Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಸ್ಪತ್ರೆಯ ತಂದೆಯ ಶವ, ಮಂಟಪದಲ್ಲಿ ಮಗಳ ಮದುವೆ : ಚಿಕ್ಕಮಗಳೂರಲ್ಲೊಂದು ಹೃದಯವಿದ್ರಾವಕ ಘಟನೆ..!

---Advertisement---

ಚಿಕ್ಕಮಗಳೂರು : ಮಕ್ಕಳ ಮದುವೆ ಅಂದ್ರೆ ಪೋಷಕರಿಗೆ ದೊಡ್ಡ ಕನಸು. ಆ ಕನಸನ್ನ ನನಸು ಮಾಡಿಕೊಳ್ಳುವ ಮುನ್ನವೇ ತಂದೆಯನ್ನ ಕಳೆದುಕೊಂಡರೆ ಆ ನೋವು ಮಗಳಿಗೆ ಸಹಿಸಿಕೊಳ್ಳುವುದೇಗೆ..? ಆದರೆ ತಂದೆಯ ಸಾವನ್ನೇ ಮುಚ್ಚಿಟ್ಟು ಮಗಳ ಮದುವೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ತಂದೆಯ ನಿಧನದ ಸುದ್ದಿ ತಿಳಿಯದೆ ಮಗಳು ಮದುವೆ ಆಗಿದ್ದಾರೆ.

ತರೀಕೆರೆಯ ಚಂದ್ರು ಮಗಳ ಮದುವೆಯನ್ನು ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಅದ್ದೂರಿಯಾಗಿ ಮಾಡಬೇಕೆಂದು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಲಗ್ನ ಪತ್ರಿಕೆ ಕೊಟ್ಟು ಬರುವಾಗ ತಂದೆ ಚಂದ್ರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಂದ್ರು ನಿಧನರಾಗಿದ್ದು, ಮಗಳಿಗಾಗಲೀ, ಪತ್ನಿಗಾಗಲಿ ವಿಚಾರವನ್ನ ತಿಳಿಸದೆ ಮದುವೆ ಮಾಡಿದ್ದಾರೆ. ಇಂದು ದೀಕ್ಷಿತಾ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ನಿನ್ನೆ ಹುಲಿತಿಮ್ಮಾಪುರದಿಂದ ಬರುವಾಗ ಅಪಘಾತವಾಗಿತ್ತು. ಆದರೆ ಈ ವಿಚಾರವನ್ನು ಅಮ್ಮ – ಮಗಳಿಗೆ ಬೇರೆ ರೀತಿಯೇ ಹೇಳಿದ್ದರು.

ಮದುವೆ ಕೆಲಸದಲ್ಲಿ ಓಡಾಡಿ ಓಡಾಡಿ ನಿಮ್ಮ ತಂದೆ ಸುಸ್ತಾಗಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಮದುವೆ ಮುಗಿಯಲಿ ಎಂದಿದ್ದಾರೆ. ಮದುವೆ ಮುಗಿದ ಮೇಲೆ ಬರುತ್ತಾರೆ. ಮದುವೆ ಮುಗಿದ ಮೇಲೆ ನಾವೇ ನೋಡಿಕೊಂಡು ಬರೋಣಾ ಎಂದು ಸುಳ್ಳು ಹೇಳಿ ದೀಕ್ಷಿತಾಳ ಮದುವೆ ಮಾಡಿದ್ದಾರೆ. ಆಮೇಲಷ್ಟೇ ಅಮ್ಮ, ಮಗಳಿಗೆ ಸತ್ಯ ಹೇಳಿದ್ದಾರೆ. ಇದು ಮಗಳಿಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಅಪ್ಪನ ಕನಸೇ ನನ್ನ ಮದುವೆಯಾಗಿತ್ತು ಎಂದು ಗೊತ್ತಿದ್ದ ಮಗಳು, ಈಗ ತಂದೆಯೇ ಇಲ್ಲ ಎಂಬ ಸತ್ಯವನ್ನ ಸಹಿಸಿಕೊಳ್ಳಲಾಗುತ್ತಿಲ್ಲ. ಮದುವೆಯ ಮನೆಯಲ್ಲಿದ್ದ ಖುಷಿ ಈಗ ಮಾಯವಾಗಿ ಸೂತಕದ ಛಾಯೆ ಆವರಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment