Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನ್ನದ ನೀರನ್ನು ಚೆಲ್ಲಬೇಡಿ: ಕುಚ್ಚಿಗೆ ಅಕ್ಕಿ ಬಸಿದ ನೀರಿನ ಅದ್ಭುತ ಪ್ರಯೋಜನಗಳು

---Advertisement---

ವಿಶೇಷ ಲೇಖನ :
ಡಾ.ನವೀನ್ ಬಿ ಸಜ್ಜನ್
ಪ್ರೊಫೆಸರ್ ಮತ್ತು HOD,
ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು
ಸುಶ್ರುತ ಆರ್ಯುವೇದ ಆಸ್ಪತ್ರೆ
ಚಿತ್ರದುರ್ಗ – 577501
Mob : 89710 02744

ಸುದ್ದಿಒನ್

ದಿನಾ ಕೆಂಪಕ್ಕಿ ಬೇಯಿಸಿ ಬಸಿದ ನೀರು ಕುಡಿದ್ರೆ, ಕಾಯಿಲೆಯ ಯಾವುದೇ ಭಯವಿಲ್ಲ ಕೆಂಪಕ್ಕಿ ಬೇಯಲು ಹೆಚ್ಚು ಸಮಯ ಬೇಕು. ಆದರೆ ಬೆಂದ ಬಳಿಕ ಬಸಿದ ನೀರನ್ನು ಸಾಮಾನ್ಯವಾಗಿ ನಾವು ಚೆಲ್ಲಿಬಿಡುತ್ತೇವೆ. ಆದರೆ ಈ ನೀರು ಸಹಾ ಆರೋಗ್ಯಕರವಾಗಿದೆ.

ಕರಾವಳಿಯ ಬದಿ ಕುಚ್ಚಿಗೆ ಅಕ್ಕಿಯ (ಕೆಂಪಕ್ಕಿ ಅಥವಾ ಬಾಯಿಲ್ಡ್ ರೈಸ್) ಅನ್ನವನ್ನೇ ಹೆಚ್ಚಾಗಿ ಊಟಕ್ಕೆ ಬಳಸಲಾಗುತ್ತದೆ. ಕುಚ್ಚಿಗೆ ಅಕ್ಕಿ ಅಂದರೆ ದಪ್ಪ ಜಾತಿಯ ಭತ್ತವನ್ನು ಮೊದಲು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಇದರ ಹೊಟ್ಟು ಒಡೆದು ಅಕ್ಕಿ ಹೊರಬರುವಂತೆ ಮಾಡಲಾಗುತ್ತದೆ. ಬಳಿಕ ಬಿಸಿಲಿಗೆ ಹರಡಿ ದಿನದಲ್ಲಿ ಹಲವಾರು ಬಾರಿ ಮಗುಚಿ ಎಲ್ಲಾ ಬದಿಗಳೂ ಚೆನ್ನಾಗಿ ಒಣಗುವಂತೆ ಮಾಡಿ, ಬಳಿಕ ಇದನ್ನು ಅಕ್ಕಿ ಮಿಲ್ ಗಳಲ್ಲಿ ಹಲ್ಲರ್ ಎಂಬ್ ಯಂತ್ರದ ಮೂಲಕ ಹೊಟ್ಟನ್ನು ನಿವಾರಿಸಿ ಕೊಂಚ ಪಾಲಿಶ್ ಮಾಡಲಾಗುತ್ತದೆ. ಇದೇ ಕುಚ್ಚಿಗೆ ಅಕ್ಕಿ. ಈ ಅಕ್ಕಿಯ ಮಹತ್ವವೆಂದರೆ ಬಿಳಿ ಅಕ್ಕಿಯಲ್ಲಿ ಬೇಯಿಸುವುದರಿಂದ ನಷ್ಟವಾಗುವ ಪೋಷಕಾಂಶಗಳು ಇದರಲ್ಲಿ ನಷ್ಟವಾಗುವುದಿಲ್ಲ. ಅಲ್ಲದೇ ಈ ಅನ್ನ ಪ್ಜೀರ್ಣಿಸಲು ಕೂಡಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಶ್ರಮಜೀವಿಗಳು ಕುಚ್ಚಿಗೆ ಅಕ್ಕಿಯನ್ನೇ ಬಯಸುತ್ತಾರೆ. ಈ ಅನ್ನ ಊಟ ಮಾಡಿ ಕೆಲಸಕ್ಕೆ ಹೋದರೆ ಇಡಿಯ ದಿನದ ಕೆಲಸದಲ್ಲಿ ಆಯಾಸವೇ ಗೊತ್ತಾಗುವುದಿಲ್ಲ.

