ಸಾಮಾನ್ಯವಾಗಿ ಹೆಚ್ಚಿನ ಜನ ಟೀ ಅಡಿಕ್ಷನ್ ಇರುವವರೇ ಇದ್ದಾರೆ. ಟೀನಲ್ಲಿ ಮಸಾಲೆ ಟೀ, ನಾರ್ಮಲ್ ಟೀ ಅದು ಇದು ಅಂತ ಸುಮಾರು ಟೀಗಳು ಇದಾವೆ. ಆದರೆ ಗಿಡಮೂಲಿಕೆಗಳ ಟೀ ಆರೋಗ್ಯಕ್ಕೆ ಅತ್ಯುತ್ತಮವಾಗಿರುತ್ತವೆ. ಅಂತಹ ಟೀ ನಲ್ಲಿ ದಾಸವಾಳ ಟೀ ಕೂಡ ಒಂದು. ಸಾಮಾನ್ಯವಾಗಿ ಮನೆ ಮುಂದೆ, ಹಿತ್ತಲಿನಲ್ಲೆಲ್ಲಾ ದಾಸವಾಳದ ಹೂ ಇದ್ದೇ ಇರುತ್ತದೆ. ಒಮ್ಮೆ ಈ ಟೀ ಮಾಡಿಕೊಂಡು ಕುಡಿದು ನೋಡಿ ಏನೆಲ್ಲಾ ಲಾಭಗಳು ದೇಹಕ್ಕೆ ಆಗುತ್ತವೆ ಎಂಬುದನ್ನು. ಈ ಮಾಹಿತಿಯನ್ನು ಗೂಗಲ್ ನಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಗರ್ಭಿಣಿಯರು ಹಾಗೂ ಕಡಿಮೆ ರಕ್ತದೊತ್ತಡ ಇರುವವರು ಕುಡಿಯಬಾರದು ಎಂಬ ಮಾಹಿತಿಯನ್ನು ನೀಡಲಾಗಿದೆ. ಹಾಗಾದ್ರೆ ನಾರ್ಮಲ್ ಆಗಿರುವವರು ಈ ಟೀ ಕುಡಿದರೆ ಏನೆಲ್ಲಾ ಲಾಭ ಇದೆ ಅನ್ನೋದನ್ನ ನೋಡೋಣಾ.
* ಇದರಲ್ಲಿ ಮುಖ್ಯವಾಗಿ Allo – Hydroxycitric acid lactone ಎಂಬ ಅಂಶ ಇದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಆಗುವಂತೆ ಮಾಡುತ್ತದೆ. ದೇಹದ ಬೊಜ್ಜನ್ನು ಕರಗಿಸುವುದಕ್ಕೂ ಅನುಕೂಲವಾಗುತ್ತದೆ.
* ಯಾರಿಗಾದರೂ ಹೃದಯ ಸಂಬಂಧಿ ಕಾಯಿಲೆ ಏನಾದ್ರೂ ಇದ್ದರೆ ಈ ಟೀ ವಾರಕ್ಕೊಮ್ಮೆ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಯು ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ನಿರೋಧಕ ಕೂಡ.
* ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ರಿಲ್ಯಾಕ್ಸ್ ಮೂಡ್ ಗೆ ಜರೆತರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಸಣ್ಣ ಇರುವವರಿಗೆ ದಪ್ಪಗಾಗಲೂ ಸಹಾಯ ಮಾಡುತ್ತದೆ. ಶೀತ ನೆಗಡಿಗೆ ರಾಮಬಾಣವಿದ್ದಂತೆಯೆ ಸರಿ.
* ಈ ಟೀ ಮಾಡುವುದು ಹೇಗೆ ಅಂತ ತಿಳಿದುಕೊಂಡು ಬಿಡಿ, ಒಂದೂವರೆ ಲೋಟ ನೀರು ಕುದಿ ಬಂದಾಗ ಅದಕ್ಕೆ ಅರ್ಧ ಇಂಚು ಶುಂಠಿ, ಪುದೀನಾ, ತುಳಸಿ ಎಲೆಗಳನ್ನು ಹಾಕಿ ಕುದಿಯಲು ಬಿಡಿ. ಒಂದೆರಡು ನಿಮಿಷಗಳ ನಂತರ 4 – 8 ಕೆಂಪು ದಾಸವಾಳದ ಹೂ ಪಕಳೆ ಹಾಕಿ ಕುದಿಸಿ, ತಣ್ಣಗಾದ ಮೇಲೆ ಕುಡಿಯಿರಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















