Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇವರು ಅವರಿಗೆ ಒಳ್ಳೆಯದು ಮಾಡಲಿ : ನ್ಯಾಯಾಲಯದಿಂದ ಬಂದ ಮೇಲೆ ಕಿಚ್ಚನ ರಿಯಾಕ್ಷನ್

---Advertisement---

ಬೆಂಗಳೂರು: ನಿರ್ಮಾಪಕರು ಹಾಗೂ ಕಿಚ್ಚ ಸುದೀಪ್ ನಡುವೆ ನಡೆಯುತ್ತಿರುವ ಕಾಲ್ ಶೀಟ್ ವಾರ್ ಎಲ್ಲರಿಗೂ ಗೊತ್ತಿರುವ ವಿಚಾರವೆ. ಇದೀಗ ಆ ವಾರ್ ಕೋರ್ಟ್ ಮೆಟ್ಟಿಲೇರಿದೆ. ಕಿಚ್ಚ ಸುದೀಪ್ ಇಂದು ನ್ಯಾಯಲಯಕ್ಕೆ ಈ ಸಂಬಂಧ ಹಾಜರಾಗಿದ್ದರು.

ಇದೇ ವೇಳೆ‌ ಮಾತನಾಡಿದ ಸುದೀಪ್, ಯಾರು ಏನೇ ಆರೋಪ ಮಾಡಿದ್ರು ಕೋರ್ಟ್ ನಿಂದ ಸರಿ ಉತ್ತರ ಸಿಗುತ್ತೆ. ಒಂದು ವಿಚಾರ ಹೇಳೋಕೆ ಇಷ್ಟಪಡ್ತೀನಿ. ದೇವ್ರು ಒಳ್ಳೆದ್ ಮಾಡ್ಲಿ.. ಒಂದಂತು ಸತ್ಯ. ಯಾವುದೇ ಸುಳ್ಳಿರಲಿ, ಸತ್ಯ ಇರಲಿ ಬಹಿರಂಗವಾಗಿ ಹೊರಗೆ ಬರಲೇ ಬೇಕು. ಸರಿಯಾದ ಮಾರ್ಗದಲ್ಲಿ ಹೋಗ್ತಿದ್ದೀನಿ ಅಂತಾ ನಾನು ಅಂದ್ಕೊಂಡಿದೀನಿ. ಕೋರ್ಟ್ ಗೆ ಹೋದ್ರೆ ಎಲ್ಲಾ ಸರಿ ಹೋಗುತ್ತೆ. ನಾನು ಕಲಾವಿದ ಆದ್ಮೇಲೆ ಎಲ್ಲರಿಗೂ ಸಹಾಯ ಮಾಡ್ತೀನಿ ಅಂತಾ ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಮಾಧ್ಯಮವನ್ನ ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಅಂತಾ ಹೆಂಗ್ ಬೇಕು ಹಂಗೆ ಮಾತಾಡ್ಬಾರ್ದು. ನಾನು ಸರಿಯಾಗೆ ನಡ್ಕೊಂಡ್ ಬಂದಿದೀನಿ. ಎಲ್ಲರ ಆರೋಪಕ್ಕೆ ನಾನು ಉತ್ತರ
ಕೊಡಲ್ಲ.

ಎಲ್ಲಿ ಇತ್ಯರ್ಥ ಆಗ್ಬೇಕು ಅಲ್ಲಿ ಇತ್ಯರ್ಥ ಆಗುತ್ತೆ. ಅದ್ಕೆ ನಾನು ಕೋರ್ಟ್ ನಲ್ಲಿ ಬಂದೆ. ಜಾಕ್ ಮಂಜು ಏನ್ ಉತ್ತರ ಕೊಡಬೇಕಿತ್ತು ಕೊಟ್ಟಿದಾರೆ. ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದ್ರೆ ಅವ್ರಿಗೂ ನಂಗೂ ಏನ್ ವ್ಯತ್ಯಾಸ ಇರುತ್ತೆ. ನಾನು ಬೆಂಡಾಗಿ ಕೂಡ ಇನ್ನೊಬ್ರಿಗೆ ಕೆಟ್ಟ ಉದಾಹರಣೆ ಆಗ್ಬಾರ್ದು.‌ ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲ. ಹಂಗೇನಾದ್ರು ಆಗುತ್ತೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತಾ ಅರ್ಥ..

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...