ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಏ. 21 : ಮಹಿಳಾ ಮೀಸಲಾತಿ ಕಾಯ್ದೆಗೆ ಸೋಲು ಹಿನ್ನಲೆ ವಿಶೇಷ ಅಧಿವೇಶನವನ್ನು ಮಹಿಳೆಯರಿಗೆ ಮೀಸಲಾತಿ ತಕ್ಷಣವೇ ಜಾರಿ ತರುವ ನಿಟ್ಟಿನಲ್ಲಿ ಕರೆಯಲಾಗಿತ್ತು. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮಸೂದೆ ಜಾರಿಗೊಳಿಸಲು ಬಿಡಲಿಲ್ಲ ಮಹಿಳಾ ಮೀಸಲಾತಿ ಬಿಲ್‍ಗೆ ಸೋಲಾಗಿದೆ. ಪುರುಷ ಪ್ರಧಾನ ದೇಶದಲ್ಲಿ ಇದೊಂದು ಕಹಿ ಘಟನೆಯಾಗಿದೆ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಮಸೂದೆ ಇದಾಗಿತ್ತು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಇಂದು ಚಿತ್ರದುರ್ಗ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವಿನ ವಿರುದ್ಧ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿ ದೇಶದ ಪ್ರಧಾನಿ ಮೋದಿಜೀಯವರು 16, 17 ಹಾಗೂ 18 ರಂದು ಮೂರು ದಿನಗಳ ಕಾಲ ಲೋಕಸಭೆಯ ವಿಶೇಷ ಅಧಿವೇಶನ ಕರೆದಿದ್ದರು.ಮಹಿಳೆಯರಿಗೆ ಮೀಸಲಾತಿ ಜಾರಿಗೆ ಮಾಡುವ ಸಲುವಾಗಿ ಈ ಅಧಿವೇಶನ ಕರೆದಿದ್ದರು.ಆದರೆ ಇಂಡಿಯಾ ಮೈತ್ರಿಕೂಟ ಆ ಬಿಲ್ ಪಾಸ್‍ಗೆ ವಿರೋಧ ಮಾಡಿದೆ.ಮಹಿಳಾ ಮೀಸಲಾತಿ ಬಿಲ್‍ಗೆ ಲೋಕಸಭೆಯಲ್ಲಿ ಸೋಲಾಯಿತು. ಈ ಸೋಲು ಮೊದಲಲ್ಲ. 900 ವರ್ಷಗಳಿಂದ ಸೋಲನ್ನು ಕಂಡಿದ್ದೇವೆ.ಬಸವಣ್ಣನವರ ಕಾಲದಲ್ಲೂ ಮಹಿಳೆಯರ ವಿಚಾರದಲ್ಲಿ ಸೋಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ವಿರೋಧ ಮಾಡಿವೆ… ಪುರುಷ ಪ್ರದಾನ ದೇಶದಲ್ಲಿ ಇದೊಂದು ಕಹಿ ಘಟನೆಯಾಗಿದೆ ಎಂದರು.
ಪ್ರಧಾನಿ ಮೋದಿಯವರಿಗೆ ಮಹಿಳಾ ಮೀಸಲಾತಿ ಜಾರಿ ಮಾಡುವ ಆಸೆ ಇತ್ತು.ಜೊತೆಯಲ್ಲಿ 543 ಇದ್ದ ಸೀಟ್ ಗಳನ್ನು 850 ಕ್ಕೆ ಹೆಚ್ಚಳ ಮಾಡಲು ಈ ಬಿಲ್ ತಂದಿದ್ದರು. ಕಾಂಗ್ರೆಸ್ ದಕ್ಷಿಣ ಭಾರತದ ಸೀಟ್ ಕಡಿಮೆ ಆಗುತ್ತವೆ ಎಂದು ಹೇಳಿ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ 2023 ರಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿದೆ. ಅದರಂತೆಯೇ ಮಾಡುವಂತೆ ಅವರು ಪಟ್ಟು ಹಿಡಿದಿದ್ದರು.1956 ರಲ್ಲಿ ಭಾಷಾವಾರು ಪ್ರಾಂತ್ಯ ಮಾಡಿದಾಗ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಿತ್ತು. ಜವಹರಲಾಲ್ ನೆಹರು ಅಂದು ಮಾಡಿದ್ದು.. ಅವತ್ತು ಏಕೆ ಕಾಂಗ್ರೆಸ್ ನಾಯಕರು ಮೌನವಹಿಸಿದ್ದರು ಎಂದು ದೂರಿದರು.