ನಮ್ಮಲ್ಲಿ ಹೆಚ್ಚಿನವರು ಪ್ರೆಶರ್ ಕುಕ್ಕರ್‌ಗಳು ಮತ್ತು ಎಲೆಕ್ಟ್ರಿಕ್ ಕುಕ್ಕರ್‌ಗಳಲ್ಲಿ ಕುಚ್ಚಿಗೆ ಅಕ್ಕಿಯನ್ನು ಬೇಯಿಸುತ್ತಾರೆ ಮತ್ತು ಅಕ್ಕಿ ಬೇಯಿಸಿದ ಬಳಿಕ ಬಸಿದ ನೀರನ್ನು ಕುಡಿಯುವ ಅಭ್ಯಾಸ ನಮಗೆ ಇಲ್ಲದಿರುವುದಕ್ಕೆ ಇದು ಕಾರಣವಾಗಿದೆ. ವಾಸ್ತವವಾಗಿ, ಅಕ್ಕಿ ಬೇಯಿಸಿದ ಬಳಿಕ ಬಸಿದ ನೀರಿನ ಆರೋಗ್ಯಕರ ಪ್ರಯೋಜನಗಳು ನಮಗೆ ತಿಳಿದಿಲ್ಲ.
ಅಕ್ಕಿಯನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಬೇಯಿಸಿ ಬಸಿದ ಬಳಿಕ ಉಳಿದ ನೀರನ್ನು ಸಂಗ್ರಹಿಸಿ ಊಟದ ಬಳಿಕ ಸೇವಿಸುವುದು ಕೆಲವು ಸಂಪ್ರದಾಯಗಳಲ್ಲಿ ಇಂದಿಗೂ ಪ್ರಚಲಿತವಾಗಿದೆ. ಕುಚ್ಚಿಗೆ ಅನ್ನದಷ್ಟೇ ಅನ್ನ ಬಸಿದ ನೀರು ಸಹಾ ಸಂಪೂರ್ಣವಾಗಿ ಪೌಷ್ಟಿಕವಾಗಿದೆ. ಅಕ್ಕಿಯನ್ನು ಬಹುತೇಕ ಭಾರತ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಸೇವಿಸಲಾಗುತ್ತದೆ.

 

ಕುಚ್ಚಿಗೆ ಅಕ್ಕಿ ಬೇಯಿಸಿದ ನೀರಿನ ಪ್ರಯೋಜನಗಳು :

ಶಕ್ತಿದಾಯಕ : ಬೇಯಿಸಿದ ಅಕ್ಕಿ ಯನ್ನು ಬಸಿದ ನೀರನ್ನು ಕುಡಿಯುವುದು ನಿಜವಾಗಿಯೂ ಒಳ್ಳೆಯದು ಏಕೆಂದರೆ ಅದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಭಾರತದ ಎಷ್ಟೋ ರಾಜ್ಯಗಳಲ್ಲಿ, ರೈತರು ಸಾಮಾನ್ಯವಾಗಿ ಹೊಲಗಳಲ್ಲಿ ತಮ್ಮ ಶ್ರಮದಾಯಕ ಕೆಲಸವನ್ನು ಪ್ರಾರಂಭಿಸುವ ಮೊದಲು ಬೇಯಿಸಿದ ಅಕ್ಕಿ ನೀರನ್ನು ಕುಡಿಯುತ್ತಾರೆ. ಹೊಲಗಳಲ್ಲಿ ಕಠಿಣ ಪರಿಶ್ರಮದ ನಡುವೆಯೂ ಅವರು ದಿನವಿಡೀ ಕೆಲಸ ಮಾಡಲು ಇವರಿಗೆ ಈ ನೀರಿನಿಂದ ಶಕ್ತಿ ದೊರಕುತ್ತದೆ.

 

ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ : ನಮ್ಮ ದೇಹದ ಉಷ್ಣತೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಕುಚ್ಚಿಗೆ ಅನ್ನ ಬಸಿದ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣದಿಂದ ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ದೇಹದ ಶಾಖವನ್ನು ತಡೆದು ಕೊಳ್ಳಲು ದಿನವೂ ಕೊಂಚ ಕುಚ್ಚಿಗೆ ಅನ್ನ ಬಸಿದ ನೀರನ್ನು ಕುಡಿಯುವುದು ಒಳ್ಳೆಯದು.

 

ಕ್ಯಾನ್ಸರ್ ತಡೆಗಟ್ಟುತ್ತದೆ – ಕುಚ್ಚಿಗೆ ಅನ್ನ ಬಸಿದ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವಾರು ಬಗೆಯ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆಯನ್ನು ತಡೆಗಟ್ಟಬಹುದು. ವಿಶೇಷವಾಗಿ ಕರುಳು ಕ್ಯಾನ್ಸರ್ ಎದುರಾಗುವುದನ್ನು ತಡೆಗಟ್ಟುತ್ತದೆ.

