ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 : ವಿಶ್ವದ ಆರಂಭಿಕ ಹಂತದಲ್ಲಿ ಕಬ್ಬಿಣದ ಅದಿರು ಹೇಗೆ ಸೃಷ್ಟಿಯಾಯಿತು ಎಂದರೆ ಮಹಾಸ್ಪೋಟ ಮತ್ತು ನಕ್ಷತ್ರಗಳ ಜನನ ಸಮಯದಲ್ಲಿ ಕೇವಲ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳು ಮಾತ್ರ ಇದ್ದವು. ಈ ಅನಿಲಗಳು ಒಂದಾಗಿ ಮೊದಲ ತಲೆಮಾರಿನ ದೈತ್ಯ ನಕ್ಷತ್ರಗಳು ಸೃಷ್ಟಿಯಾದವು, ನಕ್ಷತ್ರಗಳ ಮಧ್ಯಭಾಗದಲ್ಲಿ ತೀವ್ರವಾದ ಶಾಖ ಮತ್ತು ಒತ್ತಡ ಇರುತ್ತದೆ. ಈ ಶಾಖದಲ್ಲಿ ಹಗುರವಾದ ಧಾತುಗಳು ಒಂದಾಗುತ್ತ ಕೊನೆಗೆ ಕಬ್ಬಿಣ ಸೃಷ್ಟಿಯಾಗುತ್ತದೆ. ಕಬ್ಬಿಣವು ನಕ್ಷತ್ರವೊಂದರ ಒಳಗೆ ಸೃಷ್ಟಿಯಾಗುವ ಅತ್ಯಂತ ಭಾರವಾದ ಮತ್ತು ಸ್ಥಿರವಾದ ಧಾತುವಾಗಿದೆ. ನಕ್ಷತ್ರದ ಇಂಧನ ಮುಗಿದಾಗ, ಅದು ಭೀಕರವಾಗಿ ಸ್ಪೋಟಗೊಳ್ಳುತ್ತದೆ. ಇದನ್ನು “ಸೂಪರ್ ನೋವಾ” ಎನ್ನುತ್ತಾರೆ. ಈ ಸ್ಪೋಟದಿಂದಾಗಿ ನಕ್ಷತ್ರದ ಒಳಗಿದ್ದ ಕಬ್ಬಿಣವು ಇಡೀ ಬ್ರಹ್ಮಾಂಡದಾದ್ಯಂತ ದೂಳು ಮತ್ತು ಅನಿಲದ ರೂಪದಲ್ಲಿ ಹರಡಿತು. ಶತಕೋಟಿ ವರ್ಷಗಳ ನಂತರ, ಈ ಬಾಹ್ಯಾಕಾಶ ಧೂಳು ಮತ್ತು ಅನಿಲಗಳು ಒಂದಾಗಿ ನಮ್ಮ ಸೌರಮಂಡಲ ಮತ್ತು ಭೂಮಿ ರಚನೆಯಾದವು ಭೂಮಿಯ ಕೇಂದ್ರ ಭಾಗಕ್ಕೆ ಜಾರಿತು (core) ಭೂಮಿಯ ಮೇಲ್ಪದರದಲ್ಲಿ ಇದ್ದ ಕಬ್ಬಿಣವು ಆಮ್ಲಜನಕ ಮತ್ತು ನೀರಿನೊಂದಿಗೆ ದೀರ್ಘಕಾಲ ರಾಸಾಯನಿಕ ಪ್ರಕ್ರಿಯೆಗೆ ಒಳಗಾಯಿತು. ಈ ಪ್ರಕ್ರಿಯೆಯಿಂದಾಗಿ ಕಬ್ಬಿಣವು ಆಕ್ಸೈಡ್ಗಳಾಗಿ ಬದಲಾಗಿ ಇಂದು ನಾವು ನೋಡುವ ಕಬ್ಬಿಣದ ಅದಿರು, ಅದಿರಿನ ರೂಪಾಂತರಗೊಂಡಿತು. ನಾವು ಬಳಸುವ ಕಬ್ಬಿಣದ ಅದಿರು ಕೋಟ್ಯಾಂತರ ವರ್ಷಗಳ ಹಿಂದೆ ಸತ್ತ ನಕ್ಷತ್ರಗಳ ಅವಶೇಷವಾಗಿದೆ.
