ಸುದ್ದಿಒನ್, ಚಿತ್ರದುರ್ಗ, ಜೂನ್. 28 : ನಗರದ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನಾಳೆ (ಜೂನ್. 29 ರಂದು) ಉಚಿತ ತಪಾಸಣೆ ಮತ್ತು ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ
ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು ಮತ್ತು ಸೌಲಭ್ಯಗಳು:
ಬಂಜೆತನ ನಿವಾರಣೆ: ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಬಂಜೆತನ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ.
ಋತುಚಕ್ರದ ಸಮಸ್ಯೆಗಳು: ಆನಿಯಮಿತ ಋತುಚಕ್ರ, ಋತುಸ್ರಾವವಾಗದಿರುವುದು, ತೀವ್ರವಾದ ಮುಟ್ಟಿನ ನೋವು, ಭಾರೀ ರಕ್ತಸ್ರಾವ ಹಾಗೂ ಅಲ್ಪ ರಕ್ತಸ್ರಾವದ ಸಮಸ್ಯೆಗಳಿಗೆ ಪರಿಹಾರ.
ಹಾರ್ಮೋನ್ ಹಾಗೂ ಲೈಂಗಿಕ ತೊಂದರೆಗಳು: ಹಾರ್ಮೋನ್ ಅಸಮತೋಲನ, ಪಿಸಿಒಡಿ, ಥೈರಾಯ್ಡ್ ಗ್ರಂಥಿ ಸಮಸ್ಯೆಗಳು ಮತ್ತು ಸ್ತ್ರೀ-ಪುರುಷರ ಲೈಂಗಿಕ ಸಂಬಂಧಿತ ತೊಂದರೆಗಳಿಗೆ ಚಿಕಿತ್ಸೆ.
ಉಚಿತ ಕ್ಯಾನ್ಸರ್ ತಪಾಸಣೆ: ಗರ್ಭಕೋಶದ ಕೊರಳಿನ ಕ್ಯಾನ್ಸರ್ ಪತ್ತೆ ಹಚ್ಚುವ ಉಚಿತ ಸ್ಕ್ರೀನಿಂಗ್ ಟೆಸ್ಟ್ (ಪ್ಯಾಪ್ ಸ್ಮಿಯರ್) ಸೌಲಭ್ಯ.
ಇತರ ಸ್ತ್ರೀರೋಗ ಸಮಸ್ಯೆಗಳು: ಗರ್ಭಾಶಯ ಮತ್ತು ಅಂಡಾಶಯದ ಗಡ್ಡೆಗಳು/ಸೋಂಕು, ಬಿಳಿಮುಟ್ಟು, ಕೆಳಹೊಟ್ಟೆ ನೋವು, ರಜೋನಿವೃತ್ತಿಯ ಸಮಸ್ಯೆಗಳು ಹಾಗೂ ಮೂತ್ರಾಶಯದ ಇಳಿಮುಖದ ತೊಂದರೆಗಳಿಗೆ ವಿಶೇಷ ಚಿಕಿತ್ಸೆ.
ಮಾನಸಿಕ ಆರೋಗ್ಯ ಮತ್ತು ಯೋಗ: ಋತುಚಕ್ರ ಹಾಗೂ ಹಾರ್ಮೋನ್ ಬದಲಾವಣೆಯಿಂದ ಉಂಟಾಗುವ ಮಾನಸಿಕ ಒತ್ತಡಕ್ಕೆ ಸಮಾಲೋಚನೆ ಮತ್ತು ಯೋಗ ತರಬೇತಿ.
ನುರಿತ ವೈದ್ಯರ ಸಮಾಲೋಚನೆ:
ಈ ಎಲ್ಲಾ ಸಮಸ್ಯೆಗಳಿಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯ ಪ್ರಾಧ್ಯಾಪಕರಾದ ಡಾ. ಸುಪ್ರಿಯ ಪ್ರಶಾಂತ್ ಎಂ. ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಸುಶ್ಮಿತಾ ಎಸ್.ಹೆಚ್. ಅವರ ನೇತೃತ್ವದಲ್ಲಿ ನುರಿತ ವೈದ್ಯರಿಂದ ಸಮಾಲೋಚನೆ ಮತ್ತು ಚಿಕಿತ್ಸೆ ದೊರೆಯಲಿದೆ.
ಆಸ್ಪತ್ರೆಯ ವಿಳಾಸ: ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,
ಒನಕೆ ಓಬವ್ವ ಸ್ಟೇಡಿಯಂ ಹಿಂಭಾಗ, ಚಿತ್ರದುರ್ಗ.
ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ:
08194-234844 / 2344866