ಮಲಬದ್ದತೆಯಾಗದಂತೆ ತಡೆಗಟ್ಟುತ್ತದೆ – ಕುಚ್ಚಿಗೆ ಅನ್ನ ಬಸಿದ ನೀರಿನಲ್ಲಿ ಈ ನಾರಿನಂಶ ಅತಿ ಹೆಚ್ಚಿರುತ್ತದೆ. ಒಂದು ವೇಳೆ ನೀವು ಮಲ ಬದ್ಧತೆಯಿಂದ ಬಳಲುತ್ತಿದ್ದರೆ, ಕೆಲವು ದಿನಗಳವರೆಗೆ ಕುಚ್ಚಿಗೆ ಅನ್ನ ಬಸಿದ ನೀರನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಶೀಘ್ರವೇ ಉಪಶಮನ ದೊರಕುತ್ತದೆ.
ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು ಲಭಿಸುತ್ತವೆ – ಕುಚ್ಚಿಗೆ ಅನ್ನ ಬಸಿದ ನೀರಿನಲ್ಲಿಯೂ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಕರಗಿರುತ್ತವೆ. ನೀವು ಕಾರ್ಬೋಹೈಡ್ರೇಟ್‌ಗಳ ಆರೋಗ್ಯಕರ ಮೂಲವನ್ನು ಹುಡುಕುತ್ತಿದ್ದರೆ, ಕುಚ್ಚಿಗೆ ಅನ್ನ ಬಸಿದ ನೀರನ್ನು ಕುಡಿಯುವುದನ್ನು ಆಯ್ದುಕೊಳ್ಳಬಹುದು.

 

ಬಿಸಿಲಿನ ಝಳದಿಂದ ರಕ್ಷಣೆ : ಕುಚ್ಚಿಗೆ ಅನ್ನ ಬಸಿದ ನೀರಲ್ಲಿ ಓರೈಜನಾಲ್ (oryzanol) ಎಂಬ ಪೋಷಕಾಂಶವೂ ಇದೆ. ಇದು ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಚರ್ಮವು ಸೂರ್ಯನ ಶಾಖವನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಕುಚ್ಚಿಗೆ ಅನ್ನ ಬಸಿದ ನೀರನ್ನು ಕುಡಿಯುವ ಜೊತೆಗೇ ಬಿಸಿಲಿಗೆ ಒಡ್ಡಿಕೊಳ್ಳುವ ತ್ವಚೆಗೆ ಹಚ್ಚಿಕೊಳ್ಳುವ ಮೂಲಕವೂ ಈ ಕಿರಣಗಳಿಂದ ರಕ್ಷಣೆ ಪಡೆಯಬಹುದು. ವಾಸ್ತವವಾಗಿ, ಕುಚ್ಚಿಗೆ ಅನ್ನ ಬಸಿದ ನೀರನ್ನು ಸೌಂದರ್ಯವರ್ಧಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಅನೇಕ ತ್ವಚೆ ಮತ್ತು ಕೂದಲ ರಕ್ಷಣೆಯ ಸೌಂದರ್ಯ ಪ್ರಸಾದನಾ ವಿಧಾನಗಳಲ್ಲೂ ಸೇರಿಸಲಾಗಿದೆ.

 

 

ಅಕ್ಕಿ ಬಸಿದ ನೀರನ್ನು ಸಂಗ್ರಹಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳು
ಸಾಮಾನ್ಯವಾಗಿ ಕುಚ್ಚಿಗೆ ಅಕ್ಕಿಗೆ ಹೆಚ್ಚಿನ ಉಪ್ಪು ಬೇಕಾಗುತ್ತದೆ. ಆದರೆ ಈ ಉಪ್ಪಿನಂಶ ಅನ್ನ ಹೀರಿಕೊಳ್ಳುವುದಕ್ಕಿಂತಲೂ ಬಸಿದ ನೀರಿನಲ್ಲಿ ಹೆಚ್ಚು ಉಳಿದುಕೊಳ್ಳುತ್ತದೆ. ಆದ್ದರಿಂದಲೇ ಅಕ್ಕಿಯ ರುಚಿಗಾಗಿ ಹೆಚ್ಚಿನ ಉಪ್ಪನ್ನು ಸೇರಿಸುತ್ತಾರೆ. ಪರಿಣಾಮವಾಗಿ ಬಸಿದ ಅನ್ನದ ನೀರು ಅತಿ ಹೆಚ್ಚು ಉಪ್ಪಿನಂಶ ಹೊಂದಿರುತ್ತದೆ. ಒಂದು ವೇಳೆ ಕುಡಿಯುವ ಸಲುವಾಗಿ ಈ ನೀರನ್ನು ಸಂಗ್ರಹಿಸುವುದಾದರೆ ಅಕ್ಕಿ ಬೇಯಿಸುವಾಗ ಕಡಿಮೆ ಉಪ್ಪನ್ನು ಸೇರಿಸಬೇಕು. ಇದರಿಂದ ಅನ್ನ ಚಪ್ಪೆಯಾಗುತ್ತದೇನೋ ನಿಜ, ಇದನ್ನು ಸಾರಿಗೆ ಕೊಂಚ ಹೆಚ್ಚು ಉಪ್ಪು ಬೆರೆಸಿ ಅಥವಾ ಊಟ ಮಾಡುವಾಗ ಉಪ್ಪು ಚಿಮುಕಿಸಿಕೊಂಡು ಸೇವಿಸಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...