ಕಬ್ಬಿಣವು ಭೂಮಿಯ ಮೇಲೆ ನೇರವಾಗಿ ಶುದ್ಧ ರೂಪದಲ್ಲಿ ಸಿಗುವುದಿಲ್ಲ. ಇದು ಆಮ್ಲಜನಿಕ ಮತ್ತು ಇತರ ಧಾತುಗಳೊಂದಿಗೆ ಸೇರಿ ಖನಿಜ ರೂಪದಲ್ಲಿ ಸಿಗುತ್ತದೆ. ಕಬ್ಬಿಣವು ಹೆಮಟೈಟ್, ಮ್ಯಾಗ್ನ್ಟೈಟ್, ಲಿಮೋನೈಟ್, ಮತ್ತು ಸೈಡರೈಟ್ ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಹೆಮಟೈಟ್ ಇದು ಅತ್ಯುತ್ತಮ ಗುಣಮಟ್ಟದ ಅದಿರು ಇದು ಕೆಂಪು ಬಣ್ಣದಲ್ಲಿರುತ್ತದೆ. ಮ್ಯಾಗ್ನ್ಟೈಟ್ ಇದು ಕಪ್ಪು ಬಣ್ಣದ ಅದಿರು, ಇದರಲ್ಲಿ ಕಾಂತೀಯ (magnetic) ಗುಣ ಇರುತ್ತದೆ. ಲಿಮೋನೈಟ್ ಇದು ಹಳದಿ ಅಥವಾ ಕಂದು ಬಣ್ಣದ ಕಡಿಮೆ ಗುಣಮಟ್ಟದ ಅದಿರು ಮತ್ತು ಸೈಡ್ರೈಟ್ ಇಂದು ಕೂಡ ಕಂದು ಬಣ್ಣದ ಕಾರ್ಬೋನೇಟ್ ಅದಿರು.

ಭೂಮಿಯ ಹೊರಪದರದಲ್ಲಿ ಅತಿ ಹೆಚ್ಚು ಸಿಗುವ ಲೋಹಗಳಲ್ಲಿ ಕಬ್ಬಿಣದ ಅದಿರು ನಾಲ್ಕನೇ ಸ್ಥಾನದಲ್ಲಿದೆ. ಇದು ಪ್ರಾಚೀನ ಕಾಲದ ರೂಪಾಂತರ ಮತ್ತು ಜಲಾವೃತ ಪದರಗಳ ಬಂಡೆ ರೂಪದಲ್ಲಿ ಸಂಗ್ರಹವಾಗಿದೆ.
ಕರ್ನಾಟಕ ಅಂದಾಜು 9,000 ಮಿಲಿಯನ್ ಟನ್ಗೂ ಅಧಿಕ ಕಬ್ಬಿಣ ಅದಿರಿನ ಸಂಪನ್ಮೂಲಗಳಿದ್ದು ಇದು ದೇಶದ ಪ್ರಮುಖ ಖನಿಜಯುಕ್ತ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಅಪಾರ ಪ್ರಮಾಣ ಹೆಮಟೈಟ್ ಮತ್ತು ಮ್ಯಾಗ್ನ್ಟೈಟ್ ಕಚ್ಚಾ ಅದಿರು ಲಭ್ಯವಿದೆ. ನಿರ್ದಿಷ್ಟವಾಗಿ ಭಾರತದ ಒಟ್ಟು ಮ್ಯಾಗ್ನ್ಟೈಟ್ ಅದಿರು ಸಂಪನ್ಮೂಲದಲ್ಲಿ ಸುಮಾರು 72% ರಷ್ಟು ಭಾಗ ಕರ್ನಾಟಕದಲ್ಲಿ ಸಿಗುತ್ತದೆ.















