ದಾವಣಗೆರೆ : ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ತೆರವಾದ ಕ್ಷೇತ್ರಕ್ಕೆ ಅದೇ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈಗ ಸಮರ್ಥ್ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯೂ ಕಾಂಗ್ರೆಸ್ ಮೇಲಿದೆ. ಹೀಗಾಗಿಯೇ ಘಟಾನುಘಟಿ ನಾಯಕರೇ ಆ ಭಾಗಕ್ಕೆ ಪ್ರಚಾರಕ್ಕೆಂದು ಹೋಗ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೆ ವಿಶ್ವಾಸವನ್ನು ವ್ಯಕ್ತಪಡಿಸ್ತಾ ಇದ್ದಾರೆ.
ಈ ಬೆನ್ನಲ್ಲೇ ಎಸ್ ಎಸ್ ಮಲ್ಲಿಕಾರ್ಜುನ ಅವರ ಕುಟುಂಬಸ್ಥರು ಮಗನಿಗೋಸ್ಕರ, ಮಗನ ಗೆಲುವಿಗೋಸ್ಕರ ಕೊಂಡವನ್ನ ಹಾಯ್ದಿದ್ದಾರೆ. ಹಳೇ ಪೇಟೆ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಉತ್ಸವದಲ್ಲಿ ಕೊಂಡ ಹಾಯ್ದು ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೀರಭದ್ರೇಶ್ವರ ಅಗ್ನಿಕುಂಡ ಉತ್ಸವದಲ್ಲಿ ಸಚಿವರ ಕುಟುಂಬ ಭಾಗಿಯಾಗಿತ್ತು. ಈ ವೇಳೆ ಸಚಿವರು ಹಾಗೂ ಅವರ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಪುತ್ರ ಸಮರ್ಥ್ ಶಾಮನೂರು ಹಾಗೂ ಪುತ್ರಿ ಶ್ರೇಷ್ಠ ಶಾಮನೂರು ಕೆಂಡ ತುಳಿದಿದ್ದಾರೆ.
ಮಗನನ್ನು ಗೆಲ್ಲಿಸಿ ಕೊಡುವಂತೆ ದೇವರಲ್ಲು ವಿಶೇಷವಾದ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಮುಸ್ಲಿಮರು ಬಂಡಾಯ ಏಳದೆ ಇದ್ದಿದ್ದರೆ ಶಾಮನೂರು ಕುಟುಂಬಕ್ಕೆ ಆತಂಕದ ಛಾಯೆ ಕಾಣಿಸ್ತಾ ಇರಲಿಲ್ಲ. ಆದರೆ ಟಿಕೆಟ್ ನಿರೀಕ್ಷೆ ಮಾಡಿದ್ದಂತ ಅಲ್ಪಸಂಖ್ಯಾತರು ಸಿಗದೆ ಹೋದಾಗ ಈ ರೀತಿ ಬಂಡಾಯವೆದ್ದಿದ್ದಾರೆ. ಹೀಗಾಗಿ ವೋಟ್ ಗಳು ವಿಭಜನೆ ಆಗುವ ಆತಂಕ ಸಹಜವಾಗಿಯೇ ಕಾಂಗ್ರೆಸ್ ನವರಿಗೆ ಕಾಡುತ್ತಿದೆ. ಬಂಡಾಯವೆದ್ದು, ಪ್ರತ್ಯೇಕವಾಗಿ ನಿಂತಿದ್ದ ಪೈಲ್ವಾನ್ ಅವರನ್ನ ಈಗಾಗಲೇ ಸಮಾಧಾನವೇನೋ ಮಾಡಿದೆ. ಆದರೆ ಬೇರೆ ಮುಸಲ್ಮಾನರ ಅಭ್ಯರ್ಥಿ ಸ್ಪರ್ಧೆಯೊಡ್ಡಿದ್ದು, ಕೊಂಚ ಆತಂಕ ಅವರಲ್ಲೂ ಇದ್ದಂತೆ ಇದೆ.










