Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

EPFO ಚಂದಾದಾರರಿಗೆ ಸಿಹಿಸುದ್ದಿ: ಕಚೇರಿಗೆ ಅಲೆಯದೆ ಆನ್‌ಲೈನ್‌ನಲ್ಲೇ ಪಿಎಫ್‌ ವಿವರಗಳನ್ನು ತಿದ್ದುಪಡಿ ಮಾಡಿ

---Advertisement---

ನವದೆಹಲಿ :  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ತನ್ನ ಚಂದಾದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ನಿಮ್ಮ ಪಿಎಫ್ ಖಾತೆಯಲ್ಲಿನ ವಿವರಗಳು ತಪ್ಪಾಗಿದ್ದರೆ, ಅದನ್ನು ಸರಿಪಡಿಸಲು ಇಪಿಎಫ್‌ಒ ಕಚೇರಿಗೆ ಅಥವಾ ಕಂಪನಿಯ ಆಡಳಿತ ಮಂಡಳಿಯ (employer) ಬಳಿ ಅಲೆಯುವ ಅಗತ್ಯವಿಲ್ಲ. ಬದಲಾಗಿ, ನಿಮ್ಮ ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಸುಲಭವಾಗಿ ತಿದ್ದುಪಡಿ ಮಾಡಿಕೊಳ್ಳಬಹುದಾದ ಹೊಸ ಸೌಲಭ್ಯವನ್ನು ಇಪಿಎಫ್‌ಒ ಪರಿಚಯಿಸಿದೆ.

ಸರಿಯಾದ ವಿವರಗಳೇಕೆ ಮುಖ್ಯ?

ಪಿಎಫ್ ಖಾತೆಯಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಅಥವಾ ಬ್ಯಾಂಕ್ ಖಾತೆ ವಿವರಗಳಲ್ಲಿ ತಪ್ಪುಗಳಿದ್ದರೆ, ಭವಿಷ್ಯದಲ್ಲಿ ಪಿಎಫ್ ಹಣವನ್ನು ಕ್ಲೈಮ್ ಮಾಡುವಾಗ, ಕೆವೈಸಿ (KYC) ಅಪ್‌ಡೇಟ್ ಮಾಡುವಾಗ ಮತ್ತು ಖಾತೆಯನ್ನು ವರ್ಗಾಯಿಸುವಾಗ (Transfer) ಹಲವು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ, ಎಲ್ಲ ದಾಖಲೆಗಳಲ್ಲಿರುವ ವಿವರಗಳು ನಿಖರವಾಗಿರುವುದು ಬಹಳ ಮುಖ್ಯ.

ಯಾವೆಲ್ಲಾ ವಿವರಗಳನ್ನು ಅಪ್‌ಡೇಟ್ ಮಾಡಬಹುದು?

ಪಿಎಫ್ ಪೋರ್ಟಲ್‌ನಲ್ಲಿರುವ ‘ಜಾಯಿಂಟ್ ಡಿಕ್ಲರೇಷನ್’ (Joint Declaration) ಆಯ್ಕೆಯ ಮೂಲಕ ಈ ಕೆಳಗಿನ ವಿವರಗಳನ್ನು ತಿದ್ದುಪಡಿ ಮಾಡಬಹುದು

ಹೆಸರು

ಜನ್ಮದಿನಾಂಕ (Date of Birth)

ತಂದೆ ಅಥವಾ ಪತಿಯ ಹೆಸರು

ಲಿಂಗ (Gender)

ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ

ಕೆಲಸಕ್ಕೆ ಸೇರಿದ ದಿನಾಂಕ (Date of Joining) ಹಾಗೂ ಕೆಲಸ ಬಿಟ್ಟ ದಿನಾಂಕ (Date of Exit)

ಆನ್‌ಲೈನ್ ಮೂಲಕ ವಿವರಗಳನ್ನು ಅಪ್‌ಡೇಟ್ ಮಾಡುವ ಸರಳ ಪ್ರಕ್ರಿಯೆ:

ಮೊದಲು ಯುಎಎನ್ (UAN) ಪೋರ್ಟಲ್‌ಗೆ ಭೇಟಿ ನೀಡಿ.

ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ (Sign in) ಆಗಿ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಸಬ್ಮಿಟ್ ಮಾಡಿ.

ಮುಖಪುಟದಲ್ಲಿ (Home page) ‘ಮ್ಯಾನೇಜ್’ (Manage) ಆಯ್ಕೆಯನ್ನು ಕ್ಲಿಕ್ ಮಾಡಿ.

ಆ ವಿಭಾಗದಲ್ಲಿರುವ ‘ಜಾಯಿಂಟ್ ಡಿಕ್ಲರೇಷನ್’ (Joint Declaration) ಆಯ್ಕೆಯನ್ನು ಆರಿಸಿಕೊಳ್ಳಿ.

ನಂತರ ನಿಮ್ಮ ಕಂಪನಿಯ ಹೆಸರನ್ನು ಆಯ್ಕೆ ಮಾಡಿ.

ನೀವು ಬದಲಾಯಿಸಲು ಅಥವಾ ತಿದ್ದುಪಡಿ ಮಾಡಲು ಬಯಸುವ ವಿವರಗಳನ್ನು ಸರಿಯಾಗಿ ನಮೂದಿಸಿ.

ಎಲ್ಲವನ್ನೂ ಪರಿಶೀಲಿಸಿದ ನಂತರ ‘ಪ್ರೊಸೀಡ್’ (Proceed) ಮೇಲೆ ಕ್ಲಿಕ್ ಮಾಡಿ, ಮೊಬೈಲ್‌ಗೆ ಬರುವ ಮತ್ತೊಂದು ಒಟಿಪಿಯನ್ನು ನಮೂದಿಸಿ.

ಈ ಪ್ರಕ್ರಿಯೆ ಮುಗಿದ ಕೆಲವೇ ಹೊತ್ತಿನಲ್ಲಿ ನಿಮ್ಮ ವಿವರಗಳು ಇಪಿಎಫ್‌ಒ ರೇರ್ಕಾರ್ಡ್‌ನಲ್ಲಿ ಅಪ್‌ಡೇಟ್ ಆಗುತ್ತವೆ.

ಈ ಹಿಂದೆ ಇಂತಹ ಯಾವುದೇ ತಿದ್ದುಪಡಿ ಮಾಡಬೇಕಿದ್ದರೂ ಕಡ್ಡಾಯವಾಗಿ ಕಂಪನಿಯನ್ನು ಅಥವಾ ಇಪಿಎಫ್‌ಒ ಕಚೇರಿಯನ್ನು ಸಂಪರ್ಕಿಸಬೇಕಿತ್ತು. ಆದರೆ ಇದೀಗ ಆನ್‌ಲೈನ್ ಸೌಲಭ್ಯದಿಂದಾಗಿ ಉದ್ಯೋಗಿಗಳಿಗೆ ತಮ್ಮ ಮನೆಯಿಂದಲೇ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಒದಗಿಬಂದಿದೆ.

Join WhatsApp

Join Now

Join Telegram

Join Now