ಬಸವ, ಕುವೆಂಪು ಎಂದರೆ ಕನ್ನಡ, ಇಬ್ಬರಿಗೂ ಅವಮಾನವಾದರೆ ಇದ್ದು ಏನು ಪ್ರಯೋಜನ: ಪಾದಯಾತ್ರೆ ಹೊರಟ ಹಂಸಲೇಖ

suddionenews
1 Min Read

ಶಿವಮೊಗ್ಗ: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯಪುಸ್ತಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಕುವೆಂಪು, ಟಿಪ್ಪು ಸುಲ್ತಾನ ಅವರಿಗೆ ಏಕವಚನ ಬಳಸಿ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ರೋಹಿತ್ ಚಕ್ರತೀರ್ಥ ಮಾಡಿರುವ ಪಠ್ಯಗಳನ್ನು ಮಕ್ಕಳಿಗೆ ನೀಡುವುದು ಬೇಡವೆಂದು ಹೋರಾಟಗಳು ನಡೆಯುತ್ತಿವೆ. ಇದೀಗ ಹೊಸ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಾದಬ್ರಹ್ಮ ಹಂಸಲೇಖ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪಠ್ಯಪುಸ್ತಕದಲ್ಲಿನ ದೋಷ ವಿರೋಧಿಸಿ ಕುಪ್ಪಳ್ಳಿಯಿಂದ ಸಾಂಸ್ಕೃತಿಕ ಸೌಹಾರ್ದ ನಡಿಗೆ ಶುರುವಾಗಿದೆ. ಕುಪ್ಪಳ್ಳಿಯಿಂದ ತೀರ್ಥಹಳ್ಳಿಯ ತನಕ ಈ ನಡಿಗೆ ನಡೆಯಲಿದೆ. ಈ ನಡಿಗೆಯಲ್ಲಿ ಪಾಲ್ಗೊಂಡಿರುವ ನಾದಬ್ರಹ್ಮ ಹಂಸಲೇಖ ಈ ಬಗ್ಗೆ ಮಾತನಾಡಿದ್ದು, ನಮಗೆ ಕನ್ನಡಕ್ಕೆ ಮಹಾಮನೆ ಕಲ್ಯಾಣದಲ್ಲಿ, ಕವಿಶೈಲದಲ್ಲಿ ಗುರುಮನೆ. ಈ ಗುರುಮನೆಯಿಂದ ಇಂದು ನಾವೂ ಒಂದು ಕಹಳೆ ಉದುತ್ತಾ ಇದ್ದೀವಿ. ಅದು ಕುಪ್ಪಳ್ಳಿ ಕಹಳೆ.

ಅವತ್ತು ಗೋಕಾಕ್ ಚಳುವಳಿ, ಇವತ್ತು ಕುಪ್ಪಳ್ಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಬೇಕು. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿಲ್ಲಿದ್ದು ಏನು ಮಾಡಬೇಕು. ಬಸವ ಅಂದ್ರೆ ಕನ್ನಡ, ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರುನಾಡು, ಕುವೆಂಪು ಪುಟ್ಟಪ್ಪ ಎಂದರೆ ಕರ್ನಾಟಕ. ಈ ರೀತಿಯ ಅವಮಾನವಾದರೆ ನಾವಿದ್ದು ಏನು ಮಾಡುವುದು. ನಾಡೇ ಒಂದು ಗೀತೆ, ನಮ್ಮ ನಾಡೇ ಒಂದು ಧ್ವಜ. ಅವೆರಡಕ್ಕೂ ಅವಮಾನವಾದರೆ ನಾವಿದ್ದು ಏನು ಮಾಡುವುದು. ಕನ್ನಡದ ನಡ ಮುರಿಯುವ ನಡೆ ಕನ್ನಡ ನಾಡಲ್ಲಿ ಶುರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *