Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ : ಇಂದಿನಿಂದ ನವಂಬರ್ 15ರ ತನಕ ದರ್ಶನ ಭಾಗ್ಯ

---Advertisement---

 

ಹಾಸನ: ವರ್ಷಕ್ಕೆ ಒಂದೇ ಬಾರಿ ತೆರೆಯುವ ದೇವಸ್ಥಾನವೆಂದರೆ ಹಾಸನಾಂಬೆಯ ದೇವಸ್ಥಾನ. ವರ್ಷವಿಡಿ ದೇವಸ್ಥಾನದ ಬಾಗಿಲು ಹಾಕಿರಲಾಗುತ್ತದೆ. ವರ್ಷಕ್ಕೆ‌ ಒಮ್ಮೆ ದೇವಸ್ಥಾನದ ಬಾಗಿಲು ತೆರೆದರೆ ಹಚ್ಚಿದ್ದ ದೀಪ ಹಾಗೇ ಉರಿಯುತ್ತಾ ಇರುತ್ತದೆ. ಇದು ಹಾಸನಾಂಬೆಯ ಪವಾಡವೇ ಸರಿ. ಇಂದಿನಿಂದ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.

ನವೆಂಬರ್ 15ರ ತನಕ ಹಾಸನಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಾಂಪ್ರಾದಾಯದಂತೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಬಳಿಕ ಬನ್ನಿಮರಕ್ಕೆ ಪೂಜೆ ನೆರವೇರಿಸಲಾಗಿದೆ. ಭಕ್ತರಿಗೆ ಎರಡು ದಿನಗಳ ಕಾಲ ದರ್ಶನಕ್ಕೆ‌ ಅವಕಾಶ ಇರುವುದಿಲ್ಲ. ಇಂದು ಮತ್ತು ಕೊನೆಯ ದಿನ ಅವಕಾಶ ನಿಷಿದ್ಧ.

ಹಾಸನಾಂಬೆಯ ದೇವಸ್ಥಾನ ವಾಡವೇ ಸರಿ. ಹಚ್ಚಿದ ದೀಪ ಆರುವುದಿಲ್ಲ, ಹಾಕಿದ ಹೂ ಬಾಡುವುದಿಲ್ಲ, ಪ್ರಸಾದ ಕೂಡ ಹಾಳಾಗಿರುವುದಿಲ್ಲ. ಅದು ಒಂದು ವರ್ಷದ ಹಿಂದೆ ಇದೆಲ್ಲವನ್ನು ಇಟ್ಟು, ಪೂಜೆಯ ಬಳಿಕ ಬಾಗಿಲು ಹಾಕಲಾಗಿರುತ್ತದೆ. ಇದೆಲ್ಲವೂ ಸಾಕಷ್ಟು ಕುತೂಹಲವನ್ನೇ ಮೂಡಿಸುತ್ತದೆ. ಇದೆಲ್ಲ ತಾಯಿಯ ಪವಾಡವೇ ಸರಿ. ಹೀಗಾಗಿ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಹದಿನಾಲ್ಕು ದಿನಗಳ ಕಾಲ ತಾಯಿಯ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಭಕ್ತರು ದರ್ಶನ ಪಡೆದು ಪುನೀತರಾಗಬಹುದು. ಬಳಿಕ ಕೊನೆಯ ದಿನ ಅಂದರೆ ನವೆಂಬರ್ 15ರಂದು ಪೂಜಾ ವಿಧಿ ವಿಧಾನ ಮುಗಿಸಿ, ಬಾಗಿಲು ಹಾಕಲಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment