ಚಿತ್ರದುರ್ಗ. ಆಗಸ್ಟ್15: 80ನೇ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದಲ್ಲಿ ಶನಿವಾರ ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ ರಾಷ್ಟ್ರ ಧ್ವಜರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳಾದ ಎಂ.ಅವಿನಾಶ್, ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್, ಎಂ.ಜೆ.ಬೋರೇಶ, ಜಿ.ಪಾಲಯ್ಯ, ನಿವೃತ್ತ ನೌಕರ ಎಸ್.ಚಂದ್ರಶೇಖರ್, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿ.ಪಿ.ಮಾರುತಿ ಇದ್ದರು.










