ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ವ್ಯಕ್ತಿಯೊಬ್ಬ ನಿಂತಲ್ಲೇ ತನ್ನ ಸ್ಥಿಮಿತ ಕಳೆದುಕೊಂಡಿದ್ದು. ಮುಂದೆ ಒಂದೆಜ್ಜೆ ಇಡಲು ಅವನಿಗೆ ಆಗದೆ ಇರುವಂತಹ ಸ್ಥಿತಿ. ಈ ವಿಡಿಯೋ ಕಂಡ ಹಲವರು, ಝಾಂಬಿ ಡ್ರಗ್ಸ್ ಪ್ರಭಾವ ಎಂದೇ ಹೇಳಿದ್ದರು. ದುನಿಯಾ ವಿಜಯ್ ಅವರು ಕೂಡ ಈ ಸಂಬಂಧ ಒಂದು ವಿಡಿಯೋ ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಜೊತೆಗೆ ಕಡೆಯಲ್ಲಿ ಇರಬಹುದು ಎಂಬ ಸಾಲನ್ನ ಸೇರಿಸಿದ್ದರು. ಇದೀಗ ಅದೇ ವಿಚಾರ ಸಂಕಷ್ಟ ತಂದಿಡುವ ಎಲ್ಲಾ ಸಾಧ್ಯತೆ ಕಾಣಿಸ್ತಾ ಇದೆ.
ಆದರೆ ಈ ವಿಡಿಯೋನಾ ದುನಿಯಾ ವಿಜಯ್ ಆ ನಂತರದಲ್ಲಿ ಡಿಲೀಟ್ ಮಾಡಿದ್ದರು. ಆದರೆ ಈಗ ರಿಟ್ರೀವ್ ಗಾಗಿ ಪೊಲೀಸರು ಪ್ರಯತ್ನ ಮಾಡ್ತಾ ಇದ್ದಾರೆ. ಈ ಸಂಬಂಧ ಬಾಗಲೂರು ಪೊಲೀಸರು Instagram ಕಂಪನಿಗೆ ಪತ್ರ ಬರೆದಿದ್ದಾರೆ. ಝಾಂಬಿ ಡ್ರಗ್ ಬಗ್ಗೆ ವಿಡಿಯೋ ಮಾಡಿದ್ದ ಅನೇಕರಲ್ಲಿ ಈಗಾಗಲೇ 15 ಜನಕ್ಕೆ ಕ್ಲಾರಿಟಿ ಕೇಳಿ ನೋಟೀಸ್ ನೀಡಿದ್ದಾರೆ. ಸರಿಯಾದ ಯಾವುದೇ ಮಾಹಿತಿ ಇಲ್ಲದೆ ವಿಡಿಯೋ ಮಾಡಿದ್ದರ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ದುನಿಯಾ ವಿಜಯ್ ಮಾತ್ರವಲ್ಲ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಕೂಡ ಈ ಸಂಬಂಧ ವೀಡಯೋ ಮಾಡಿ, ನಂತರ ಡಿಲೀಟ್ ಮಾಡಿದ್ದರು. ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇಬ್ಬರು ಕೂಡ ವಿಚಾರಣೆಯನ್ನು ಎದುರಿಸಬೇಕಾದ ಅನಿವಾರ್ಯತೆ ಬರಬಹುದು. ಸದ್ಯಕ್ಕೆ ಡಿಲೀಟ್ ಆದ ವಿಡಿಯೋಗಳ ರಿಟ್ರೀವ್ ಗೆ Instagram ಸಂಸ್ಥೆಯ ಮೊರೆ ಹೋಗಿದ್ದಾರೆ ಪೊಲೀಸರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















