕಳಿಗೆ ರಾಧೆ,ಕೃಷ್ಣ ಹಾಗು ಬಾಲಕೃಷ್ಣರ ವೇಷಭೂಷಣಗಳಿಂದ ಅಲಂಕರಿಸಿ ಪ್ರದರ್ಶನಕ್ಕೆ ಕರೆತಂದಿದ್ದರು.ಚಿತ್ರದುರ್ಗದ ಸಂಕ್ರಾಂತಿ ಸಮಿತಿಯ ಮುಖ್ಯಸ್ಥರಾದ ಗೀತಮ್ಮಪುಷ್ಪ ಹಾಗು ಬಡಾವಣೆಯ ಸಮಸ್ತ ನಿವಾಸಿಗಳ ಸಹಭಾಗಿತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸಿದರು.

ಈವೇಳೆ ಪುಟಾಣಿ ಮಕ್ಕಳಿಗಾಗಿ ಬೆಣ್ಣೆ ತುಂಬಿದ್ದ ಮಡಿಕೆ ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪುಟಾಣಿಗಳಾದ ಖುಷಿ ಶ್ರೀನಿವಾಸ್
ಹಂಸಿಕಾ ಹೇಮಲತಾ,ಶೌರ್ಯ ಜ್ಯೋತಿ,
ವಿದ್ಮಯಿ ರೇಖಾ ಅನಂತರಾಜ್,
ಸಿದ್ದುಶ್ರೀ ಜ್ಯೋತಿ, ಆರ್ವಿಕ್ ಮಂಜುಳ,
ಛಾಯ ಅದ್ಚೈತ್, ನಿಖಿಲ್, ವೈಷ್ಣವಿ, ಅನಿತ
ಸಿಹಿ ಮತ್ತು ಸಿರಿ ರಮೇಶ್ ಭಾಗವಹಿಸಿದ್ದರು.

ಶ್ರೀಕೃಷ್ಣಹಾಗು ರಾಧೆಯ ವೇಷಭೂಷಣದಲ್ಲಿ ಮುದ್ದುಮುದ್ದಾಗಿ ಅಲಂಕಾರದೊಂದಿಗೆ ಆಗಮಿಸಿದ್ದ ಮಕ್ಕಳು ಶ್ರೀಕೃಷ್ಣನ ತುಂಟಾಟ ಹಾಗು ರಾಧೆಯ ಬೌದ್ಧಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೂ ಆಯೋಜಕರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಗಂಟೆ ಆಂಜನೇಯ ದೇಗುಲ ಸಮಿತಿಯ ಮುಖ್ಯಸ್ಥರಾದ ರಾಘವೇಂದ್ರ, ಶ್ರೀನಿವಾಸ್, ಜಯ್ಯಣ್ಣ, ಅರ್ಚಕರಾದ ಮಹಂತೇಶ್, ಹಿರೇಮಠ, ಬಡಾವಣೆಯ ನಿವಾಸಿಗಳಾದ ಪುಷ್ಪ, ಅನಂತರಾಜ್, ಜ್ಯೋತಿ, ಶಾರದಮ್ಮ, ಹೇಮಲತಾ, ಯೋಗಪಟುಗಳಾದ ಲತ,ದಿಯಾ, ಭಾಗ್ಯಮ್ಮ, ಅನಿತ, ರಮೇಶ್ ಸೇರಿದಂತೆ ಐಯುಡಿಪಿ ಬಡಾವಣೆಯ ಇತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now