ಕುಂಟು ನೆಪವೊಡ್ಡಿ ಮಸೂದೆಗೆ ಸೋಲು.ಕಾಂಗ್ರೆಸ್‍ನ ಮಹಿಳಾ ವಿರೋದಿ üನೀತಿ ಇದು ನೆಹರು ಮನೆತನಕ್ಕೆ ದೇಶದ ವ್ಯವಸ್ಥೆ ಬಗ್ಗೆ ಮಾಹಿತಿಯಿಲ್ಲನೆಹರು ಮನೆಯಲ್ಲಿ ಎಲ್ಲಾ ಮಹಿಳೆಯರುಅಧಿಕಾರ ಅನುಭವಿಸಿದ್ದಾರೆ ಒಕ್ಕೂಟ ವ್ಯವಸ್ಥೆಗೆ ದ್ರೋಹ ಮಾಡಿದಂತಾಗುತ್ತದೆ ಖರ್ಗೆ,ರಾಹುಲ್ ಗಾಂಧಿ ಖುಷಿಪಡಿಸಲು ಸಿದ್ದರಾಮಯ್ಯ ಮಾತನಾಡ್ತಾರೆ ಸಿದ್ದರಾಮ ಯ್ಯಗೆ ಯಾವುದೇ ಮುಂದಾಲೋಚನೆ ಇಲ್ಲ, ಮಸೂದೆ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು ಖಂಡನೀಯ ಮೋದಿಯವರು ಇಂದಲ್ಲ ಮಹಿಳಾ ಮೀಸಲಾತಿ ಮಸೂದೇ ಮಾಡೇ ತೀರುತ್ತೇವೆ ಎಂದಿದ್ದಾರೆ ಡಿಲಿಮಿಟೇಷನ್‍ನೊಂದಿಗೆ ಮಹಿಳಾ ಮೀಸಲಾತಿ ಸಹ ಆಗಲಿದೆ ಎಂಧು ಕಾರಜೋಳ ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ನನ್ನದೊಂದು ಪ್ರಶ್ನೆ ಹೆಣ್ಣು ಮಕ್ಕಳಿಗೆ ತಂದಿರುವ ವಿಶೇಷ ಯೋಜನೆಗಳು ಏನು ಮೋದಿ ಅಧಿಕಾರಕ್ಕೆ ಬಂದ ಬಳಿಕ 12 ಕೋಟಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ ಕೈ ನಾಯಕರು 60 ವರ್ಷದ ಅಧಿಕಾರವಧಿಯಲ್ಲಿ ಯಾಕೆ ಕಟ್ಟಲಿಲ್ಲ ಹಲವು ರಾಜ್ಯಗಳಲ್ಲಿ ಬಿಜೆಪಿಯಿಂದ ಮಹಿಳಾ ಸಿಎಂಗಳನ್ನು ಮಾಡಲಾಗಿದೆ ಕಾಂಗ್ರೆಸ್ ಎಷ್ಟು ಜನರನ್ನು ಉನ್ನತ ಸ್ಥಾನಕ್ಕೆ ತಂದಿದೆ ಎಂದು ಉತ್ತರಿಸಲಿ ಕಾಂಗ್ರೆಸ್ ನವರು ಮಿಲಿಟರಿ ವಿಚಾರಕ್ಕು ವಿರೋಧ ಮಾಡ್ತಾರೆ ಕಾಂಗ್ರೆಸ್‍ನವರು ಜೀವನದುದ್ದಕ್ಕೂ ಅಭಿವೃದ್ಧಿ, ಸುರಕ್ಷತೆ ಹಾಗೂ ರಕ್ಷಣೆ ವಿಚಾರದಲ್ಲಿ ವಿರೋಧ 371 ಸ್ಥಾನ ಮಾನ ತೆಗೆದ ಹಿನ್ನೆಲೆಯಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸುವ ಮೂಲಕ ದೇಶದ ಮಹಿಳೆಯರಿಗೆ ಐತಿಹಾಸಿಕ ನ್ಯಾಯ ಒದಗಿಸಿದೆ. ಜೊತೆಗೆ, ಜನಸಂಖ್ಯಾ ಆಧಾರದ ಮೇಲೆ ಸಮರ್ಪಕ ಪ್ರತಿನಿಧಿತ್ವವನ್ನು ಖಚಿತಪಡಿಸುವ ಮರು ವಿಂಗಡಣೆ ಪ್ರಕ್ರಿಯೆಗೆ ದಾರಿಯೊಡ್ಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ಇಂತಹ ಮಹತ್ವದ ವಿದೇಯಕಗಳಿಗೆ ವಿರೋಧ ವ್ಯಕ್ತಪಡಿಸಿ, ಮಹಿಳಾ ಸಬಲೀಕರಣದ ವಿಷಯದಲ್ಲಿ ತನ್ನ ದ್ವಂದ್ವ ನಿಲುವನ್ನು ಮತ್ತೆ ಬಯಲಿಗೆ ತಂದಿದೆ. ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಮಾತ್ರ ಮಾತುಗಳಾಡುವ ಈ ರೀತಿಯ ನಿಲುವನ್ನು ಕಾಂಗ್ರೆಸ್ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
