Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ: ‘ಕೈ’ ಹಿಡಿದ ದಿವಂಗತ ಅಶ್ವತ್ಥರೆಡ್ಡಿ ಮೊಮ್ಮಗ ಸಂದೀಪ್ ಗುಂಡಾರ್ಪಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅ. 12 : ಮಾಜಿ ಸಚಿವ ದಿ.ಅಶ್ವತ್‍ರೆಡ್ಡಿಯವರ ಮೊಮ್ಮಗ ಸಂದೀಪ್ ಗುಂರ್ಡಾಪಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ.ತಾಜ್‌ ಪೀರ್ ರವರು ಸಂದೀಪ್ ಗುಂಡಾರ್ಪಿ ರವರಿಗೆ ಕಾಂಗ್ರೆಸ್ ಪಕ್ಷದ ಬಾವುಟವನ್ನು ನೀಡುವುದರ ಮೂಲಕ ಶಾಲನ್ನು ಹಾಕಿ ಪಕ್ಷಕ್ಕೆ ಅಧಿಕೃತವಾಗಿ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ರಾಜ್ಯದ ಹಿರಿಯ ಮುತ್ಸದ್ದಿ ಹಾಗೂ ಜಿಲ್ಲೆಯಲ್ಲಿ ಹಲವು ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಜಿ.ಎಚ್. ಅಶ್ವತ್ಥರೆಡ್ಡಿ ಅವರ ಕುಟುಂಬದ ಹಿರಿಯ ಮೊಮ್ಮಗ ಸಂದೀಪ್ ಗುಂಡಾರ್ಪಿ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಹಿಂದಿನಿಂದಲೂ ಸಾಮಾಜಿಕ ಕಾರ್ಯಕ್ರಮ ಹಾಗೂ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂದೀಪ್ ಗುಂಡಾರ್ಪಿ ಅವರು, ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲೂ ದೂರದಿಂದಲೇ ಭಾಗವಹಿಸುತ್ತಿದ್ದರು. ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದ್ದು, ಅದರಂತೆ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ ಅಶ್ವತ್ಥರೆಡ್ಡಿ ಅವರ ಬಗ್ಗೆ ಅಪಾರ ಅಭಿಮಾನವಿರುವ ಎಲ್ಲರೂ ಸೇರಿ ಸಂದೀಪ್ ಗುಂಡಾರ್ಪಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಸಂದೀಪ್ ಗುಂರ್ಡಾಪಿ ತಮ್ಮ ತಾತಂದಿರು ಕಾಂಗ್ರೆಸ್ ಪಕ್ಷದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು ಹಾಗೂ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಧೀಮಂತ ನಾಯಕರಾಗಿದ್ದರು ತಾವು ದಿವಂಗತ ಮಾಜಿ ಸಚಿವ ಅಶ್ವತ್ಥರೆಡ್ಡಿಯವರ ಮೊಮ್ಮಗ ಹಾಗೂ ಹಿಂದಿನ ಸಚಿವರೊಬ್ಬರ ಕುಟುಂಬದಿಂದ ಬಂದಿರುವುದಾಗಿ ತಿಳಿಸಿ ತಾವೂ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೂ, ಬಹಿರಂಗವಾಗಿ ಗುರುತಿಸಿ ಕೊಂಡಿರಲಿಲ್ಲ. ಆದರೆ ಈ ದಿನ ಕಾಂಗ್ರೆಸ್ ವತಿಯಿಂದ ಅಧಿಕೃತವಾಗಿ ತಾಜ್‍ಪೀರ್ ಅವರ ತಮಗೆ ಬಾವುಟ ನೀಡಿ, ಪಕ್ಷದ ಶಾಲ್‍ನ್ನು ಹೊಂದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಮತ್ತು ತಮ್ಮಂತಹ ಯುವ ಪಡೆಯನ್ನು ಕಟ್ಟಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿ ಹಿರಿಯರು ಹಾಗೂ ಮುಖಂಡರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸೇರಿರುವುದು ತಮಗೆ ಅತ್ಯಂತ ಖುಷಿಯನ್ನು ತಂದಿದೆ. ತಮ್ಮ ರಕ್ತದಲ್ಲೇ ಸುಮಾರು ಐದಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಂಟು ಇದ್ದು, ತಾವು ಸೆಕ್ಯುಲರ್ ಮನಸ್ಥಿತಿಯವರಾಗಿ ಸಂವಿಧಾನದ ಆಧಾರದ ಮೇಲೆ ತಮ್ಮ ಮನಸ್ಸನ್ನು ರೂಪಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷವೇ ತಮಗೆ ಅತ್ಯಂತ ಸೂಕ್ತವಾದ ಪಕ್ಷವಾಗಿದೆ ಎಂದು ದೃಢವಾಗಿ ನಂಬಿರುವುದಾಗಿ ತಿಳಿಸಿದ್ದಾರೆ.

ಈ ದೇಶದ ಸೇವೆಗೆ ಕಾಂಗ್ರೆಸ್ ಪಕ್ಷವೇ ಅತ್ಯಂತ ಒಳ್ಳೆಯ ಪಕ್ಷ ಎಂಬ ಭಾವನೆಯಿಂದ ತಾವು ಮತ್ತೆ ಕಾಂಗ್ರೆಸ್‍ಗೆ ಮರಳಿರುವುದಾಗಿ ಸಂದೀಪ್ ಗುಂಡಾರ್ಪಿ ಸ್ಪಷ್ಟಪಡಿಸಿ. ಇನ್ನುಮುಂದೆ ಪಕ್ಷವನ್ನು ಸಂಘಟಿಸಿ, ಬಲಪಡಿಸುವ ಮೂಲಕ ಪಕ್ಷದ ಬೆಳವಣಿಗೆಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯಾಧ್ಯಕ್ಷರಾದ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಕುಮಾರಗೌಡ, ಖುದ್ದುಸ್, ಆನಂತಕುಮಾರ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now