ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 12 : ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಪ್ರಗತಿಯ ನಡುವೆ ಕೃತಕ ಬುದ್ದಿ ಮತ್ತೆಯ ಸುತ್ತಲಿನ ಚರ್ಚೆಯು ಊಹಾತ್ಮಕ ಕಾಲ್ಪನಿಕತೆಯಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರದ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಸ್.ಬಿ.ಪಾಟೀಲ್ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಸಮಾಜಶಾಸ್ತ್ರ ವಿಭಾಗ, ಐಕ್ಯುಎಸಿ. ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕೃತಕ ಬುದ್ದಿ ಮತ್ತೆ ಮತ್ತು ಸೈಬರ್ ಭದ್ರತೆ ಎಂಬ ಉಪನ್ಯಾಸ ಕುರಿತು ಮಾತನಾಡಿದರು.
ಮಾನವ ದೌರ್ಬಲ್ಯ ಮತ್ತು ದೋಷಗಳ ಪ್ರತಿಯಾಗಿ ಕೃತಕ ಬುದ್ದಿ ಮತ್ತೆ ಮಿತಿಯಿಲ್ಲದ ಸಾಮಥ್ರ್ಯದ ಹೋಲಿಕೆಗೆ ಈ ಚರ್ಚೆಯು ಕೇಂದ್ರಿಕೃತವಾಗಿದೆ. ಈ ಹೊಸ ತಂತ್ರಜ್ಞಾನವು ಹೊಸ ರೀತಿಯ ಶೀತಲ ಸಮರಕ್ಕೆ ಮುನ್ನುಡಿ ಬರೆಯಲಿದೆ ಎಂದು ವಿಶ್ವ ಆರ್ಥಿಕ ವೇದಿಕೆಯಂಥ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಅಮೇರಿಕ ಮತ್ತು ಚೀನಾ ಮಧ್ಯೆ ಕೃತಕ ಬುದ್ದಿ ಮತ್ತೆ ಶಸ್ತ್ರಾಸ್ತ್ರಗಳ ಸ್ಪರ್ಧೆ ಶುರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಓದಿಗಾಗಿ ನೋಟ್ಸ್, ಪ್ರಬಂಧ, ಸಂಶೋಧನೆ, ಮಾಡಬಹುದು, ಆದರೆ ನಕಲು ಮಾಡಬೇಡಿ. ಕಲಿಯುವುದಕ್ಕಾಗಿ ಎ.ಐ. ಬಳಸಿ. ಒಂದು ಸಾಲಿನಿಂದ ಇಡಿ ವೀಡಿಯೋ ಪೋಸ್ಟರ್ ರಚಿಸಬಹುದು. ಪ್ರಚಲಿತ ಜಗತ್ತಿನಲ್ಲಿ ನಡೆಯುತ್ತಿರುವ ಎ.ಐ. ಅಪಾಯಗಳಾದ ತಂದೆಯ ಧ್ವನಿ ನಕಲು ಮಾಡಿ ಮಗಳಿಂದ ಎ.ಐ. ಮೂಲಕ ಐವತ್ತು ಸಾವಿರ ರೂ.ವಸೂಲಿಯಾಗಿದೆ. ಇನ್ಸ್ಟಾಗ್ರಾಂನಲ್ಲಿ ನಿಮ್ಮ ಫೋಟೋ ತೆಗೆದು ಎಐ. ಬಿಕಿನಿ ಆಪ್ಗಳಲ್ಲಿ ದುರುಪಯೋಗ. ನಕಲಿ ಉದ್ಯೋಗ ಸೃಷ್ಟಿಸಿ ಹಣ ಕೀಳುವುದು. ಇಂತಹ ವಂಚನೆಗಳ ವಿರುದ್ದ ಮೊದಲು ಪರಾಮರ್ಶಿಸಿ ಎಂಎಫ್ಎ. ಆನ್ ಮಾಡಿ, ಸೈಬರ್ ಮೋಸವಾದ ತಕ್ಷಣ 1930 ಗೆ ಕರೆ ಮಾಡಿ. ಎಐ. ಡಿಟೆಕ್ಟರ್ ಬಳಸಿ. ಇಂಟರ್ನೆಟ್ನಲ್ಲಿ ನೀವು ಹಾಕುವ ಪ್ರತಿ ಫೋಟೋ ಕಮೆಂಟ್ ಕಡೆ ಶಾಶ್ವತ ಎಚ್ಚರದಿಂದಿರಿ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಣ್ಣ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮಿ ಇವರುಗಳು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಮಮತಾ ಸಾಹುಕಾರ ವೇದಿಕೆಯಲ್ಲಿದ್ದರು.