1957 ರಲ್ಲಿ ಭಾಷಾವಾರು ಪ್ರಾಂತಗಳನ್ನು ಮಾಡಿದ್ದು,ನೆಹರು ಜಾತಿವಾರು ಪ್ರಾಂತಗಳಾಗುವುದನ್ನು ತಪ್ಪಿಸಲು ಭಾಷಾವಾರು ಪ್ರಾಂತ ನಿರ್ಮಾಣ ಪೂರ್ವಜರು ತುಂಭಾ ಯೋಗ್ಯ ಕೆಲಸ ಮಾಡಿದ್ದಾರೆ ರಾಹುಲ್ ಗಾಂಧಿ ಹೋರಾಟ ಅರ್ಥಹೀನವಾದದ್ದು ಸೀಟು ಹೆಚ್ಚುಗೊಳಿಸೋದು ಬೇಡವೆಂಬುದು ಕಾಂಗ್ರೆಸ್ ನವರ ಕುಂಟು ನೆಪವಾಗಿದೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ,ಉತ್ತರರಾಜ್ಯಗಳಿಗೆ ಲಾಭವಾಗಲಿದೆ ಎಂಬುದು ಕಾಂಗ್ರೆಸ್ ವಾದ ಹೊಸ ಕಾನೂನಿನಿಂದ 50%ಸ್ಥಾನಗಳು ಹೆಚ್ಚಳವಾಗಲಿವೆ ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿಯಾಗಿದ್ದಾನೆ ಎಂದ ಅವರು. ಬಿಜೆಪಿ ಸರ್ಕಾರವು ಮಹಿಳೆಯರ ಅಭಿವೃದ್ಧಿ, ಸುರಕ್ಷತೆ ಮತ್ತು ಸ್ವಾವಲಂಬನೆಗಾಗಿ ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಸದಾ ಬದ್ಧವಾಗಿದೆ ಎಂದು ತಿಳಿಸಲಾಯಿತು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹೋರಾಟ ಅರ್ಥ ಹೀನವಾದುದು. ಕಾಂಗ್ರೆಸ್ ನ ರಾಹುಲ್ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳದ್ದು ಮಹಿಳೆಯರ ವಿಚಾರದಲ್ಲಿ ಕೇವಲ ಮೊಸಳೆ ಕಣ್ಣೀರು ಮಾತ್ರ.50 ಲಕ್ಷ ಜನಸಂಖ್ಯೆ ಇರುವ ಲೋಕಸಭಾ ಸದಸ್ಯ ಜನರಿಗೆ ಯಾವ ರೀತಿ ಸ್ಪಂಧಿಸುತ್ತಾರೆ. ಕುಂಟು ನೆಪವೊಡ್ಡಿ ಬಿಲ್ ಸೋಲಿಸಿದ್ದಾರೆ… ಮಹಿಳಾ ವಿರೋಧಿ ನೀತಿ ಕಾಂಗ್ರೆಸ್ ಪಕ್ಷ ತಾಳಿದೆ ನೆಹರು ಕುಟುಂಬಕ್ಕೆ ವ್ಯತ್ಯಾಸ ಗೊತ್ತಿಲ್ಲ.. ದೇಶದ ವ್ಯವಸ್ಥೆ ಗೊತ್ತಿಲ್ಲ. ಯಾವುದೇ ಪರಿಜ್ಞಾನ ಇಲ್ಲದೇ ವಿರೋಧ ಮಾಡಿದ್ದು.. ಒಕ್ಕೂಟದ ವ್ಯವಸ್ಥೆಗೆ ದ್ರೋಹ ಮಾಡಿದಂತಾಗಿದೆ. ಪ್ರಧಾನಿ ಮೋದಿ ಇದೇ ಅವಧಿಯಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡುತ್ತಾರೆ.ನನ್ನ ಅಕ್ಕ ತಂಗಿಯರಲ್ಲಿ ವಿನಂತಿ ಮಾಡುತ್ತೇನೆ ಕಾಂಗ್ರೆಸ್ ಸರ್ಕಾರದ ದುರಾಡಳಿವನ್ನು ಖಂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜ್, ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ, ದಾವಣಗೆರೆ ವಿಭಾಗದ ಸಹಪ್ರಭಾರಿ ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರಿಶ್, ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ, ಶ್ರೀನಿವಾಸ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಶ್ಯಾಮಲ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೇಖಾ, ಖಂಜಾಚಿ ಪ್ರಸಾದ್ ಜಿಲ್ಲಾ ವಕ್ತಾರ ನಾಗಾರಜ್ ಬೇದ್ರೇ ಉಪಸ್ಥಿತರಿದ್ದರು.


















