ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ತಾಲ್ಲೂಕಿನ ಬೆಳಗಟ್ಟ ಮೂಲದ ಹಾಗೂ ನಗರದ ಬ್ಯಾಂಕ್ ಕಾಲೋನಿ ನಿವಾಸಿ ಪೊಪ್ಪಲ ಲಕ್ಷ್ಮಣ ರೆಡ್ಡಿ ಪಿ.ಟಿ. (87 ವರ್ಷ) ಇಂದು ಮಧ್ಯಾನ್ಹ 3 ಗಂಟೆಗೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಸೆಪ್ಟೆಂಬರ್. 16) ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಬೆಳಿಗ್ಗೆ 10 : 30 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.








