Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಕನ್ನಡ ವೀಕ್ಷಕರಿಗೆ ಗುಡ್ ನ್ಯೂಸ್ : ಬಿಗ್ ಅಪ್ಡೇಟ್ ನೊಂದಿಗೆ ಇಂದು ಸುದ್ದಿಗೋಷ್ಟಿ

---Advertisement---

ಬೆಂಗಳೂರು: ಬಿಗ್ ಬಾಸ್ ಗೆ ಅದರದ್ದೇ ಆದ ಸಪರೇಟ್ ವರ್ಗವಿದೆ. ಬಿಗ್ ಬಾಸ್ ಶೋ ಶುರುವಾಗುವುದನ್ನೇ ಕಾಯುತ್ತಾವಿರುತ್ತಾರೆ. ಇಷ್ಟು ಸೀಸನ್ ಒಂದು ರೀತಿಯಾದ್ರೆ ಈ ಸೀಸನ್ ಬೇರೆಯದ್ದೇ ರೀತಿಯಾಗಿರುತ್ತದೆ. ಹೀಗಾಗಿ ಕುತೂಹಲ ಕೊಂಚ ಜಾಸ್ತಿಯೇ ಆಗಿದೆ. ಸೀಸನ್ 11 ಕೊನೆ, ನಾನು ಬಿಗ್ ಬಾಸ್ ಬಿಡ್ತಾ ಇದ್ದೀನಿ ಅಂತ ಕಿಚ್ಚ ಸುದೀಪ್ ಅವರೇ ಅಧಿಕೃತವಾಗಿ ತಿಳಿಸಿದ್ದರು. ಸೀಸನ್ 12 ನಡೆಸಿಕೊಡುವುದಕ್ಕೆ ಹಲವು ಮಹತ್ವದ ಕಂಡೀಷನ್ಸ್ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯ ಸೀಸನ್ ವಿಶೇಷತೆಯನ್ನು ಒಳಗೊಂಡಿದೆ.

ಇಂದು ಬಿಗ್ ಬಾಸ್ ಬಗ್ಗೆ ಬಿಗ್ ಅಪ್ಡೇಟ್ ನೀಡುವುದಕ್ಕೆ ಕಲರ್ಸ್ ಕನ್ನಡ ದೊಡ್ಡ ಪ್ರೆಸ್ ಮೀಟ್ ಅನ್ನ ಸಿದ್ಧಪಡಿಸಿದೆ. ಸಂಜೆ ವೇಳೆಗೆ ಶುರುವಾಗುವ ಪ್ರೆಸ್ ಮೀಟ್ ಮೂಲಕ ಬಿಗ್ ಬಾಸ್ ಗೆ ಕಾಯ್ತಿದ್ದವರಿಗೆ ಹಲವು ಪ್ರಶ್ನೆಗಳಿಗೆ ಉತ್ತರವೂ ಸಿಗಲಿದೆ. ಸುದೀಪ್ ಅವರೇ ಇರ್ತಾರಾ..? ಹಾಕಿರೋ ಕಂಡೀಷನ್ಸ್ ಏನು..? ಸ್ಪರ್ಧಿಗಳು ಯಾವ ಥರ ಹೀಗೆ ಅನೇಕ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ.

ಬಿಗ್ ಬಾಸ್ ಗೆ ಈ ಬಾರಿ ಯಾವೆಲ್ಲಾ ಸ್ಪರ್ಧಿಗಳು ಬರ್ತಾ ಇದ್ದಾರೆ ಎಂಬುದಕ್ಕೆ ಕಲರ್ಸ್ ಕನ್ನಡ ವಾಹಿನಿ ಯಾವುದೇ ಕಾರಣಕ್ಕೂ ಕ್ಲೂ ಬಿಟ್ಟು ಕೊಡುವುದಿಲ್ಲ. ಆರಂಭದ ದಿನವೇ ಸ್ಪರ್ಧಿಗಳ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುತ್ತದೆ. ಆದರೆ ಸೋಷಿಯಲ್ ಮೀಡಿಯಾದಲ್ಲಂತೂ ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಹೋಗುವ ಸ್ಪರ್ಧಿಗಳ ಪಟ್ಟಿ ಸಿದ್ಧವಾಗಿದೆ. ಆದರೆ ಅದೇ ಸ್ಪರ್ಧಿಗಳು ಅಂತಿಮವಾಗಿರುವುದಿಲ್ಲ. ಒಂದೆರಡು ಆಯ್ಕರ ಸರಿಯಾಗಿರಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment